Home ಅಪರಾಧ 7 ಲಕ್ಷ ಮೌಲ್ಯದ ಚುನಾವಣಾ ಪ್ರಚಾರ ಸಾಮಗ್ರಿ ಜಪ್ತಿ

7 ಲಕ್ಷ ಮೌಲ್ಯದ ಚುನಾವಣಾ ಪ್ರಚಾರ ಸಾಮಗ್ರಿ ಜಪ್ತಿ

0

ಬೆಳಗಾವಿ:  ಖಾನಾಪುರ ಪಟ್ಟಣದ ಮುಖ್ಯರಸ್ತೆಯ ಲೋಕಮಾನ್ಯ ಭವನದ ಮುಂದುಗಡೆ ನಿಂತಿದ್ದ ಗೂಡ್ಸ್ ವಾಹನದಲ್ಲಿ ಅಪಾರ ಪ್ರಮಾಣದ ವಸ್ತುಗಳನ್ನು ಪತ್ತೆ ಹಚ್ಚಲಾಗಿದ್ದು, ಒಟ್ಟು 7 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಿಜೆಪಿ ಮುಖಂಡ  ಎ .ದಿಲೀಪ್ ಕುಮಾರ್ ಇವರ ಹೆಸರಿರುವ ಹಾಗೂ ಇವರ ಫೋಟೋ ಇರುವ, ಬಿಜೆಪಿ ಪಕ್ಷದ ಚಿಹ್ನೆ ಇರುವ ಚೀಲಗಳ ಸೇರಿದಂತೆ  ಸೀರೆಗಳು, ಗೋಡೆ ಗಡಿಯಾರಗಳು, ಮದ್ಯದ ಬಾಟಲಿಗಳು ಸೇರಿದಂತೆ ವಾಹನವನ್ನು ವಶಪಡಿಕೊಳ್ಳಲಾಗಿದೆ. ಮಿನಿ ಗೂಡ್ಸ್ ವಾಹನದಲ್ಲಿ ಸಂಗಪ್ಪ ಮಲ್ಲಿಕಾರ್ಜುನ್ ಕುಡಚಿ, ಬೆಂಡಿಗೆರೆ ಗ್ರಾಮ ಪಂಚಾಯತ್ ಮೆಂಬರ್ ಎಂಬುವರು ಬೆಳಗಾವಿ ನಗರದ ಬಾಕ್ಸೈಟ್ ರಸ್ತೆಯ ಬಸ್ ಸ್ಟ್ಯಾಂಡ್ ನಲ್ಲಿದ್ದ ವಸ್ತುಗಳನ್ನು ವಾಹನದಲ್ಲಿ ತಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಅಧಿಕಾರಿಗಳು ಮುಂದಿನ ಕ್ರಮ ಜರುಗಿಸಿದ್ದಾರೆಂದು ತಿಳಿದುಬಂದಿದೆ.

Exit mobile version