Home ಅಪರಾಧ ಟಾಟಾ ಏಸ್ ವಾಹನ ಪಲ್ಟಿ: 18 ಜನರಿಗೆ ಗಾಯ

ಟಾಟಾ ಏಸ್ ವಾಹನ ಪಲ್ಟಿ: 18 ಜನರಿಗೆ ಗಾಯ

0
Tata Ace

ಮುದಗಲ್: ಟಾಟಾ ಏಸ್ ವಾಹನದ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ವಾಹನ ಪಲ್ಟಿಯಾಗಿ 18ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಶನಿವಾರ ಮುದಗಲ್ ಪಟ್ಟಣದ ಹೊರವಲಯದ ಬಾಬಾ ಕಟ್ಟೆ ಸಮೀಪದಲ್ಲಿ ನಡೆದಿದೆ.
ಘಟನೆಯಲ್ಲಿ ಬಸ್ಸಪ್ಪ(70), ಭಾಗ್ಯ(16), ಅಜಯ್ (9), ಅಮರಮ್ಮ(60), ಯಲ್ಲಮ್ಮ(60), ಯಮುನಪ್ಪ(62) ಸೇರಿದಂತೆ ಹೊಕ್ರಾಣಿ ಗ್ರಾಮದ 18 ಜನರು ಗಾಯಗೊಂಡಿದ್ದಾರೆ. ಗಡ್ಡಿಗದ್ದೆಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ತೆರಳಿದ್ದ ಹೊಕ್ರಾಣಿ ಮೂಲದ ಕುಟುಂಬಸ್ಥರು ಪ್ರಯಾಣ ಮಾಡುತ್ತಿದ್ದ ಟಾಟಾ ಏಸ್ ಚಾಲಕನ ನಿಯಂತ್ರಣ ತಪ್ಪಿದ ಹಿನ್ನೆಲೆಯಲ್ಲಿ ಈ ಅಪಘಾತ ನಡೆದಿದೆ ಎಂದು ತಿಳಿದುಬಂದಿದೆ.
ಗಾಯಗೊಂಡವರನ್ನು ಮುದಗಲ್‌ನ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಲಿಂಗಸಗೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣವನ್ನು ಮುದಗಲ್ ಠಾಣೆಯಲ್ಲಿ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಮುದಗಲ್ ಠಾಣೆ ಪಿಎಸ್ಐ ಪ್ರಕಾಶರೆಡ್ಡಿ ಡಂಬಳ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Exit mobile version