Home ನಮ್ಮ ಜಿಲ್ಲೆ ಎಥೆನಾಲ್ ಬಸ್‌ಗಳಿಗೆ ಇಂದು ಚಾಲನೆ ನೀಡಲಿರುವ ಸಚಿವ ನಿತಿನ್ ಗಡ್ಕರಿ

ಎಥೆನಾಲ್ ಬಸ್‌ಗಳಿಗೆ ಇಂದು ಚಾಲನೆ ನೀಡಲಿರುವ ಸಚಿವ ನಿತಿನ್ ಗಡ್ಕರಿ

0
BUS

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಇಂದು ಬೆಂಗಳೂರಿನ ಮೊದಲ ಎಥೆನಾಲ್ ಬಸ್‌ಗಳನ್ನು ಅನಾವರಣಗೊಳಿಸಲಿದ್ದಾರೆ. ಎಂಡಿ15 (15 ಪ್ರತಿಶತ ಎಥೆನಾಲ್ ಹೊಂದಿರುವ ಡೀಸೆಲ್) ಬಸ್‌ಗಳ ಪ್ರಾಯೋಗಿಕ ಸಂಚಾರವನ್ನು ಸಂಜೆ 6 ಗಂಟೆಗೆ ವಿಧಾನಸೌಧದಿಂದ ಪ್ರಾರಂಭಿಸಲಾಗುವುದು. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಬಸ್‌ಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನಿರ್ದೇಶಕ (ಮಾಹಿತಿ ತಂತ್ರಜ್ಞಾನ) ಎ.ವಿ.ಸೂರ್ಯ ಸೇನ ತಿಳಿಸಿದ್ದಾರೆ. ಬಸ್‌ಗಳು ಹೊರ ಉಗುಳುವ ಮಾಲಿನ್ಯ ಮಟ್ಟದಲ್ಲಿ ಗಣನೀಯ ಇಳಿಕೆಗೆ ಈ ಬಸ್‌ಗಳು ಕಾರಣವಾಗುತ್ತವೆ.

Exit mobile version