Home ನಮ್ಮ ಜಿಲ್ಲೆ ಕೊಪ್ಪಳ ಧ್ವನಿ ನನ್ನದೇ ಆದರೆ ಹಣ ಪಡೆದಿಲ್ಲ: ದಢೇಸಗೂರು

ಧ್ವನಿ ನನ್ನದೇ ಆದರೆ ಹಣ ಪಡೆದಿಲ್ಲ: ದಢೇಸಗೂರು

0

ಕೊಪ್ಪಳ: ಪಿಎಸ್‌ಐ ಹಗರಣದ ಕುರಿತ ಆಡಿಯೋದಲ್ಲಿನ ಧ್ವನಿ ನನ್ನದೆ. ಆದರೆ ನಾನು ಯಾವುದೇ ವ್ಯಕ್ತಿಯಿಂದ ಹಣ ಪಡೆದಿಲ್ಲ ಎಂದು ಕನಕಗಿರಿ ಶಾಸಕ ಬಸವರಾಜ್ ದಢೇಸುಗೂರು ಹೇಳಿದರು.
ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿದ ಅವರು, ಆಡಿಯೋದಲ್ಲಿನ ಧ್ವನಿ ನನ್ನದೇ. ಆದರೆ, ನಾನು ಹಣ ಪಡೆದಿಲ್ಲ. ಬೇರೆ ಇಬ್ಬರ ನಡುವೆ ಜಗಳ ಉಂಟಾಗಿತ್ತು. ಅದನ್ನು ಪರಿಹರಿಸುವಂತೆ ನನ್ನ ಬಳಿ ಬಂದಿದ್ದರು. ಅವರಿಬ್ಬರನ್ನೂ ಒಟ್ಟುಗೂಡಿಸಿ, ರಾಜಿ ಪಂಚಾಯಿತಿ ನಡೆಸಿದ್ದೇನೆ. ಅದೇ ಸಂಭಾಷಣೆಯನ್ನು ವೈರಲ್ ಮಾಡಿದ್ದಾರೆ. ಪಂಚಾಯತಿ ಬಗ್ಗೆ ಹೇಳಲಾಗುವುದಿಲ್ಲ. ವರ್ಷಗಳ ಹಿಂದಿನಿಂದಲೂ ಈ ಸಮಸ್ಯೆ ಇತ್ತು. ಪರಿಹರಿಸುವಂತೆ ನನ್ನನ್ನು ಕೇಳಿದ್ದರು. ಹಾಗಾಗಿ ಈ ಕುರಿತು ಮಾತನಾಡಿದ್ದೇನೆ. ಚುನಾವಣಾ ವರ್ಷವಾಗಿದ್ದು, ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ. ಹೀಗಾಗಿ ಆಡಿಯೋ, ವಿಡಿಯೋ ವೈರಲ್ ಮಾಡುತ್ತಿದ್ದಾರೆ ಎಂದರು.

Exit mobile version