Home ನಮ್ಮ ಜಿಲ್ಲೆ ಸರ್ಕಾರ ಬಹಳ ದಿನ ಉಳಿಯಲ್ಲ

ಸರ್ಕಾರ ಬಹಳ ದಿನ ಉಳಿಯಲ್ಲ

0

ಬೆಳಗಾವಿ: ಈ ಸರ್ಕಾರ ಬಹಳ ದಿನ ಉಳಿಯಲ್ಲ ಎಂದು ಬಿಜೆಪಿ ಶಾಸಕ ಅಭಯ್‌ ಪಾಟೀಲ್‌ ಹೇಳಿದ್ದಾರೆ.
ಕಾಂಗ್ರೆಸ್‌ನ ಸಿಎಂ ಆಯ್ಕೆ ವಿಚಾರವಾಗಿ ಮಾತನಾಡಿರುವ ಅವರು, ಸಂಪೂರ್ಣ ಬಹುಮತ ಇದ್ದಾಗ ಮುಖ್ಯಮಂತ್ರಿ ಆಯ್ಕೆಗೆ ಕೇವಲ ಒಂದು ಗಂಟೆ ಸಾಕು. ಆದರೆ ಕಾಂಗ್ರೆಸ್‌ನಲ್ಲಿ ಐದೈದು ದಿನ ತೆಗೆದುಕೊಂಡಿದ್ದಾರೆ ಎಂದರೆ ಎಷ್ಟು ತೂತುಗಳನ್ನು ಮುಚ್ಚುವ ಕೆಲಸ ಮಾಡಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಆದರೆ, ಅವುಗಳು ಮುಚ್ಚುವುದಿಲ್ಲ. ಸಿದ್ದು ಮತ್ತು ಡಿಕೆಶಿ ಬಣ ಎಂಬುವುದು ಮೊದಲಿನಿಂದಲೂ ಇದೆ. ಈಗ ಅದು ಪ್ರಬಲವಾಗಿದೆ ಎಂದರು.

Exit mobile version