Home ನಮ್ಮ ಜಿಲ್ಲೆ ಎಲ್ಲಿದ್ದೀರಪ್ಪೋssssss.. : ಸಚಿವರು, ಮಂತ್ರಿಗಳ ವಿರುದ್ಧ ರೈತರ ಬೊಬ್ಬೆ

ಎಲ್ಲಿದ್ದೀರಪ್ಪೋssssss.. : ಸಚಿವರು, ಮಂತ್ರಿಗಳ ವಿರುದ್ಧ ರೈತರ ಬೊಬ್ಬೆ

0
bobbe

ಧಾರವಾಡ: ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸುವ ಸಚಿವರು, ಶಾಸಕರು ಎಲ್ಲಿದ್ದಿರೋ ಎಂದು ಬೊಬ್ಬೆ ಹಾಕಿದ ಘಟನೆ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯಿತು.
ಸಕ್ಕರೇ ಸಚಿವರು ಎಲ್ಲಿದ್ದೀರೋ, ಮುಖ್ಯಮಂತ್ರಿಗಳು ಎಲ್ಲಿದ್ದೀರಪ್ಪೋ, ನಮ್ಮ ಓಟು ಪಡೆದು ಅಧಿಕಾರಕ್ಕೆ ಬಂದೋರು ಎಲ್ಲಿದ್ದೀರಪ್ಪೋ ಎಂದು ಬೊಬ್ಬೆ ಹಾಕಿ ಅಕ್ರೋಶ ಹೊರಹಾಕಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ನಿಮ್ಮ ಸಮಸ್ಯೆ ಸರಕಾರದ ಗಮನಕ್ಕೆ ತರುವುದಾಗಿ ತಿಳಿಸಿದರೂ ಅದಕ್ಕೆ ಒಪ್ಪದ ರೈತರು ಸಕ್ಕರೆ ಸಚಿವರು ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು.

Exit mobile version