Home ಅಪರಾಧ ತಾಮ್ರಕ್ಕಾಗಿ ಲಾರಿ ಚಾಲಕನ ಕೊಲೆ

ತಾಮ್ರಕ್ಕಾಗಿ ಲಾರಿ ಚಾಲಕನ ಕೊಲೆ

0

ಹಾವೇರಿ: ಲಾರಿ ಚಾಲಕನನ್ನು ಬರ್ಬರವಾಗಿ ಕೊಲೆಗೈದು ಲಾರಿಯಲ್ಲಿ ಸಾಗಿಸುತ್ತಿದ್ದ ಕೋಟ್ಯಾಂತರ ರೂ, ಮೌಲ್ಯದ ತಾಮ್ರವನ್ನು ದರೋಡೆ ಮಾಡಿದ ಘಟನೆ ಶುಕ್ರವಾರ ಹಾವೇರಿ ಬಳಿಯ ರಾಷ್ಟ್ರಿಯ ಹೆದ್ದಾರಿಯಲ್ಲಿ ನಡೆದಿದೆ.
ಗೋವಿಂದ ನಾರಾಯಣ ಖಂಡೇಕರ (40) ಕೊಲೆಯಾಗಿರುವ ಚಾಲಕ. ರಾಷ್ಟ್ರೀಯ ಹೆದ್ದಾರಿಯಲ್ಲಿ ಮೀರಜ್ ನಿಂದ ಚೆನೈ ಗೆ ಹೊರಟಿದ್ದ ಲಾರಿಯನ್ನು ದರೋಡೆಕೋರರು ಅಡ್ಡಗಟ್ಟಿ ನಿಲ್ಲಿಸಿ ಚಾಲಕನನ್ನು ಬರ್ಬರವಾಗಿ ಕೊಲೆಗೈದು ಹಾವೇರಿ ಬಳಿಯ ಹೆದ್ದಾರಿ ಪಕ್ಕದಲ್ಲಿ ಎಸದಿದ್ದಾರೆ.
ನಂತರ ದರೋಡೆಕೊರರು ಲಾರಿಯಲ್ಲಿ ಸಾಗಿಸುತ್ತಿದ್ದ ಕೋಟ್ಯಾಂತರ ರೂ., ಮೌಲ್ಯದ ಸುಮಾರು 13 ಟನ್ ತಾಮ್ರವನ್ನು ಮತ್ತೊಂದು ಲಾರಿಗೆ ಲಿಪ್ಟ್ ಮಾಡಿಕೊಂಡು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version