Home ನಮ್ಮ ಜಿಲ್ಲೆ ಬೆಳಗಾವಿಯಲ್ಲಿ 3 ದಿನ ಅದ್ಧೂರಿ ರಾಜ್ಯಮಟ್ಟದ ಅರಣ್ಯ ಕ್ರೀಡಾಕೂಟ

ಬೆಳಗಾವಿಯಲ್ಲಿ 3 ದಿನ ಅದ್ಧೂರಿ ರಾಜ್ಯಮಟ್ಟದ ಅರಣ್ಯ ಕ್ರೀಡಾಕೂಟ

0

ಬೆಳಗಾವಿ: ರಾಜ್ಯಮಟ್ಟದ ಅರಣ್ಯ ಕ್ರೀಡಾಕೂಟ ಬೆಳಗಾವಿ ಅರಣ್ಯ ವೃತ್ತದ ಬೆಳಗಾವಿ ವಿಭಾಗದಲ್ಲಿ ಅದ್ಧೂರಿಯಾಗಿ ಮೂರು ದಿನ ನಡೆಯಲಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾನ್ 23-24- 25ರಂದು ಮೂರು ದಿನ ರಾಜ್ಯದ 13 ಅರಣ್ಯ ವೃತ್ತಗಳ ಮತ್ತು 1ಟ್ರೇನಿಂಗ್ ಅಕಾಡೆಮಿಯ ಒಟ್ಟು 14 ಅರಣ್ಯ ಯುನಿಟ್ ಗಳ ಸಿಬ್ಬಂಧಿ ಅಧಿಕಾರಿಗಳು ಒಳಾಂಗಣ/ ಹೊರಾಂಗಣ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದರು. ಇಲಾಖೆಯ ಅಧಿಕಾರಿ/ ಸಿಬ್ಬಂಧಿ ಒಟ್ಟು 1100 ಕ್ರೀಡಾಪಟುಗಳು ಈಗಾಗಲೇ ನೊಂದಾಯಿಸಿಕೊಂಡಿದ್ದಾರೆ. 900 ಜನ ಪುರುಷ ಕ್ರೀಡಾಪಟುಗಳು, 200 ಜನ ಮಹಿಳಾ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ( VTU) ಕ್ಯಾಂಪಸ್ ನಲ್ಲಿ ಮತ್ತು ಬೆಳಗಾವಿ ನಗರ ಮತ್ತು ಜಿಲ್ಲೆಯ ಇತರ ಭಾಗಗಳಲ್ಲಿ ಮೂರು ದಿನ ಕ್ರೀಡೆಗಳು ನಡೆಯಲಿವೆ ಎಂದರು.

Exit mobile version