Home ಅಪರಾಧ ತಂದೆಯನ್ನು ಕೊಂದು ಹೂತಿಟ್ಟ ಮಗ

ತಂದೆಯನ್ನು ಕೊಂದು ಹೂತಿಟ್ಟ ಮಗ

0

ರಾಯಚೂರು: ಹಣಕ್ಕಾಗಿ ಪೀಡಿಸುತ್ತಿದ್ದ ಮಗ ತಂದೆಯನ್ನೇ ಕೊಂದು ಹೆದ್ದಾರಿ ಪಕ್ಕದಲ್ಲಿ ಹೂತಿಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತಾಲೂಕಿನ ವಡ್ಲೂರು ಗ್ರಾಮದ ಶಿವನಪ್ಪ (65) ಮೃತ ವ್ಯಕ್ತಿ. ಈರಣ್ಣ (35) ಕೊಲೆಗೈದ ವ್ಯಕ್ತಿ. ಹೆದ್ದಾರಿಗೆ ಜಮೀನು ಹೋಗಿದ್ದರಿಂದ ಹಣ ಬಂದಿತ್ತು. ಹಣ ನೀಡುವಂತೆ ಮಗ ಕೇಳಿದಾಗ ತಂದೆ ನಿರಾಕರಿಸಿದ್ದಾನೆ. ಇದರಿಂದ ಮಗ ತಂದೆಯನ್ನು ಕೊಲೆ ಮಾಡಿದ್ದಾನೆ. ನಂತರ ಹೆದ್ದಾರಿ ಬಳಿ ಹೂತಿಟ್ಟಿದ್ದಾನೆ. ಯಾರಿಗೂ ಅನುಮಾನ ಬಾರದಂತೆ ಮನೆಯವರ ಜತೆಗೆ ಹೋಗಿ ತಂದೆ ಕಾಣೆಯಾಗಿದ್ದಾನೆ ಎಂದು ದೂರು ನೀಡಿದ್ದಾರೆ‌. ಮೃತನ ಸಹೋದರರು ಅನುಮಾನ ಬಂದು ಮಗನನ್ನು ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದು, ಗ್ರಾಮೀಣ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.

Exit mobile version