Home ನಮ್ಮ ಜಿಲ್ಲೆ ಮನ್ ಕಿ ಬಾತ್ ದೇಶದ ಭಾವನೆ ಅಭಿವ್ಯಕ್ತಪಡಿಸುವ ವೇದಿಕೆ

ಮನ್ ಕಿ ಬಾತ್ ದೇಶದ ಭಾವನೆ ಅಭಿವ್ಯಕ್ತಪಡಿಸುವ ವೇದಿಕೆ

0
BASAVARAJ BOMAI

ಹಾವೇರಿ(ಶಿಗ್ಗಾಂವಿ): ಮನ್ ಕಿ ಬಾತ್ ದೇಶದ ಭಾವನೆ ಅಭಿವ್ಯಕ್ತಪಡಿಸುವ ವೇದಿಕೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಶಿಗ್ಗಾಂವಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ದೇಶದ ಪ್ರತಿ ಮನೆಯಲ್ಲಿ ಮನ್ ಕಿ ಬಾತ್ ಕೇಳುತ್ತಾರೆ. ಮನ್ ಕಿ ಬಾತ್ ದೇಶದ ಜನರ ಭಾವನೆಯಾಗಿದೆ. ಇದರಲ್ಲಿ ಜನರ ಸಮಸ್ಯೆ ಕೇಳಿ ಪರಿಹಾರ ಸೂಚಿಸುವ ವೇದಿಕೆಯಾಗಿದೆ. ಹಳ್ಳಿಗಳಲ್ಲಿ, ಸಣ್ಣ ಸಣ್ಣ ಉದ್ಯೋಗ ಮಾಡುವವರನ್ನು ದೇಶಕ್ಕೆ ಪರಿಚಯ ಮಾಡುವ ಕೆಲಸವಾಗುತ್ತಿದೆ. ಇದರಿಂದ ಅನೇಕರು ತಮ್ಮ ಉದ್ಯೋಗ ಬದಲಾಯಿಸಿ ಸ್ವಯಂ ಉದ್ಯೋಗ ಕಂಡುಕೊಂಡಿದ್ದಾರೆ. ಇದೊಂದು ಅಭೂತಪೂರ್ವ ಕಾರ್ಯಕ್ರಮವಾಗಿದ್ದು, ಮನಸಿನ ಮಾತುಗಳನ್ನು ಹಂಚಿಕೊಳ್ಳಲು ಇಷ್ಟು ದೊಡ್ಡ ವೇದಿಕೆ ಸಿಕ್ಕಾಗ ಇಡೀ ದೇಶಕ್ಕೆ ಸ್ಫೂರ್ತಿಯಾಗುತ್ತದೆ‌ ಎಂದರು. ಸರ್ವರಿಗೂ ಸರ್ವ ವ್ಯಾಪಿಯಾಗಿ ಅಭಿಪ್ರಾಯ ಹಂಚಿಕೊಳ್ಳುವ ವೇದಿಕೆ ಇದಾಗಿದೆ ಎಂದರು.

Exit mobile version