Home ನಮ್ಮ ಜಿಲ್ಲೆ ಉಡುಪಿ ಮತಾಂತರ, ಗೋಹತ್ಯೆ ನಿಷೇಧ ಪರಿಷ್ಕರಣೆ: ಮರುಪರಿಶೀಲನೆಗೆ ಆಗ್ರಹ

ಮತಾಂತರ, ಗೋಹತ್ಯೆ ನಿಷೇಧ ಪರಿಷ್ಕರಣೆ: ಮರುಪರಿಶೀಲನೆಗೆ ಆಗ್ರಹ

0

ಉಡುಪಿ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಹಿಂದಿನ ಬಿಜೆಪಿ ಸರಕಾರ ಜಾರಿಗೊಳಿಸಿದ್ದ ಮತಾಂತರ ಹಾಗೂ ಗೋಹತ್ಯೆಗೆ ಸಂಬಂಧಿಸಿದ ಕಾಯ್ದೆ ಹಿಂಪಡೆಯುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿರುವ ಬಗ್ಗೆ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಆತಂಕ ವ್ಯಕ್ತಪಡಿಸಿದ್ದಾರೆ.
ಇದು ನಮ್ಮ ಧರ್ಮ ಹಾಗೂ ಸಂಸ್ಕೃತಿಯ ಸಂರಕ್ಷಣೆಯ ವಿಚಾರವಾಗಿದ್ದು, ಇದರಲ್ಲಿ ರಾಜಕಾರಣ ತರುವುದು ಉತ್ತಮ ಬೆಳವಣಿಗೆಯಲ್ಲ. ಹಾಗಾಗಿ ರಾಜ್ಯ ಸರಕಾರ ಈ ಬಗ್ಗೆ ಮರುಚಿಂತನೆ ಮಾಡಿ ಹಿಂದಿನ ಸರಕಾರ ಜಾರಿಗೆ ತಂದ ಕಾಯ್ದೆ ಮುಂದುವರಿಸಬೇಕು. ಆ ಮೂಲಕ ನಮ್ಮ ಧರ್ಮ ಹಾಗೂ ಸಂಸ್ಕೃತಿ ರಕ್ಷಣೆಗೆ ಸಹಕರಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದ್ದಾರೆ.

Exit mobile version