Home ಅಪರಾಧ ರಸ್ತೆ ಅಪಘಾತ: ಮದುಮಗ ದುರ್ಮರಣ

ರಸ್ತೆ ಅಪಘಾತ: ಮದುಮಗ ದುರ್ಮರಣ

0

ಬೀದರ್: ಇಲ್ಲಿಯ ನೌಬಾದ್ ಬಳಿ ಭಾನುವಾರ ಸಾರಿಗೆ ಬಸ್ ಮತ್ತು ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ.
ಕಮಲನಗರ ತಾಲ್ಲೂಕಿನ ಬಳತ ಗ್ರಾಮದ ಅರುಣ್ ಪಡಸಾಲೆ(34) ಸಾವಿಗೀಡಾದ ಯುವಕ. ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದ ಅರುಣ್ ಮದುವೆಯಾಗಿ ಕೇವಲ ಎರಡು ದಿನಗಳಾಗಿದ್ದವು. ಬೈಕ್ ಸವಾರ ಹೆಲ್ಮೆಟ್ ಧರಿಸಿರಲಿಲ್ಲ. ಧರಿಸಿದ್ದರೆ ಅವಾಂತರ ಗಂಭೀರ ಸ್ವರೂಪ ಪಡೆಯುತ್ತಿರಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Exit mobile version