Home ಅಪರಾಧ ಮಾಜಿ ಯೋಧನ ಮೇಲೆ ಫೈರಿಂಗ್

ಮಾಜಿ ಯೋಧನ ಮೇಲೆ ಫೈರಿಂಗ್

0
ಮಾಜಿ ಯೋಧ

ಬಾಗಲಕೋಟೆ: ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ಮಾಜಿ ಯೋಧನ ಮೇಲೆ ಮಹಾರಾಷ್ಟ್ರದಿಂದ ಬಂದ ವ್ಯಕ್ತಿ ಹಲ್ಲೆ ನಡೆಸಿ ಗುಂಡು ಹಾರಿಸಿರುವ ಘಟನೆ ವರದಿಯಾಗಿದೆ.
ಮಾಜಿ ಯೋಧ ಶ್ರೀಧರ ಕಾಸಾರ ಹಲ್ಲೆಗೊಳಗಾದ ವ್ಯಕ್ತಿ. ತಾಸಗಾಂವ ಮೂಲದ ಅನಿಲ್ ಪಾಟೀಲ ಎಂಬಾತ ತನ್ನ ನಾಲ್ವರು ಸಹಚರರೊಂದಿಗೆ ಆಗಮಿಸಿ ಏಕಾಏಕಿ ಹಲ್ಲೆ ನಡೆಸಿ ಯೋಧನ ಮೇಲೆ ಗುಂಡು ಹಾರಿಸಿದ್ದು, ಅದೃಷ್ಟವಶಾತ್ ಅದು ತಾಗಿಲ್ಲ.
ಗಾಯಗೊಂಡಿರುವ ಯೋಧ ಶ್ರೀಧರ್ ಕಾಸಾರ್ ಅವರನ್ನು ಜಮಖಂಡಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಣದ್ರಾಕ್ಷಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ಹಲ್ಲೆ ನಡೆದಿದೆ ಎನ್ನಲಾಗಿದೆ.

Exit mobile version