ಬೆಂಗಳೂರು: ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್ 2 ರಲ್ಲಿ ಕೆಲವರು ಸಾಮೂಹಿಕವಾಗಿ ನಮಾಜ್ ಮಾಡುತ್ತಿರುವುದು ಸಾಮಾಜೀಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಕುಟುಂಬಸ್ಥರು ಹಾಗೂ ಸಹ ಸಂಘಡಿಗರು ಹಜ್ ಯಾತ್ರಿಕರನ್ನು ಬೀಳ್ಕೊಡಲು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಇದರಲ್ಲಿ ರೈಲ್ವೆ ನಿಲ್ದಾಣದ ಹೂರ ಅಂಗಳದಲ್ಲಿ ಕೆಲವರು ನಮಾಜ್ ಮಾಡುತ್ತಿದ್ದರು ಎನ್ನಲಾಗುತ್ತಿದೆ.
ಸಾರ್ವಜನೀಕವಾಗಿ ನಡೆದಾಡುವ ಸ್ಥಳಗಳಲ್ಲಿ ನಮಾಜ್ ಮಾಡುವುದಕ್ಕೆ ಅವಕಾಶ ಮಾಡಿಕೊಟದ್ದು ಯಾರು? ಎಂದು ಹಲವು ಪ್ರಶ್ನೆಗಳಿಗೆ ಮತ್ತು ತೀವ್ರ ಆಕ್ರೋಶಕ್ಕೆ ದಾರಿಮಾಡಿದೆ. ಇದೆ ವಿಷಯವಾಗಿ ಹಿಂದೆ ಹಲವಾರು ವಿವಾದಗಳು ಚರ್ಚೆಯಾಗಿದ್ದವು ಮತ್ತು ಜನಗಳಿಂದ ಗಲಭೆಗಳು ಉಂಟಾಗಿದ್ದವು.
ಆದರು ಇವೆಲ್ಲವನ್ನು ಲೆಕ್ಕಿಸದೇ ಮತ್ತೇ ಹಿಂದೂಗಳನ್ನ ಕೇರಳಿಸುವಂತಹ ಘಟನೆಳಿಗೆ ಆಗಾಗ ದಾರಿಮಾಡಿಕೊಡುತ್ತಲೇ ಇರುತ್ತಾರೆ. ಇದೆಲ್ಲವನ್ನ ಗಮನಿಸಿದರೇ ಬಹುಶಃ ಕೇರಳಿಸುವ ಉದ್ದೇಶವನ್ನೆ ಹೊಂದಿರುವಂತೆ ಕಾಣುತ್ತದೆ. ಇದೆಲ್ಲವನ್ನ ಬಿಜೆಪಿ ತೀವ್ರವಾಗಿ ಖಂಡಿಸಿದೆ.
ಬೆಂಗಳೂರು ವಿಮಾನ ನಿಲ್ದಾಣ ಆವರಣದಲ್ಲಿ ನಮಾಜ್ ಮಾಡುವುದನ್ನು ಕರ್ನಾಟಕ ಬಿಜೆಪಿ ಟೀಕಿಸಿದ್ದು, ಹೆಚ್ಚಿನ ಭದ್ರತಾ ವಲಯದಲ್ಲಿ ಇಂತಹ ಕೃತ್ಯಕ್ಕೆ ಹೇಗೆ ಅವಕಾಶ ನೀಡಲಾಗಿದೆ ಎಂದು ಪ್ರಶ್ನಿಸಿದೆ. ಪಕ್ಷದ ವಕ್ತಾರ ವಿಜಯ್ ಪ್ರಸಾದ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಈ ಅನುಮೋದನೆಯ ಬಗ್ಗೆ ಸ್ಪಷ್ಟೀಕರಣವನ್ನು ಕೋರಿದ್ದಾರೆ.
ನಂತರ ಸರಿಯಾದ ಅನುಮತಿ ಪಡೆದು ಆರ್ಎಸ್ಎಸ್ ಪಾಠ ಸಂಚಾಲನೆ ನಡೆಸಿದಾಗ ಸರ್ಕಾರ ಏಕೆ ಆಕ್ಷೇಪಿಸುತ್ತದೆ, ಆದರೆ ನಿರ್ಬಂಧಿತ ಸಾರ್ವಜನಿಕ ಪ್ರದೇಶದಲ್ಲಿ ಇಂತಹ ಚಟುವಟಿಕೆಗಳು ನಡೆದಿದ್ದಾಗ ಕಣ್ಣು ಮುಚ್ಚಿ ಕುಳಿತಿದೆ ಏಕೆ?” ಎಂದು ಭಾನುವಾರ ರಾತ್ರಿ ಟ್ವೀಟ್ ಮಾಡಿದ್ದಾರೆ.
ವಿಜಯ್ ಪ್ರಸಾದ್, ತಮ್ಮ ಆಕ್ಷೇಪವನ್ನು ಪುನರುಚ್ಚರಿಸಿದರು. “ಮುಖ್ಯಮಂತ್ರಿ ಮತ್ತು ಐಟಿ ಸಚಿವರು ಈ ಕೃತ್ಯವನ್ನು ಅನುಮೋದಿಸುತ್ತಾರೆಯೇ ಎಂದು ನಾನು ಕೇಳಲು ಬಯಸುತ್ತೇನೆ. ಈ ವ್ಯಕ್ತಿಗಳು ಉನ್ನತ ಭದ್ರತಾ ವಿಮಾನ ನಿಲ್ದಾಣ ವಲಯದಲ್ಲಿ ನಮಾಜ್ ಮಾಡಲು ಮುಂಚಿತವಾಗಿ ಅನುಮತಿ ಪಡೆದಿದ್ದರೇ… ಇದು ಗಂಭೀರ ಭದ್ರತಾ ಕಾಳಜಿಯನ್ನು ಉಂಟುಮಾಡುವುದಿಲ್ಲವೇ? ಈ ದ್ವಂದ್ವ ನೀತಿ ಏಕೆ? ಇದು ಸ್ವೀಕಾರಾರ್ಹವೇ?” ಎಂದು ಕೇಳಿದರು.
ಭಾರಿ ಭದ್ರತೆ ಇರುವ ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 ರಲ್ಲಿ ಪೂಲೀಸರು ಇದನ್ನ ತಡೆದಿಲ್ಲ, ಜೊತೆಗೆ ಮಾಹಿತಿ ತಿಳಿದು ಅಲ್ಲಿರುವ ಅಧಿಕಾರುಗಳು ತಡೆಯಲು ಪ್ರಯತ್ನಿಸಲಿಲ್ಲ. ಇದು ಕಾಂಗ್ರೆಸ್ ಸರ್ಕಾರದ ದ್ವಂದ್ವ ನೀತಿಯನ್ನು ತೋರಿಸುತ್ತದೆ. ಮತ್ತು ಇದು ಒಂದು ಸಮುದಾಯಕ್ಕೆ ಸ್ಪಷ್ಟವಾಗಿ ಓಲೈಕೆ ಮಾಡುವುದಾಗಿದೆ” ಎಂದು ಅವರು ಆರೋಪಿಸಿದರು.
ಬಿಜೆಪಿಯಿಂದ ಸ್ಪಷ್ಟನೆ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸಂಘಟನೆಯ ನೋಂದಣಿ ಸ್ಥಿತಿಯ ಬಗ್ಗೆ ನೀಡಿದ ಹೇಳಿಕೆಗಳ ಕುರಿತು ಕೇಳಿದಾಗ, ಸಿದ್ದರಾಮಯ್ಯ ಪ್ರತಿಕ್ರಿಯಿಸಲು ನಿರಾಕರಿಸಿದರು. ಆದರೆ “ನಾವು ಆದೇಶದಲ್ಲಿ ಎಲ್ಲಿಯೂ ಆರ್‌ಎಸ್‌ಎಸ್ ಬಗ್ಗೆ ನಿರ್ದಿಷ್ಟವಾಗಿ ಉಲ್ಲೇಖಿಸಿಲ್ಲ.
ಸಂಘಟನೆಗಳು ಕಾರ್ಯಕ್ರಮ ನಡೆಸಲು ಜಿಲ್ಲಾ ಅಧಿಕಾರಿಗಳಿಂದ ಅನುಮತಿ ಪಡೆಯಬೇಕು. ಆದರೆ ಅವರು ಆರ್‌ಎಸ್‌ಎಸ್ ಬಗ್ಗೆಯೇ ಅಂದುಕೊಂಡರೆ ನಾವು ಏನು ಮಾಡಬೇಕು?” ಎಂದು ಸುದ್ದಿಗಾರರಿಗೆ ತಿಳಿಸಿದ್ದರು. ಯಾವುದೇ ನೋಂದಣಿಯನ್ನ ಪಡಿಯದೇ ಆರ್ ಎಸ್ ಎಸ್ ಕಾರ್ಯನಿರ್ವಹಿಸುತ್ತೆ, ಎಂದು ಟೀಕಿಸಿದ ಕಾಂಗ್ರೆಸ್ ನಾಯಕರನ್ನು ಪರೋಕ್ಷವಾಗಿ ಟೀಕಿಸಿದ ಭಾಗವತ್, ಹಿಂದೂ ಸಂಘಟನೆಯು ವ್ಯಕ್ತಿಗಳ ಸಂಘವಾಗಿ ಗುರುತಿಸಲ್ಪಟ್ಟಿದೆ ಎಂದು ವಿವರಿಸಿದ್ದರು.
ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಬಿಜೆಪಿ ವಿಮಾನ ನಿಲ್ದಾಣದಂತಹ ಸೂಕ್ಷ್ಮ ಪ್ರದೇಶದಲ್ಲಿ ಧಾರ್ಮಿಕ ಆಚರಣೆಗಳಿಗೆ ಅವಕಾಶ ನೀಡುವದರ ಕುರಿತು ಪ್ರಶ್ನೆ ಎತ್ತಿದೆ. ಈ ವಿಚಾರದಲ್ಲಿ ಸರ್ಕಾರದ ಸ್ಪಷ್ಟ ನಿಲುವು ಏನಾಗಬಹುದು ಎನ್ನುವ ಕುತೂಹಲಕ್ಕೆ ದಾರಿಮಾಡಿದೆ. ಭದ್ರತೆ ಮತ್ತು ಧಾರ್ಮಿಕ ಸ್ವಾತಂತ್ರ್ಯದ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಸರ್ಕಾರಕ್ಕೆ ಇದೂಂದು ಎದುರಿಸಬೇಕಾದ ಸವಾಲಾಗಿದೆ.
