
ರಾಯಚೂರು- ಮದ್ಯದ ಅಂಗಡಿಯ ಮಾಲೀಕನಿಗೆ 2 ಲಕ್ಷ ರೂ. ಬೇಡಿಕೆ ಇಟ್ಟಿದ್ದ ಅಬಕಾರಿ ಇಲಾಖೆಯ ನಿರೀಕ್ಷಕ ಬಸವರಾಜ ಕಾಕರಗಲ್ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಎರಡು ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ನಿರೀಕ್ಷಕ ಅವರಿಗೆ ಮದ್ಯದ ಅಂಗಡಿ ಮಾಲೀಕ ಹನುಮಂತ 1 ಲಕ್ಷ ರೂ. ನೀಡುತ್ತಿರುವಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಬಲೆ ಕೆಡವಿದ್ದಾರೆ. ಅಲ್ಲದೇ ಅಬಕಾರಿ ನಿರೀಕ್ಷಕರ ನಿವಾಸದಲ್ಲಿದ್ದ ದಾಖಲೆಯಿಲ್ಲದ ಎರಡೂವರೆ ಲಕ್ಷ ಜಪ್ತಿ ಮಾಡಿಕೊಂಡು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಲೋಕಾಯುಕ್ತ ಇನ್ಸಪೆಕ್ಟರ್ ನಾಗರಾಜ ಮೇಕಾ ನೇತೃತ್ವದಲ್ಲಿ ದಾಳಿ ನಡೆದಿದೆ.