Home ಅಪರಾಧ ರಸ್ತೆ ಅಪಘಾತ:7 ಸಾವು

ರಸ್ತೆ ಅಪಘಾತ:7 ಸಾವು

0


ಬಳ್ಳಾರಿ: ಕ್ರೂಸರ್ – ಲಾರಿ ನಡುವೆ ಡಿಕ್ಕಿ ಸಂಭವಿಸಿ 7 ಜನ ಕರ್ನಾಟಕ, ಆಂಧ್ರ ಮೂಲದವರು ದುರ್ಮರಣಕ್ಕೆ ಈಡಾದ ಘಟನೆ ಕಡಪ ಜಿಲ್ಲೆ ತಾಡಪತ್ರಿ ಬಳಿ ವರದಿ ಆಗಿದೆ. ವಿಚಿತ್ರ ಅಂದರೆ ಅಪಘಾತಕ್ಕೆ ಈಡಾದವರನ್ನು ನೋಡಲು ದ್ವಿಚಕ್ರ ವಾಹನದಲ್ಲಿ ಹೊರಟ ಗುತ್ತಿಗೆದಾರ ಸಹ ಅಪಘಾತಕ್ಕೆ ಈಡಾಗಿ ಆಸ್ಪತ್ರೆ ಸೇರಿದ್ದಾರೆ.
ಕಂಪ್ಲಿ ಪಟ್ಟಣದ ಗುತ್ತಿಗೆದಾರ ಭಾಸ್ಕರ್ ರೆಡ್ಡಿ ಸಂಬಂಧಿಕರು ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ಅವರನ್ನು ನೋಡಲೆಂದು ಬೈಕ್ ನಲ್ಲಿ ಭಾಸ್ಕರ್ ರೆಡ್ಡಿ ಹೊರಟಿದ್ದರು.
ತೂಫಾನ್ ವಾಹನದಲ್ಲಿ ತಿರುಪತಿಗೆ ಹೋಗಿದ್ದ ಕುಟುಂಬ ಸದಸ್ಯರು, ಮತ್ತು ಬಂಧುಗಳು ವಾಪಸ್ಸಾಗುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ.
ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Exit mobile version