ಬಳ್ಳಾರಿ: ಸಿಎಂ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ. ಅದೆಲ್ಲ ಹೈಕಮಾಂಡ್ ಗೆ ಬಿಟ್ಟದ್ದು. ಸಿಎಂ ಡಿಸಿಎಂ ಬ್ರೇಕ್ ಫಾಸ್ಟ್ ಮಾಡಿದ್ರೇ ತಪ್ಪೇನು ಎಂದು ಸಚಿವ ಭೈರತಿ ಸುರೇಶ ಹೇಳಿದರು. ಬಳ್ಳಾರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಸಿಎಂ ಡಿಸಿಎಂ ಇಬ್ಬರೂ ನಮ್ಮ ಪಕ್ಷದವರೇ. ಬ್ರೇಕ್ ಫಾಸ್ಟ್ ಮಾಡೋದ್ರಲ್ಲಿ ಏನಿದೇ ವಿಶೇಷ?
ಬಿಜೆಪಿ ಅಥವಾ ಜೆಡಿಎಸ್ ನವರ ಮನೆಗೆ ಹೋದ್ರೆ ಚರ್ಚೆ ಮಾಡಬೇಕು. ನಮ್ಮವರ ಮನೆಗೆ ಹೋಗೋದ್ರಲ್ಲಿ ಏನೂ ವಿಶೇಷವಿಲ್ಲ ಎಂದರು. ಈ ರೀತಿಯ ಊಟೋಪಚಾರ ನೂರಾರು ಬಾರಿ ನಡೆದಿದೆ. ಸಿಎಂ, ಡಿಸಿಎಂ ಬ್ರೇಕ್ ಫಾಸ್ಟ್ ವಿಚಾರಕ್ಕೆ ಬೇರೆ ಅರ್ಥ ಕಲ್ಪಿಸೋದು ಬೇಕಿಲ್ಲ. ಈ ಹಿಂದೆ ಸಾಕಷ್ಟು ಬಾರಿ ಸಿಎಂ ಡಿಸಿಎಂ ಬ್ರೇಕ್ ಪಾಸ್ಟ್ ಮಾಡಿದ್ದಾರೆ. ಆ ಪೋಟೋ ನನ್ನ ಬಳಿ ಇವೆ, ಇದರಲ್ಲಿ ವಿಶೇಷ ಇಲ್ಲ. ನಾನು ಕೂಡ ಅವರ ಜೊತೆ ಊಟಕ್ಕೆ ಸಾಕಷ್ಟು ಬಾರಿ ಹೋಗಿರುವೆ.
ಬ್ರೇಕ್ ಪಾಸ್ಟ್ ನಲ್ಲಿ ಯಾವುದೇ ಮಹತ್ವ ಇಲ್ಲ, ಇದು ಕೇವಲ ಮಾದ್ಯಮಗಳ ಚರ್ಚೆ ಸಿಎಂ ಬದಲಾವಣೆ, ಸಚಿವ ಸಂಪುಟ ವಿಸ್ತರಣೆ ಎಲ್ಲಾ ಹೈಕಮೆಂಡ್ ಗೆ ಬಿಟ್ಟದ್ದು ಎಂದರು. ಸಿಎಂ ಸಿದ್ದರಾಮಯ್ಯ ಮತ್ತು ವೇಣುಗೋಪಾಲ ದಕ್ಷಿಣ ಕನ್ನಡ ಜಿಲ್ಲೆಗೆ ಹೊಗ್ತಿರೋ ವಿಚಾರ ನನಗೆ ಗೊತ್ತಿಲ್ಲ. ಸಿಎಂ ಮಂಗಳೂರು ಹೋಗೋದರಲ್ಲಿ ವಿಶೇಷ ಇಲ್ಲ ಎಂದ ಭೈರತಿ ಸುರೇಶ ಹೇಳಿದರು. ಸಿಎಂ ಬದಲಾವಣೆ ಬಗ್ಗೆ ಅಜಯ್ ಸಿಂಗ್ ಹೇಳಿಕೆ ವಿಚಾರಕ್ಕೆ ಸಚಿವ ಭೈರತಿ ಸುರೇಶ ಪ್ರತಿಕ್ರಿಯಿಸಿ,
ಅಜಯ್ ಸಿಂಗ್ ಮಾತನ್ನ ಮಾದ್ಯಮದವರು ಕನ್ಫ್ಯೂಷ್ ಮಾಡಿಕೊಂಡಿದ್ದಾರೆ. ಅಜಯ್ ಸಿಂಗ್ ರಿಷಫಲ್ ಅಗ್ತದೆ ಎಂದು ಹೇಳಿದ್ದಾರೆ. ಅವರೂ ಕೂಡ ಮಂತ್ರಿ ಆಕಾಂಕ್ಷಿ, ಹೀಗಾಗಿ ಆ ರೀತಿ ಹೇಳಿದ್ದಾರೆ. ಸಿಎಂ ಬದಲಾವಣೆ ಬಗ್ಗೆ ಹೈಕಮೆಂಡ್ ತೀರ್ಮಾನ ಮಾಡ್ತದೆ. ನಾನು ಮತ್ತೊಮ್ಮೆ ಮಂತ್ರಿಯಾಗೋದು ಕೂಡ ಹೈಕಮೆಂಡ್ ಗೆ ಬಿಟ್ಟ ವಿಚಾರ. ನಾನು ಸೇರಿದಂತೆ ಎಲ್ಲರೂ ಸಿಎಂ ಸಿದ್ದರಾಮಯ್ಯಗೆ ಅಪ್ತರೇ.
ಆದರೆ ಹೈಕಮಾಂಡ್ ತೀರ್ಮಾಕ್ಕೆ ಬದ್ಧ. ಕ್ಯಾಬಿನೆಟ್ ವಿಸ್ತರಣೆ ಹೈಕಮಾಂಡ್ ಗೆ ಬಿಟ್ಟು ವಿಚಾರ. ಎರಡು ವರೆ ವರ್ಷ ರಿಷಫಲ್ ಬಗ್ಗೆ ಗೊತ್ತಿಲ್ಲ. ನಾನು ಬಿಡು ಅಂದ್ರೆ ಬಿಡಬೇಕು. ಹೈಕಮಾಂಡ್ ತೀರ್ಮಾನ ಮಾಡಿದ್ರೆ ನಾಗೇಂದ್ರ ಮತ್ತೊಮ್ಮೆ ಮಂತ್ರಿಯಾಗ್ತರೆ ಎಂದ ಭೈರತಿ ಸುರೇಶ ಹೇಳಿದರು. ಶಾಸಕರಾದ ಬಿ.ನಾಗೇಂದ್ರ, ಭರತರೆಡ್ಡಿ ಇದ್ದರು
