Home ಅಪರಾಧ ಅಂಜಲಿ ಕೊಲೆಗೆ ಬಳಸಿದ್ದ ಚಾಕು ಪತ್ತೆ…!

ಅಂಜಲಿ ಕೊಲೆಗೆ ಬಳಸಿದ್ದ ಚಾಕು ಪತ್ತೆ…!

0

ಹುಬ್ಬಳ್ಳಿ: ಅಂಜಲಿ ಅಂಬಿಗೇರ ಕೊಲೆಗೆ ಬಳಸಲಾಗಿದ್ದ ಚಾಕು ಕೊನೆಗೂ ಸಿಐಡಿ ಅಧಿಕಾರಿಗಳ ಕೈ ಸೇರಿದೆ.
ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದ ಸಿಐಡಿ ಅಧಿಕಾರಿಗಳು ಅಂಜಲಿ ಹಂತಕ ಗಿರೀಶ ಸಾವಂತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರು‌. ಅಲ್ಲದೆ, ಆತನ ಹೇಳಿಕೆಯ ಮೇರೆಗೆ ವೀರಾಪುರ ಓಣಿಯ ಅಂಜಲಿ ನಿವಾಸದ ಬಳಿಯೂ ಮಾರಕಾಸ್ತ್ರಕ್ಕೆ ತೀವ್ರ ಶೋಧ ನಡೆಸಲಾಗಿತ್ತು. ಆದರೆ, ಕೊಲೆಗೆ ಬಳಸಲಾಗಿದ್ದ ಚಾಕು ಮಾತ್ರ ಪತ್ತೆಯಾಗಿರಲಿಲ್ಲ.
ದಾವಣಗೆರೆ ತಾಲೂಕಿನ ಮಾಯಕೊಂಡ ಸಮೀಪದ ಬೊಮ್ಮನಹಳ್ಳಿ ಬಳಿಯ ರೈಲು ಹಳಿಯ ಪಕ್ಕದಲ್ಲಿ ಅಂಜಲಿ ಕೊಲೆಗೆ ಬಳಸಲಾಗಿದ್ದ ಚಾಕು ಕೊನೆಗೂ ಪತ್ತೆಯಾಗಿದೆ. ಇದೀಗ ಚಾಕುವನ್ನು ಸಿಐಡಿ ತಂಡ ವಶಕ್ಕೆ ಪಡೆದುಕೊಂಡಿದೆ.

Exit mobile version