Home ನಮ್ಮ ಜಿಲ್ಲೆ ಕಲಬುರಗಿ ಮಹಾನಗರ ಪಾಲಿಕೆ ಹಳೆ ಕಟ್ಟಡಕ್ಕೆ ಬೆಂಕಿ

ಮಹಾನಗರ ಪಾಲಿಕೆ ಹಳೆ ಕಟ್ಟಡಕ್ಕೆ ಬೆಂಕಿ

0

ಕಲಬುರಗಿ: ನಗರದ ಮಹಾನಗರ ಪಾಲಿಕೆ ಹಳೆ ಕಟ್ಟಡಕ್ಕೆ‌‌‌ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಘಟನೆ ಶನಿವಾರ ಸಂಜೆ ನಡೆದಿದೆ. ಘಟನೆಯಿಂದ‌ ಲೆಕ್ಕ‌ಪತ್ರ ಶಾಖೆಯ ಅಲೆಮಾರಿ ಮತ್ತು ಕಡತಗಳಿಗೆ ಬೆಂಕಿ ಬಿದ್ದಿದೆ. ಇದರಿಂದ ಅಪಾರ ಪ್ರಮಾಣದ ಕಡತಗಳನ್ನು ಬೆಂಕಿ‌ ಕೆನ್ನಾಲೆಗೆ‌‌ ಸುಟ್ಟು ಕರಲಾಗಿದ್ದು, ಸರಿಯಾದ ಸಮಯಕ್ಕೆ ದೌಡಾಯಿಸಿದ ಅಗ್ನಿಶಾಮಕ ‌ಮತ್ತು ತುರ್ತು ಸೇವೆಗಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿಂದೆ ಜಿಪಂ‌ ಸಿಇಓ ಕಚೇರಿಗೂ ಬೆಂಕಿ‌ ಕಾಣಿಸಿಕೊಂಡಿತು. ಅಚ್ಚರಿಯ ವಿಷಯ ಏನೆಂದರೆ ಜಿಪಂ‌ ಮತ್ತು ಮಹಾನಗರ ಪಾಲಿಕೆಯ ಎರಡೂ ಕಚೇರಿಯಲ್ಲಿ ಲೆಕ್ಕ ಪತ್ರ ಶಾಖೆಯ ವಿಭಾಗದ ಕಡತಗಳಿಗೆ ಬೆಂಕಿ‌ ಹೊತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ಪೊಲೀಸ್ ತನಿಖೆಯಿಂದಲೇ ಸತ್ಯಾಂಶ ಬಯಲಿಗೆ ಬರಬೇಕಿದೆ.

Exit mobile version