Home ತಾಜಾ ಸುದ್ದಿ ನಾಗ ಪಂಚಮಿ: ಗ್ರಾಮೀಣ ಸ್ಪರ್ಧೆ ಇಂದಿಗೂ ಜೀವಂತ

ನಾಗ ಪಂಚಮಿ: ಗ್ರಾಮೀಣ ಸ್ಪರ್ಧೆ ಇಂದಿಗೂ ಜೀವಂತ

0

ಬಾಗಲಕೋಟೆ: ಜಾಗತಿಕವಾಗಿ ಎಷ್ಟೇ ಮುಂದುವರೆದರೂ ಗ್ರಾಮೀಣ ಹಾಗು ಸಂಪ್ರದಾಯಗಳು ಇಂದಿಗೂ ಉಳಿಸಿ-ಬೆಳೆಸಿಕೊಂಡು ಹೋಗುವಲ್ಲಿ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ನಗರದ ಜನತೆ ಮುಂದಾಗಿರುವದು ವಿಶೇಷ.
ನಾಗರ ಪಂಚಮಿ ನಿಮಿತ್ತ ನಿಂಬೆ ಹಣ್ಣನ್ನು ನಿರ್ದಿಷ್ಟ ಜಾಗಕ್ಕೆ ಎಸೆಯುವದು. ಕಣ್ಣು ಮುಚ್ಚಿಕೊಂಡು ಗುರುತಿಸಿದ ಜಾಗಕ್ಕೆ ಹೋಗುವದು. ಚಕ್ಕುಲಿ ಗಾಲಿ ಉರುಳಿಸುವದು ಸೇರಿದಂತೆ ಅನೇಕ ಗ್ರಾಮೀಣ ಕ್ರೀಡೆಗಳು ಇಂದಿಗೂ ಪ್ರಸ್ತುತವಾಗಿವೆ. ಆಟದಲ್ಲಿ ಗೆದ್ದವರಿಗೆ ಸೋತವರು ಕೊಬ್ಬರಿ ಕೊಡುವದು ಒಂದು ವಾಡಿಕೆ.
ನಾಗಪ್ಪನಿಗೆ ಹಾಲೆರೆದ ಮಹಿಳೆಯರು
ತಮ್ಮ ತಮ್ಮ ಮನೆಗಳಲ್ಲಿ ರವಿವಾರದಂದು ಮನೆಯಲ್ಲಿ ನಾಗಪ್ಪನಿಗೆ ಹಾಲೆರೆದ ಮಹಿಳೆಯರು ಹಾಗು ಓರಗಿತ್ತಿಯರ ಜತೆ ಜೋಕಾಲಿ ಜೀಕುವ, ಹಾಡು, ಹಸೆಗಳಲ್ಲಿ ಭಾಗವಹಿಸಿ ಸಂಭ್ರಮಿಸುವ ತವಕದಲ್ಲಿದ್ದುದ್ದು ಸಾಮಾನ್ಯವಾಗಿತ್ತು.

Exit mobile version