Home ಅಪರಾಧ ಅಪಘಾತ: ಹೊತ್ತಿ ಉರಿದ ಲಾರಿಗಳು

ಅಪಘಾತ: ಹೊತ್ತಿ ಉರಿದ ಲಾರಿಗಳು

0

ಶಿಗ್ಗಾಂವ: ಬಟ್ಟೆ ತುಂಬಿದ ಲಾರಿಗೆ ಮತ್ತೊಂದು ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಲಾರಿಗಳು ಹೊತ್ತಿ ಉರಿದ ಘಟನೆ ಪಟ್ಟಣದ ರಂಭಾಪುರಿ ಕಾಲೇಜ್ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ತಡರಾತ್ರಿ ನಡೆದಿದೆ.
ಸ್ಪಿರಿಟ್ ತುಂಬಿದ ಲಾರಿಯೊಂದು ಹಿಂಬದಿಯಿಂದ ಬಂದು ಗುದ್ದಿದ ಪರಿಣಾಮ ಸ್ಪಿರಿಟ್ ಸೋರಿಕೆಯಾಗಿ ಎರಡು ಲಾರಿಗಳಿಗೆ ಬೆಂಕಿ ಹೊತ್ತಿಕೊಂಡಿದ್ದು ಎರಡು ಲಾರಿಗಳು ಹೊತ್ತಿ ಉರಿದಿವೆ ಎನ್ನಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version