Home ನಮ್ಮ ಜಿಲ್ಲೆ ಗದಗ ಲಕ್ಷ್ಮೇಶ್ವರಕ್ಕೆ ಪ್ರೊ.ಸಿ.ಎನ್.ಆರ್.ರಾವ್

ಲಕ್ಷ್ಮೇಶ್ವರಕ್ಕೆ ಪ್ರೊ.ಸಿ.ಎನ್.ಆರ್.ರಾವ್

0

ಲಕ್ಷ್ಮೇಶ್ವರ: ಗದಗ ಜಿಲ್ಲೆ ಲಕ್ಷ್ಮೇಶ್ವರದ ಸ್ಕೂಲ್ ಚಂದನದಲ್ಲಿ ಗುರುವಾರದಿಂದ ನಡೆಯಲಿರುವ ರಾಷ್ಟ್ರೀಯ ವಿಜ್ಞಾನ ವಿಸ್ತೃತ ಕಾರ್ಯಕ್ರಮದಲ್ಲಿ ಭಾರತ ರತ್ನ ಪ್ರೊ.ಸಿ.ಎನ್.ಆರ್.ರಾವ್ ಭಾಗಿಯಾಗಲಿದ್ದಾರೆ.
ಜ.೧೯, ೨೦ ಮತ್ತು ೨೧ರಂದು ಭಾರತ ರತ್ನ ಪ್ರೊ.ಸಿಎನ್‌ಆರ್ ರಾವ್ ಅವರ ಎಜ್ಯುಕೇಷನ್ ಫೌಂಡೇಷನ್ ಮತ್ತು ಸ್ಕೂಲ್ ಚಂದನ ಆಶ್ರಯದಲ್ಲಿ ರಾಷ್ಟ್ರೀಯ ವಿಜ್ಞಾನ ವಿಸ್ತೃತ ಕಾರ್ಯಕ್ರಮ ಜರುಗಲಿದೆ. ಇದಕ್ಕೆ ಪ್ರೊ.ಸಿ.ಎನ್.ಆರ್. ರಾವ್ ಸೇರಿದಂತೆ ರಾಷ್ಟ್ರ ಹಾಗೂ ರಾಜ್ಯದ ಹೆಸರಾಂತ ವಿಜ್ಞಾನಿಗಳ ದಂಡು ಆಗಮಿಸಲಿದೆ.

Exit mobile version