Home ನಮ್ಮ ಜಿಲ್ಲೆ ವಿದ್ಯುತ್ ಸ್ಪರ್ಶ : ದಂಪತಿ ದುರ್ಮರಣ

ವಿದ್ಯುತ್ ಸ್ಪರ್ಶ : ದಂಪತಿ ದುರ್ಮರಣ

0

ಬೀದರ್ : ಹೃದಯವಿದ್ರಾವಕ ಪ್ರಕರಣದಲ್ಲಿ ಭಾನುವಾರ ಬೆಳಿಗ್ಗೆ ವಿದ್ಯುತ್ ತಂತಿ ತಗಲಿ ಬೀದರ್ ತಾಲ್ಲೂಕಿನ ಮನ್ಹಳ್ಳಿ ಗ್ರಾಮದಲ್ಲಿನ ಹೊಲದಲ್ಲಿ ದಂಪತಿ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.
ಸಾವಿಗೀಡಾದವರನ್ನು ಮನ್ಹಳ್ಳಿ ಗ್ರಾಮದ ಮಲ್ಲಿಕಾರ್ಜುನ (೫೦) ಮತ್ತು ಆತನ ಪತ್ನಿ ಶರಣಮ್ಮ (೪೫) ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮನ್ಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೊಲದಲ್ಲಿ ವಿದ್ಯುತ್ ತಂತಿ ಜೋತು ಬಿದ್ದಿದ್ದೇ ಈ ಅವಾಂತರಕ್ಕೆ ಕಾರಣ ಎಂಬ ಮಾಹಿತಿ ಲಭ್ಯವಾಗಿದೆ.

https://samyuktakarnataka.in/%e0%b2%a8%e0%b2%ae%e0%b3%8d%e0%b2%ae%e0%b3%82%e0%b2%b0-%e0%b2%ae%e0%b2%b9%e0%b2%be%e0%b2%a4%e0%b3%8d%e0%b2%ae%e0%b3%86-%e0%b2%a4%e0%b3%86%e0%b2%82%e0%b2%97%e0%b2%bf%e0%b2%97%e0%b3%86-%e0%b2%b9/

Exit mobile version