Home ನಮ್ಮ ಜಿಲ್ಲೆ ಮಂತ್ರಾಲಯದಲ್ಲಿ ರಾಯರ ಉತ್ತರಾಧನೆ ಮಹಾರಥೋತ್ಸವ

ಮಂತ್ರಾಲಯದಲ್ಲಿ ರಾಯರ ಉತ್ತರಾಧನೆ ಮಹಾರಥೋತ್ಸವ

0

ರಾಯಚೂರು: ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳವರ 352ನೇ ಆರಾಧನಾ ಮಹೋತ್ಸವ ಉತ್ತರಾರಾಧನೆ ಅಂಗವಾಗಿ ಶನಿವಾರ ಶ್ರೀಮಠದ ಪೀಠಾಧಿಪತಿಗಳಾದ ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಅನುಗ್ರಹ ಸಂದೇಶ ನೀಡಿ, ಮಹಾರಥೋತ್ಸವಕ್ಕೆ ಚಾಲನೆ ನೀಡಿದರು.
ಇದಕ್ಕೂ ಮೊದಲು ಶ್ರೀ ಪ್ರಹ್ಲಾದ ರಾಜರ ಉತ್ಸವ ಮೂರ್ತಿಯನ್ನು ಶ್ರೀ ಮಠದ ಪ್ರಕಾರದಲ್ಲಿ ಮೆರವಣೆಗೆ ನಡೆಸಿ ರಥದಲ್ಲಿರಿಸಿ ಮಹಾರಥೋತ್ಸ ನಡೆಯಿತು. ಚಂಡಿವಾದ ಸೇರಿದಂತೆ ಅನೇಕ ವಾದ್ಯಮೇಳಗಳು ಭಾಗವಹಿಸಿದವು. ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಹೆಲಿಕ್ಯಾಪ್ಟರ್ ಮೂಲಕ ಮಹಾರಥೋತ್ಸವಕ್ಕೆ ಪುಷ್ಪವೃಷ್ಠಿ ನೆರವೇರಿಸಿದರು. ವಿವಿಧ ಭಾಗಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸಾಕ್ಷಿಯಾದರು.

ಮಂತ್ರಾಲಯದಲ್ಲಿ ಶ್ರೀ ರಾಯರ ಉತ್ತರಾಧನೆ ಮಹಾರಥೋತ್ಸವ

Exit mobile version