Home ನಮ್ಮ ಜಿಲ್ಲೆ 40% ಕಮೀಶನ್ ಪಕ್ಷಕ್ಕೆ 40 ಸೀಟು ಮಾತ್ರ ಕೊಡಿ

40% ಕಮೀಶನ್ ಪಕ್ಷಕ್ಕೆ 40 ಸೀಟು ಮಾತ್ರ ಕೊಡಿ

0
rahul gandhi


ಬಿಜೆಪಿ ನೀವು ಆಯ್ಕೆಮಾಡಿದ ಸರ್ಕಾರವನ್ನು ಮೂರು ವರ್ಷ ಹಿಂದೆ ಕಳವು ಮಾಡಿ, 40% ಕಮೀಶನ್ ದಂಧೆ ನಡೆಸಿದ್ದು ಅವರಿಗೆ ನೀವು ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಎಂದು ಕಾಂಗ್ರೆಸ್ ನಾಯಕ, ಮಾಜಿ ಸಂಸದ ರಾಹುಲ್ ಗಾಂಧಿ ಕರೆ ಕೊಟ್ಟಿದ್ದಾರೆ.
ನಗರದ ಎಚ್.ಆರ್. ಗವಿಯಪ್ಪ ವೃತ್ತದಲ್ಲಿ ಹಮ್ಮಿಕೊಂಡ ಬಹಿರಂಗ ಸಭೆ ನಡೆಸಿ, ಮಾತನಾಡಿದ ಅವರು, ಮೂರು ವರ್ಷಗಳ ಹಿಂದೆ ವಿಪಕ್ಷದ ಶಾಸಕರ ಖರೀದಿ ಮೂಲಕ ಸರ್ಕಾರವನ್ನು ಕಳವು ಮಾಡಿದ್ದು ಮಾತ್ರ ಅಲ್ಲ 40% ಕಮೀಶನ್ ಸಹ ಕಿತ್ತುಕೊಂಡರು. ಇವರು 3 ವರ್ಷ 40 ನಂಬರ್ ಮೇಲೆ ಭಾರೀ ಪ್ರೀತಿ ತೋರಿದರು. ಹಾಗಾಗಿ ಈ 40 ಪ್ರಿಯ ಪಕ್ಷಕ್ಕೆ 40 ಸೀಟು ನೀಡಿ ತೃಪ್ತಿ ಪಡಿಸಿ ಎಂದು ಅವರು ಹೇಳಿದರು.

Exit mobile version