Home ಅಪರಾಧ ಆಂಬ್ಯುಲೆನ್ಸ್‌ ಅಪಘಾತ: ಮೂವರು ಸಾವು, ಮೂವರು ಗಂಭೀರ

ಆಂಬ್ಯುಲೆನ್ಸ್‌ ಅಪಘಾತ: ಮೂವರು ಸಾವು, ಮೂವರು ಗಂಭೀರ

0
accident

ರೋಗಿಯನ್ನು ಹೊತ್ತೊಯ್ಯುತ್ತಿದ್ದ ಆಂಬ್ಯುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಮೂವರು ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಕೇರಳದ ತ್ರಿಶೂರ್‌ ಜಿಲ್ಲೆಯ ಪಂಥಾಲೂರ್ನನಲ್ಲಿ ನಡೆದಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಫೆಮಿನಾ(25) ಮತ್ತು ಆಕೆಯ ಪತಿ‌ ಅಬಿದ್(35) ಮತ್ತು ರಹಮತ್‌(47) ಎನ್ನುವವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಆಂಬ್ಯುಲೆನ್ಸ್ ಚಾಲಕ ಶುಹೈಬ್(29), ಫಾರಿಸ್(21) ಮತ್ತು ಸಾದಿಕ್ (21) ಎನ್ನುವವರು ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Exit mobile version