Home ನಮ್ಮ ಜಿಲ್ಲೆ ಅನ್ನಭಾಗ್ಯ ಅಕ್ಕಿಮೂಟೆಯಲ್ಲಿ ಸಿಮೆಂಟ್ ಕಲ್ಲು, ಹಿಟ್ಟಿನ ಪ್ಯಾಕೇಟ್ ಪತ್ತೆ

ಅನ್ನಭಾಗ್ಯ ಅಕ್ಕಿಮೂಟೆಯಲ್ಲಿ ಸಿಮೆಂಟ್ ಕಲ್ಲು, ಹಿಟ್ಟಿನ ಪ್ಯಾಕೇಟ್ ಪತ್ತೆ

0

ಚಿಕ್ಕೋಡಿ: ಅಥಣಿ ತಾಲೂಕಿನ ಕೊಟ್ಟಲಗಿಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿಯಲ್ಲಿ ಸಿಮೆಂಟ್ ಕಲ್ಲು, ಹಿಟ್ಟಿನ ಪ್ಯಾಕೇಟ್ ಪತ್ತೆಯಾಗಿದೆ.
ಕೊಟ್ಟಲಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನ್ಯಾಯ ಬೆಲೆ ಅಂಗಡಿಯಲ್ಲಿ ಅಕ್ಕಿ ಮೂಟೆಯಲ್ಲಿ ಕಲ್ಲಿನಂತಿರುವ ವಸ್ತುಗಳು ಇದ್ದು, ಮನೆಗೆ ಅಕ್ಕಿ ಒಯ್ದ ಜನರು ಇವುಗಳನ್ನು ನೋಡಿ ಗಾಬರಿಯಾಗಿದ್ದಾರೆ.
ಗುಣಮಟ್ಟದ ಅಕ್ಕಿಯ ಬದಲು ಕಳಪೆ ಅಕ್ಕಿ ವಿತರಣೆ ಮಾಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸ್ಥಳೀಯರು ಆಗ್ರಹಿಸಿದ್ದಾರೆ.

Exit mobile version