Home ನಮ್ಮ ಜಿಲ್ಲೆ ಕೊಪ್ಪಳ ಅಪರಾಧ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ

ಅಪರಾಧ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ

0
ಅಪರಾಧ ತಡೆ

ಕುಷ್ಟಗಿ: ತಾಲೂಕಿನಾದ್ಯಂತ ಅಪರಾಧ ಚಟುವಟಿಕೆಗಳು ನಡೆಯದಂತೆ ಪೊಲೀಸರಿಗೆ ಸಹಕಾರ ನೀಡಿದಾಗ ಅಪರಾಧ ಮುಕ್ತ ಸಮಾಜ ನಿರ್ಮಾಣವಾಗಲಿದೆ ಎಂದು ಅಪರಾಧ ವಿಭಾಗದ( ಕ್ರೈಂ) ಪಿಎಸ್‌ಐ ಮಾನಪ್ಪ ವಾಲ್ಮೀಕಿ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಪೊಲೀಸ್ ಚಟುವಟಿಕೆ ಮತ್ತು ಅಪರಾಧ ತಡೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲಾದರೂ ಕಳ್ಳತನ ಪ್ರಕರಣ, ಅಪರಾಧ ಪ್ರಕರಣ ಹಾಗೂ ಇನ್ನಿತರ ಚಟುವಟಿಕೆಗಳು ಕಂಡುಬಂದರೆ ೧೧೨ಕ್ಕೆ ಕರೆ ಮಾಡಬೇಕು. ಅಥವಾ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದರು.
ಬಸ್ ಸಂಚರಿಸುವಾಗ ವಿದ್ಯಾರ್ಥಿನಿಯರಿಗೆ ಮಹಿಳೆಯರಿಗೆ ಯಾವುದಾದರೂ ತೊಂದರೆ ಕೊಡುವುದಾಗಲಿ, ಚುಡಾಯಿಸುವುದಾಗಲಿ ಮಾಡಬಾರದು. ಒಂದು ವೇಳೆ ಈ ರೀತಿ ಪ್ರಕರಣ ಕಂಡುಂದಲ್ಲಿ ಅಂಥವರ ವಿರುದ್ಧ ಪೊಲೀಸ್ ಇಲಾಖೆ ಶಿಸ್ತು ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದರು. ಠಾಣೆಗೆ ಬಂದು ಊರಿನ ಸಮಸ್ಯೆ ಹೇಳಲು ಆಗುವುದಿಲ್ಲ ಎಂದು ನಾವೇ ಊರಿಗೆ ಬಂದು ಸಮಸ್ಯೆ ಆಲಿಸುತ್ತೇವೆ. ಮುಕ್ತವಾಗಿ ಸಮಸ್ಯೆ ಹೇಳಿಕೊಳ್ಳಿ ಎಂದರು.

Exit mobile version