Home ಅಪರಾಧ ಆಸ್ತಿಗಾಗಿ ತಂದೆಯ ಕತ್ತುಹಿಸುಕಿ ಕೊಂದ ಮಗ

ಆಸ್ತಿಗಾಗಿ ತಂದೆಯ ಕತ್ತುಹಿಸುಕಿ ಕೊಂದ ಮಗ

0

ಕುಷ್ಟಗಿ: ತನ್ನ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಮರುದಿನ ಗಂಡ ತನ್ನ ಪಿತ್ರಾರ್ಜಿತ ಆಸ್ತಿಗಾಗಿ ತಂದೆಯನ್ನು ಕತ್ತುಹಿಸುಕಿ ಕೊಲೆ ಮಾಡಿರುವ ದುರ್ಘಟನೆ ತಾಲೂಕಿನ ಹಿರೇಬನ್ನಿಗೋಳ ಗ್ರಾಮದಲ್ಲಿ ನಡೆದಿದೆ.
ಭೀಮಣ್ಣ ಮುರುಡಿ ಎಂಬಾತನೇ ತನ್ನ ತಂದೆ ದ್ಯಾಮಣ್ಣ ಮುರುಡಿ(65) ಅವರನ್ನು ಕೊಲೆ ಮಾಡಿದ್ದಾನೆ. ಕುಟುಂಬ ಹೊಲದಲ್ಲಿ ವಾಸವಾಗಿದ್ದು ಭೀಮಣ್ಣ ಮುರುಡಿ ಪತ್ನಿ ಮೀನಾಕ್ಷಿ ಜೀವನದಲ್ಲಿ ಜಿಗುಪ್ಸೆಗೊಂಡು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ದ್ಯಾಮಣ್ಣ ಹೆಸರಿನಲ್ಲಿದ್ದ ಮೂರು ಎಕರೆ ಜಮೀನನ್ನು ಇಬ್ಬರು ಮೊಮ್ಮಕ್ಕಳ ಹೆಸರಿಗೆ ವರ್ಗಾವಣೆ ಮಾಡಿಕೊಡುತ್ತೇನೆ ಎಂದು ವಾಗ್ದಾನ ಮಾಡಿದ್ದನು. ಇದರಿಂದ ಮಗ ಭೀಮಣ್ಣನಿಗೆ ಆಸ್ತಿ ಸಿಗೋದಿಲ್ಲ ಎಂದು ತೋಟದ ಮನೆಯಲ್ಲಿದ್ದ ತಂದೆ ದ್ಯಾಮಣ್ಣನ ಕತ್ತು ಹಿಸುಕಿ ಕೊಲೆ ಮಾಡಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.
ಇನ್ನು ತಾಯಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಈಕೆಯ ಮಕ್ಕಳಿಗೆ ಆಸರೆ ಆಗಬೇಕಾಗಿದ್ದ ಅಜ್ಜ ಕೊಲೆಯಾಗಿದ್ದಾನೆ. ಮೃತಪಟ್ಟ ಮಹಿಳೆಯ ಮಕ್ಕಳ ತಂದೆ ಜೈಲು ಪಾಲಾಗಿರುವುದು ನಿಜಕ್ಕೂ ಘನಘೋರ ದುರಂತವಾಗಿದೆ.

Exit mobile version