Home ನಮ್ಮ ಜಿಲ್ಲೆ ಮಂತ್ರಾಲಯದ ಶ್ರೀಮಠದಲ್ಲಿ ಶ್ರೀಗುರುವೈಭೋತ್ಸವ

ಮಂತ್ರಾಲಯದ ಶ್ರೀಮಠದಲ್ಲಿ ಶ್ರೀಗುರುವೈಭೋತ್ಸವ

0


ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬುಧವಾರ ಶ್ರೀ ರಾಯರ 402ನೇ ಪಟ್ಟಾಭಿಷೇಕ ಮಹೋತ್ಸವ ನಡೆಯಿತು.
ಶ್ರೀ ಗುರು ವೈಭವೋತ್ಸವದ ಅಂಗವಾಗಿ ಶ್ರೀಮಠದಲ್ಲಿ ಬೆಳಿಗ್ಗೆಯಿಂದ ವಿಶೇಷ ಪೂಜಾ ಕಾರ್ಯಕ್ರಮ ನಡೆದವು.
ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಶ್ರೀರಾಯರ ಮೂಲ ಪಾದುಕೆಗಳಿಗೆ ಶ್ರೀ ಮಠದ ಪ್ರಾಂಗಣದಲ್ಲಿ ಮುತ್ತು, ರತ್ನ ಮತ್ತು ಕನಕ ಅಭಿಷೇಕಯನ್ನು ಶ್ರೀಪಾದಂಗಳವರು ನೆರವೇರಿದರು. ನಂತರ ಶ್ರೀ ರಾಯರ ಪಾದುಕೆ ರಥದಲ್ಲಿಟ್ಟು ಶ್ರೀಮಠದ ಪ್ರಾಂಗಣದಲ್ಲಿ ಸ್ವರ್ಣ ರಥೋತ್ಸವ ನಡೆಯಿತು.
ರಥೋತ್ಸವ ವೇಳೆ ಹತ್ತಾರು ಕಲಾತಂಡ ಮತ್ತು ಭಜನೆಯ ತಂಡಗಳೊಂದಿಗೆ ಅದ್ಧೂರಿಯಾಗಿ ರಥೋತ್ಸವ ಜರುಗಿತು.
ಗುರು ವೈಭವೋತ್ಸವ ಸಂಭ್ರಮದಲ್ಲಿ ಸಾವಿರಾರು ರಾಯರ ಭಕ್ತರು ಪಾಲ್ಗೊಂಡಿದ್ದರು.

Exit mobile version