ಬೈಲಹೊಂಗಲ: ತಾಲೂಕಿನ ಭಾವಿಹಾಳ ಗ್ರಾಮದಲ್ಲಿ ಜಮೀನು ವಿವಾದ ಎರಡು ಕುಟುಂಬಗಳ ಮಧ್ಯೆ ಕಟ್ಟಿಗೆಗಳಿಂದ ಪರಸ್ಪರ ಹೊಡೆದಾಡಿಕೊಳ್ಳುವ ದೃಶ್ಯ ವೈರಲ್ ಆಗಿದೆ.
ಜಮೀನಲ್ಲಿರುವ ಸಾಗವಾನಿ ಮರ ಕಡಿದ ಹಿನ್ನೆಲೆಯಲ್ಲಿ ಗ್ರಾಮದ ಮಹಾರುದ್ರಪ್ಪ ಕುಂಬಾರ, ಶಂಕರೆಪ್ಪ ಕುಂಬಾರ ಕುಟುಂಬಗಳ ಮಧ್ಯೆ ದೊಣ್ಣೆಗಳಿಂದ ಹೊಡೆದಾಡುವ ದೃಶ್ಯ ವೈರಲಾಗಿದೆ. ಕೋರ್ಟ್ ಮೆಟ್ಟಿಲೇರಿದ್ದ ಆರೋಪಿ ಶಂಕರೆಪ್ಪ ಕುಂಬಾರ.
ಜಮೀನಿನಲ್ಲಿ ಬೆಳೆದಿದ್ದ ಸಾಗುವಾನಿ ಮರಗಳನ್ನು ಕಡಿದಿದ್ದ ಆರೋಪ. ಕಡಿದ ಸಾಗುವಾನಿ ಮರಗಳನ್ನು ಒಯ್ಯಲು ಬಂದಾಗ ಈ ಗಲಾಟೆ ನಡೆದಿದೆ ಎನ್ನಲಾಗಿದೆ ಎರಡು ಕುಟುಂಬಗಳ ಮಧ್ಯೆ ತೀವ್ರ ವಾಗ್ವಾದ, ಹೊಡೆದಾಟ ನಡೆದು ನಾಲ್ವರಿಗೆ ಗಾಯಗಳಾಗಿದ್ದು ಅವರನ್ನು ಬೈಲಹೊಂಗಲ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಈ ಪ್ರಕರಣ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.