Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ಮಾಡಿ ಕೊಡಬೇಡಿ

ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ಮಾಡಿ ಕೊಡಬೇಡಿ

0

ಮಂಗಳೂರು: ಇಸ್ರೇಲ್ ಮತ್ತು ಪ್ಯಾಲೇಸ್ತೇನ್ ನಡುವಿನ ಯುದ್ದ ತಾರಕಕ್ಕೇರಿದೆ. ಹಮಾಸ್ ಉಗ್ರರು ಸಾವಿರಾರು ಅಮಾಯಕರ ಜೀವ ಬಲಿ ಪಡೆದಿದ್ದಾರೆ‌. ಆದರೆ ಮಂಗಳೂರಿನ ವ್ಯಕ್ತಿಯೊಬ್ಬ ಹಮಾಸ್ ಉಗ್ರರನ್ನು ‘ದೇಶಪ್ರೇಮಿಗಳು’ ಎಂದು ಕರೆದು ವಿಡಿಯೋ ಮಾಡಿ ಹರಿಬಿಟ್ಟು ವಿವಾದ ಸೃಷ್ಟಿಸಿದ್ದಾನೆ.
ಸಾಮಾಜಿಕ ತಾಣಗಳಲ್ಲಿ ಮಂಗಳೂರಿನ ಝಾಕೀರ್ ಎಂಬಾತನ ವಿಡಿಯೋ ವೈರಲ್(Video viral) ಆಗಿದೆ. ಮಂಗಳೂರಿನ ಬಂದರು ರಸ್ತೆಯ ಝಾಕೀರ್ ಎಂಬಾತನ ವಿಡಿಯೋ ಇದಾಗಿದ್ದು, ‘ದೇಶಪ್ರೇಮಿ ಹಮಾಸ್ ಯೋಧರಿಗೆ ವಿಜಯವಾಗಲಿ’ ಎಂದು ಹೇಳಿದ್ದಾನೆ. ಮಸೀದಿಯ ಶುಕ್ರವಾರದ ನಮಾಜ್‌ನಲ್ಲಿ ಪ್ರಾರ್ಥಿಸಿ ಅಂದಿರೋ ಝಾಕೀರ್, ತಾನು ವಿಶ್ವ ಖಬ್ರುಸ್ತಾನ್ ಪ್ರೇಮಿ ಸಂಘದ ಸದಸ್ಯ ಅಂತ ಹೇಳಿಕೊಂಡಿದ್ದಾನೆ.
ಪ್ಯಾಲೆಸ್ತೀನ್, ಗಾಜಾ ಹಾಗೂ ದೇಶಪ್ರೇಮಿ ಹಮಾಸ್ ಯೋಧರಿಗೆ ವಿಜಯವಾಗಲು ಪ್ರಾರ್ಥಿಸಿ ಎಂದು ಮನವಿ ಮಾಡಿರೋ ಆತ, ಶುಕ್ರವಾರದ ನಮಾಜ್‌ನಲ್ಲಿ ಪ್ರತ್ಯೇಕವಾಗಿ ಪ್ರಾರ್ಥಿಸಿ ಅಂತ ವಿಶ್ವ ಖಬ್ರುಸ್ತಾನ್ ಪ್ರೇಮಿ ಸಂಘದ ಸದಸ್ಯರಿಗೆ ಕರೆ ಕೊಟ್ಟಿದ್ದಾನೆ. ಸದ್ಯ ಉಗ್ರರಿಗೆ ಬೆಂಬಲ ಕೊಡುವ ಇವನ ಮೇಲೆ ಮಂಗಳೂರು ಪೊಲೀಸ್ ಇಲಾಖೆ ಕಾನೂನು ಕ್ರಮ ಕೈಗೊಳ್ಳಲಿ ಎಂದು ವಿಶ್ವಹಿಂದೂ ಪರಿಷತ್ ಭಜರಂಗದಳ ಆಗ್ರಹಿಸಿದೆ. ಅಧಿಕಾರಿಗಳೇ ದೇಶಪ್ರೇಮಿಗಳು ಎಚ್ಚೆತುಕೊಂಡು ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ಮಾಡಿ ಕೊಡಬೇಡಿ. ಕೊಡಲೇ ಇವನ ಬಂಧನವಾಗಲಿ ಎಂದು ವಿಎಚ್ ಪಿ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ಎಚ್ಚರಿಕೆ ನೀಡಿದ್ದಾರೆ.

Exit mobile version