Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ರೈತರಿಗೆ ನ್ಯಾಯ ಕೊಡದೆ ತಮಿಳುನಾಡಿಗೆ ನೀರು

ರೈತರಿಗೆ ನ್ಯಾಯ ಕೊಡದೆ ತಮಿಳುನಾಡಿಗೆ ನೀರು

0

ಮಂಗಳೂರು: ರೈತರಿಗೆ ನ್ಯಾಯ ಕೊಡದೆ ತಮಿಳುನಾಡಿಗೆ ಕಾವೇರಿ ನೀರು ಬಿಡಲಾಗುತ್ತಿದೆ ಎಂದು ಸಂಸದ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಆರೋಪಿಸಿದ್ದಾರೆ.
ನಗರದಲ್ಲಿ ಇಂದು ಮಾದ್ಯಮದವರೊಂದಿಗೆ ಮಾತನಾಡಿದ ಅವರು, ತಮಿಳುನಾಡಿಗೆ ನೀರು ಬಿಡುವುದರಿಂದ ರಾಜ್ಯದ ರೈತರಿಗೆ ಸಮಸ್ಯೆ ಆಗಲಿದೆ. ರಾಜ್ಯದ ರೈತರ ಇಚ್ಛೆ ಪೂರೈಸದೆ, ಅವರಿಗೆ ನ್ಯಾಯ ಕೊಡದೆ ತಮಿಳುನಾಡಿಗೆ ನೀರು ಬಿಡಲಾಗುತ್ತಿದೆ. ಇಡೀ ರಾಜ್ಯದಲ್ಲಿ ನೀರಿನ ಸಮಸ್ಯೆ ಇದ್ದು, ಬರ ಪರಿಸ್ಥಿತಿ ಎದುರಾಗಿದೆ. ಈ ಸಮಸ್ಯೆ ನಡುವೆ ಪಂಪ್‌ಸಟ್‌ಗಳಿಗೆ ಕರೆಂಟ್ ಇಲ್ಲ, ಜನ ತತ್ತರಿಸಿ ಹೋಗಿದ್ದಾರೆ. ಇದರ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ ಎಂದರು.
ಚುನಾವಣೆ ಪೂರ್ವ ಕಾಂಗ್ರೆಸ್ ಘೋಷಣೆ ಮಾಡಿದ್ದ ಗ್ಯಾರೆಂಟಿಗಳಿಗೆ ಮಾನದಂಡ ಇರಲಿಲ್ಲ. ಈವರೆಗೆ ಘೋಷಿಸಿದ ನಾಲ್ಕು ಗ್ಯಾರೆಂಟಿಗಳಿಗೆ ಮಾನದಂಡ ಹಾಕಲಾಗಿದೆ. ಗೃಹ ಜ್ಯೋತಿ ಹೆಸರಲ್ಲಿ ಇಡೀ ರಾಜ್ಯವನ್ನು ಕತ್ತಲಿನಲ್ಲಿ ಇಡಲಾಗಿದೆ. ಝೀರೊ ಬಿಲ್ ಜೊತೆಗೆ ಈಗ ಝೀರೊ ಕರೆಂಟ್ ಆಗಿದೆ ಎಂದು ಟೀಕಿಸಿದರು.
ಇಂದಿರಾಗಾಂಧಿ ಕಾಲದ ಗತವೈಭವ ಮರುಕಳಿಸುತ್ತಿದೆ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಆ ಗತವೈಭವದಲ್ಲಿ ತುರ್ತು ಪರಿಸ್ಥಿತಿಯನ್ನೂ ಹೇರಲಾಗಿತ್ತು ಎಂದು ಹೇಳಿದರು.

Exit mobile version