Home ನಮ್ಮ ಜಿಲ್ಲೆ ಮೀಸಲಾತಿ ಸಿಗುವವರೆಗೂ ಹೋರಾಟ: ಬಸವಜಯ ಮೃತ್ಯುಂಜಯ ಸ್ವಾಮೀಜಿ

ಮೀಸಲಾತಿ ಸಿಗುವವರೆಗೂ ಹೋರಾಟ: ಬಸವಜಯ ಮೃತ್ಯುಂಜಯ ಸ್ವಾಮೀಜಿ

0

ಹಾವೇರಿ: ನರಗುಂದ ಬಂಡಾಯ ರೀತಿಯಲ್ಲಿ ಇದ್ದ ನಮ್ಮ ಹೋರಾಟವನ್ನು ಮುಖ್ಯಮಂತ್ರಿಗಳು ಆಣೆ ಮಾಡಿ ಬಿಡಿಸಿದರು ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಶಿಗ್ಗಾಂವಿಯಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ವಿಧಾನಸೌಧ ಮುತ್ತಿಗೆ ಹಾಕುವ ನಮ್ಮನ್ನು ತಪ್ಪಿಸಿದರು. ಅಂದು ಮುಖ್ಯಮಂತ್ರಿಗಳಿಗೆ ರಾಜೀನಾಮೆ ಕೊಡುವ ಪರಿಸ್ಥಿತಿ ಆಗುತ್ತಿತ್ತು. ಆದರೆ ತಾಯಿ‌ ‌ಮೇಲೆ ಆಣೆ ಮಾಡಿ ನಮಗೆ ಬಳಿಕ 2D ಘೋಷಣೆ ಮಾಡಿದ್ದಾರೆ. ಅದು ನಮ್ಮ ಅಸಮಾಧಾನಕ್ಕೆ ಕಾರಣವಾಗಿದೆ ನಮ್ಮ ಸಮುದಾಯದಿಂದ‌ 2D ಮೀಸಲಾತಿ ತಿರಸ್ಕಾರ ಮಾಡಿದ್ದೇವೆ. ಕೂಡಲೇ ನಮಗೆ 2ಎ ಮೀಸಲಾತಿ ನೀಡಬೇಕು ಎಂದು ಅವರು ಆಗ್ರಹಿಸಿದರು.

ಮೀಸಲಾತಿ ಸಿಗುವವರೆಗೂ ಹೋರಾಟ: ಬಸವಜಯ ಮೃತ್ಯುಂಜಯ ಸ್ವಾಮೀಜಿ

Exit mobile version