Home ಅಪರಾಧ ಪತ್ನಿ, ಮಕ್ಕಳನ್ನು ಕಾಲುವೆಗೆ ತಳ್ಳಿಆತ್ಮಹತ್ಯೆ ಮಾಡಿಕೊಂಡ ಯುವಕ

ಪತ್ನಿ, ಮಕ್ಕಳನ್ನು ಕಾಲುವೆಗೆ ತಳ್ಳಿ
ಆತ್ಮಹತ್ಯೆ ಮಾಡಿಕೊಂಡ ಯುವಕ

0

ಯಕ್ಸಂಬಾ: ಸಮೀಪದ ಭೋಜವಾಡಿ ರಸ್ತೆ ಮಾರ್ಗದಲ್ಲಿರುವ ಜಮೀನಿನಲ್ಲಿ ಯುವಕ ಸಂದೀಪ ಅಣ್ಣಾಸೋ ಪಾಟೀಲ(40) ಆತ್ಮಹತ್ಯೆ ಮಾಡಿಕೊಂಡಿದ್ದು ಇದಕ್ಕೂ ಮೊದಲು ಪತ್ನಿ ಹಾಗೂ ಮಕ್ಕಳನ್ನು ಕೆರೆಗೆ ತಳ್ಳಿದ್ದಾನೆ.
ಕೊಲ್ಲಾಪುರ ಜಿಲ್ಲೆಯ ಕರವೀರ ತಾಲೂಕಿನ ಹಲಸವಾಡೆ ಗ್ರಾಮದ ಭೋಸಲೆ ಗಲ್ಲಿಯ ರಹವಾಸಿ ಸಂದೀಪ ಅಣ್ಣಾಸೋ ಪಾಟೀಲ ಪತ್ನಿ ಹಾಗೂ ಮಕ್ಕಳನ್ನು ಕೊಲ್ಲಾಪುರ ಜಿಲ್ಲೆಯ ಕಸಬಾ ಸಂಗಾಂವ ಗ್ರಾಮದ ಬಳಿಯ ಕೆರೆಯೊಂದರಲ್ಲಿ ತಳ್ಳಿ ತಾನು ಭೋಜವಾಡಿ ಗ್ರಾಮದ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಭೋಜವಾಡಿ ಗ್ರಾಮದ ಹತ್ತಿರ ರಸ್ತೆಯ ಬದಿಯಲ್ಲಿ ಬೈಕ್ ನಿಲ್ಲಿಸಿ, ಜಮೀನಿಗೆ ತೆರಳಿ ನೇಣು ಬಿಗಿದುಕೊಂಡಿದ್ದಾನೆ. ಕೆರೆಯಲ್ಲಿ ಸಂದೀಪನ ಪತ್ನಿ ರಾಜಶ್ರೀ ಸಂದೀಪ ಪಾಟೀಲ(32) ಮತ್ತು ಮಗ ಸಮ್ಮಿತ ಸಂದೀಪ ಪಾಟೀಲ(12) ಸಾವನ್ನಪ್ಪಿದ್ದು, ಮಗಳು ಶ್ರೇಯಾ ಸಂದೀಪ ಪಾಟೀಲ(14) ಅಸ್ವಸ್ಥಳಾಗಿದ್ದಾಳೆ.

Exit mobile version