Home ನಮ್ಮ ಜಿಲ್ಲೆ ಧಾರವಾಡ ಪ್ರತಿ ಹಳ್ಳಿಗೂ ಆರ್‌ಎಸ್‌ಎಸ್ ಸಂಘಟನೆ ವಿಸ್ತರಣೆ ಮಾಡಿ

ಪ್ರತಿ ಹಳ್ಳಿಗೂ ಆರ್‌ಎಸ್‌ಎಸ್ ಸಂಘಟನೆ ವಿಸ್ತರಣೆ ಮಾಡಿ

0

ಹುಬ್ಬಳ್ಳಿ: ದೇಶದಲ್ಲಿ ಆರ್‌ಎಸ್‌ಎಸ್ ಸಂಘಟನೆ ಕೋಟ್ಯಾಂತರ ಜನ ಕಾರ್ಯಕರ್ತರ ನಿರ್ಮಾಣ ಮಾಡಿದೆ. ಸಂಘಕ್ಕೆ ನೂರು ವರ್ಷವಾಗುತ್ತಿರುವ ಸಂದರ್ಭದಲ್ಲಿ ಪ್ರತಿ ಹಳ್ಳಿಗಳಲ್ಲಿ ಸಂಘ ವಿಸ್ತಾರವಾಗಬೇಕು. ಪ್ರತಿಯೊಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಂಘದ ದೈನಂದಿನ ಶಾಖೆ ವಿಸ್ತಾರ ಮಾಡಲು ಮೂರು ವರ್ಷದಿಂದ ಕಾರ್ಯ ಮಾಡಲಾಗುತ್ತಿದೆ ಎಂದು ಆರ್‌ಎಸ್‌ಎಸ್ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರ ಕಾರ್ಯವಾಹ ನಾ. ತಿಪ್ಪೇಸ್ವಾಮಿ ಹೇಳಿದರು.
ಆರ್‌ಎಸ್‌ಎಸ್ ಹುಬ್ಬಳ್ಳಿ ಮಹಾನಗರದವತಿಯಿಂದ ನೆಹರು ಮೈದಾನದಲ್ಲಿ ವಿಜಯದಶಮಿ ನಿಮಿತ್ತ ಹಮ್ಮಿಕೊಂಡಿದ್ದ “ಪಥಸಂಚಲ”ದ ಸಾರ್ವಜನಿಕ ಸಮಾರಂಭದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.
ವಿಜಯ ದಶಮಿ ಉತ್ಸವವು ಶಕ್ತಿ ಆರಾಧನೆಯಾಗಿದೆ. ನವರಾತ್ರಿಯಲ್ಲಿ ಎಲ್ಲ ದೇವಿಯರ ಪೂಜೆ ಮಾಡಲಾಗುತ್ತದೆ. ಎಲ್ಲ ದೇವಿಯರ ಕೈಯಲ್ಲಿ ಅಸ್ತçಗಳಿವೆ. ಅವು ಮನುಷ್ಯನ ರಕ್ಷಣೆಗಾಗಿ ಎಂದರಲ್ಲದೆ, ಎಲ್ಲಿ ಶಕ್ತಿ ಇದೆ ಅಲ್ಲಿ ದೇವರ ರಕ್ಷಣೆ ಇದೆ. ಭಾರತ ಮಾತೆ ರಕ್ಷಣೆ ಮಾಡಲು ಸಂಘಟಿತ ಶಕ್ತಿ ನಿರ್ಮಾಣ ಮಾಡುವಲ್ಲಿ ಸಂಘ ಕಾರ್ಯ ಮಾಡಿದೆ ಎಂದರು.
ಇಂದಿನ ಪಥಸಂಚಲವನ್ನು ಇಡೀ ಸಮಾಜ ಅತ್ಯಂತ ಉತ್ಸಾಹದಿಂದ, ಸಂಭ್ರಮದಿಂದ ಸ್ವಾಗತಿಸಿದೆ. ಅಂದು ಆರ್‌ಎಸ್‌ಎಸ್‌ನ್ನು ದೇಶದ ಸರ್ವಾಂಗೀಣ ಸಮಾಜ ನಿರ್ಮಾಣ ಮಾಡಲು ಮಾಡಿದ್ದರು. ಸದ್ಯ ಎಲ್ಲ ಕಡೆ ಸಂಘದ ಬಗ್ಗೆ ಚರ್ಚೆ ಮಾಡುವುದು ಕಾಣುತ್ತಿದ್ದೇವೆ. ಸಂಘ ಅನೇಕ ಸೇವಾ ಕಾರ್ಯ ಮಾಡುತ್ತಿದೆ. ಆದರೂ ಸಂಘವನ್ನು ಟೀಕೆ ಮಾಡಲಾಗುತ್ತಿದೆ. ಇದನ್ನೆಲ್ಲ ಮೀರಿ ಸಂಘ ಇಂದು ಜಗ್ಗತಿನ್ನಲ್ಲಿಯೇ ಬಲಿಷ್ಠವಾಗಿ ಬೆಳೆದಿದೆ. ಸಂಘದ ಬಗ್ಗೆ ನಂಬಿಕೆ, ವಿಶ್ವಾಸ ಹೆಚ್ಚಾಗಿದೆ. ಈ ವಿಶ್ವಾಸದಿಂದ ಸಂಘವನ್ನು ಹತ್ತಿರ ನೋಡಲು, ಅರ್ಥ ಮಾಡಿಕೊಂಡು ಜೊತೆಗೆ ಬೆರೆಯಲು ನೋಡುತ್ತಿದ್ದಾರೆ ಎಂದರು.

RSS

Exit mobile version