ಕೋಲಾರ Archives - Samyukta Karnataka

ಮಾಜಿ ಶಾಸಕ, ಹಿರಿಯ ವಕೀಲ ಕೆ.ಆರ್. ಶ್ರೀನಿವಾಸಯ್ಯ ನಿಧನ
ರಾಜಕೀಯ ಮತ್ತು ಕಾನೂನು ಕ್ಷೇತ್ರದ ಹಿರಿಯ ಧುರೀಣ ಕೆ.ಆರ್. ಶ್ರೀನಿವಾಸಯ್ಯ ನಿಧನ : ಸರಳತೆ, ಮೌಲ್ಯಾಧಾರಿತ ರಾಜಕಾರಣದ ಪ್ರತೀಕ ಕೆ.ಆರ್. ಶ್ರೀನಿವಾಸಯ್ಯ 92ರ ಹರೆಯದಲ್ಲೂ ವಕೀಲ ವೃತ್ತಿ ಮಾಡುತ್ತಿದ್ದರು.

ಕೋಲಾರ: ಕೋಲಾರ ಜಿಲ್ಲೆಯ ಹಿರಿಯ ರಾಜಕಾರಣಿ, ಮಾಜಿ ಶಾಸಕ ಹಾಗೂ ಖ್ಯಾತ ವಕೀಲ ಕೆ.ಆರ್. ಶ್ರೀನಿವಾಸಯ್ಯ ಅವರು ಶುಕ್ರವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಅವರ ನಿಧನದ ಸುದ್ದಿಯಿಂದ ಕೋಲಾರ ಜಿಲ್ಲೆಯ ರಾಜಕೀಯ, ಸಾಮಾಜಿಕ ಹಾಗೂ ಕಾನೂನು ವಲಯದಲ್ಲಿ ತೀವ್ರ ದುಃಖದ ವಾತಾವರಣ ನಿರ್ಮಾಣವಾಗಿದೆ.

ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದ ಶ್ರೀನಿವಾಸಯ್ಯ ಅವರು ಪ್ರಾಮಾಣಿಕತೆ, ಸರಳತೆ ಹಾಗೂ ಮೌಲ್ಯಾಧಾರಿತ ರಾಜಕಾರಣದ ಮೂಲಕ ಜನಮನದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದರು. ರಾಜಕೀಯ ನಾಯಕನಾಗಿ ಮಾತ್ರವಲ್ಲದೆ, ಹಿರಿಯ ವಕೀಲರಾಗಿ ಹಾಗೂ ಸಮಾಜಮುಖಿ ವ್ಯಕ್ತಿತ್ವವಾಗಿ ಅವರು ಅಪಾರ ಗೌರವ ಗಳಿಸಿದ್ದರು.

ಇದನ್ನೂ ಓದಿ: ರಾಜ್ಯದ ಎರಡು ಪ್ರಮುಖ ಕೋರ್ಟ್‌ಗಳಿಗೆ ಏಕಕಾಲದಲ್ಲಿ ಬಾಂಬ್ ಬೆದರಿಕೆ

ಎರಡು ಬಾರಿ ಶಾಸಕರಾಗಿ ಸೇವೆ : ಕೆ.ಆರ್. ಶ್ರೀನಿವಾಸಯ್ಯ ಅವರು 1983 ಮತ್ತು 1985ರ ವಿಧಾನಸಭಾ ಚುನಾವಣೆಯಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಕೋಲಾರ ಕ್ಷೇತ್ರದಿಂದ ಗೆಲುವು ಸಾಧಿಸಿ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಆ ಅವಧಿಯಲ್ಲಿ ಜನತಾ ಪರಿವಾರದ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಜನನಾಯಕನಾಗಿ ಅವರು ಹೆಸರು ಮಾಡಿದ್ದರು. ಕ್ಷೇತ್ರದ ಅಭಿವೃದ್ಧಿ, ಮೂಲಸೌಕರ್ಯ ಹಾಗೂ ಸಾರ್ವಜನಿಕ ಕಲ್ಯಾಣದ ವಿಷಯಗಳಲ್ಲಿ ಅವರು ಸದಾ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದರು.

ರಾಮಕೃಷ್ಣ ಹೆಗಡೆ ಅವರ ಆಪ್ತ ವಲಯದಲ್ಲಿ ಗುರುತು: ರಾಜ್ಯದ ರಾಜಕೀಯ ಇತಿಹಾಸದಲ್ಲಿ ಮಹತ್ವದ ಸ್ಥಾನ ಹೊಂದಿರುವ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಆಪ್ತ ವಲಯದಲ್ಲಿ ಕೆ.ಆರ್. ಶ್ರೀನಿವಾಸಯ್ಯ ಪ್ರಮುಖ ಸ್ಥಾನ ಹೊಂದಿದ್ದರು. ಹೆಗಡೆ ಅವರ ಮೌಲ್ಯಾಧಾರಿತ ರಾಜಕಾರಣ, ಪಾರದರ್ಶಕ ಆಡಳಿತ ಮತ್ತು ನೈತಿಕ ರಾಜಕೀಯದ ತತ್ವಗಳನ್ನು ತಮ್ಮ ರಾಜಕೀಯ ಜೀವನದಲ್ಲೂ ಅಳವಡಿಸಿಕೊಂಡಿದ್ದರು. ಅಧಿಕಾರ ಮತ್ತು ಹುದ್ದೆಗಳಿಗಿಂತ ಜನಸೇವೆಗೆ ಹೆಚ್ಚಿನ ಮಹತ್ವ ನೀಡುವ ಮೂಲಕ ಅವರು ವಿಭಿನ್ನ ವ್ಯಕ್ತಿತ್ವವಾಗಿ ಹೊರಹೊಮ್ಮಿದ್ದರು.

ಇದನ್ನೂ ಓದಿ: 62,370 ಟನ್ LNG ಹೊತ್ತು ಗುಜರಾತ್‌ ಬಂದರು ಸೇರಿದ ‘ದಿಶಾ’ ನೌಕೆ

92ರ ಹರೆಯದಲ್ಲೂ ವಕೀಲ ವೃತ್ತಿ : ರಾಜಕೀಯ ಜೀವನದ ಜೊತೆಗೆ ಅವರು ಕಾನೂನು ಕ್ಷೇತ್ರದಲ್ಲೂ ಗಮನಾರ್ಹ ಸಾಧನೆ ಮಾಡಿದ್ದರು. ಹಿರಿಯ ವಕೀಲರಾಗಿ ಹಲವು ದಶಕಗಳ ಕಾಲ ಸೇವೆ ಸಲ್ಲಿಸಿದ ಅವರು, 92 ವರ್ಷ ವಯಸ್ಸಿನಲ್ಲಿಯೂ ಕೆಲವೇ ದಿನಗಳ ಹಿಂದಿನವರೆಗೂ ನ್ಯಾಯಾಲಯದಲ್ಲಿ ವಕೀಲ ವೃತ್ತಿಯನ್ನು ಮುಂದುವರಿಸಿದ್ದರು. ಕಾನೂನಿನ ಮೇಲಿನ ಅವರ ಆಸಕ್ತಿ, ಅಧ್ಯಯನ ಮತ್ತು ಬದ್ಧತೆ ಸಹೋದ್ಯೋಗಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ನ್ಯಾಯ ಮತ್ತು ಸಾರ್ವಜನಿಕ ಹಿತಾಸಕ್ತಿಯ ವಿಚಾರಗಳಲ್ಲಿ ಅವರು ತಾಳ್ಮೆಯ, ಸಮತೋಲನದ ಹಾಗೂ ನ್ಯಾಯಪರ ನಿಲುವುಗಳನ್ನು ಹೊಂದಿದ್ದರು.

ಸರಳತೆ, ಸಜ್ಜನಿಕೆಗಾಗಿ ಹೆಸರಾದ ನಾಯಕ : ಕೆ.ಆರ್. ಶ್ರೀನಿವಾಸಯ್ಯ ಅವರು ರಾಜಕೀಯದಲ್ಲಿ ಶುದ್ಧತೆ, ಸಾರ್ವಜನಿಕ ಬದುಕಿನಲ್ಲಿ ಸರಳತೆ ಮತ್ತು ವೈಯಕ್ತಿಕ ಜೀವನದಲ್ಲಿ ವಿನಯಶೀಲತೆಗಾಗಿ ಹೆಸರುವಾಸಿಯಾಗಿದ್ದರು. ರಾಜಕೀಯ ಎದುರಾಳಿಗಳಿಂದಲೂ ಗೌರವಿಸಲ್ಪಟ್ಟ ಅಪರೂಪದ ನಾಯಕರಲ್ಲಿ ಅವರು ಒಬ್ಬರಾಗಿದ್ದರು.

ಇದನ್ನೂ ಓದಿ: ಅಫ್ಘಾನಿಸ್ತಾನ ವಿರುದ್ಧದ ಅಂತಿಮ ODIಗೆ ಹರ್ಷಿತ್ ರಾಣಾ ಎಂಟ್ರಿ

ಅವರ ನಡೆ-ನುಡಿ, ಜನಸ್ನೇಹಿ ಸ್ವಭಾವ ಹಾಗೂ ನೈತಿಕ ಮೌಲ್ಯಗಳು ಯುವ ರಾಜಕಾರಣಿಗಳಿಗೆ ಮಾದರಿಯಾಗಿದ್ದವು. ಅಧಿಕಾರದ ಆಸೆಗಿಂತ ಸಮಾಜ ಸೇವೆಯೇ ಮುಖ್ಯ ಎಂಬ ಸಂದೇಶವನ್ನು ತಮ್ಮ ಬದುಕಿನ ಮೂಲಕವೇ ಅವರು ಸಾರಿದ್ದರು.

ಅಂತ್ಯಕ್ರಿಯೆ ಇಂದು : ಶ್ರೀನಿವಾಸಯ್ಯ ಅವರು ಪತ್ನಿ, ನಾಲ್ವರು ಮಕ್ಕಳು, ಬಂಧುಬಳಗ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆಯು ಶುಕ್ರವಾರ ಸಂಜೆ ಕೋಲಾರ ತಾಲೂಕಿನ ಅವರ ಹುಟ್ಟೂರು ಈಕಂಬಳ್ಳಿ ಗ್ರಾಮದಲ್ಲಿ ನಡೆಯಲಿದೆ. ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ವಕೀಲರು, ಸಾಮಾಜಿಕ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಅಂತಿಮ ನಮನ ಸಲ್ಲಿಸಲಿದ್ದಾರೆ.

ಇದನ್ನೂ ಓದಿ: ಬಂಡಾಯಗಾರರಿಗೆ ಶಾಕ್ ಕೊಟ್ಟ HDK : JDSನಲ್ಲಿ ‘Gen Z’ ಯುಗ

ಅವರ ನಿಧನದೊಂದಿಗೆ ಕೋಲಾರ ಜಿಲ್ಲೆ ಒಬ್ಬ ಹಿರಿಯ ರಾಜಕಾರಣಿ, ಕಾನೂನು ತಜ್ಞ ಮತ್ತು ಮೌಲ್ಯಾಧಾರಿತ ಸಾರ್ವಜನಿಕ ಜೀವನ ನಡೆಸಿದ ವ್ಯಕ್ತಿಯನ್ನು ಕಳೆದುಕೊಂಡಂತಾಗಿದೆ.

Telegramಗೆ ಹೈಕೋರ್ಟ್ ಶಾಕ್: NEET ಪರೀಕ್ಷೆ ಮುಗಿಯುವವರೆಗೆ ಬ್ಯಾನ್!

The post ಮಾಜಿ ಶಾಸಕ, ಹಿರಿಯ ವಕೀಲ ಕೆ.ಆರ್. ಶ್ರೀನಿವಾಸಯ್ಯ ನಿಧನ appeared first on Samyukta Karnataka.

ಅಂಬುಲೆನ್ಸ್‌ನಲ್ಲಿ ಬಂದು SSLC ಬರೆದ ಕುಸುಮಾ ಫಸ್ಟ್ ಕ್ಲಾಸ್ ಪಾಸ್
ಕೋಲಾರ: ದುರ್ಘಟನೆ, ನೋವು, ಆಸ್ಪತ್ರೆ—ಇವೆಲ್ಲವನ್ನೂ ಮೀರಿ ಶಿಕ್ಷಣದತ್ತ ತೊಡಗಿಕೊಂಡ ವಿದ್ಯಾರ್ಥಿನಿಯೊಬ್ಬಳ ಕಥೆ ಇದೀಗ ರಾಜ್ಯದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ. ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಚಿನ್ನನಾಗಹಳ್ಳಿಯ ವಿದ್ಯಾರ್ಥಿನಿ ಕುಸುಮಾ, ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದರೂ ಛಲ ಬಿಡದೆ ಸ್ಟ್ರೆಚರ್‌ನಲ್ಲೇ ಬಂದು SSLC ಪರೀಕ್ಷೆ ಬರೆದು ಇದೀಗ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಕುಸುಮಾ ಸದ್ಯ ಬೆಂಗಳೂರಿನ ವೈಟ್‌ಫೀಲ್ಡ್ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕಳೆದ ಒಂದು ವಾರದಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ದೇಹದ ನೋವಿನ ನಡುವೆಯೂ ಶಿಕ್ಷಣದ ಮೇಲೆ ಇದ್ದ ಸಂಕಲ್ಪದಿಂದ, ಅಂಬುಲೆನ್ಸ್ ಮೂಲಕ ಪರೀಕ್ಷಾ ಕೇಂದ್ರಕ್ಕೆ ಬಂದು ಸ್ಟ್ರೆಚರ್‌ನಲ್ಲೇ ಮಲಗಿ ಪರೀಕ್ಷೆ ಬರೆದಿದ್ದರು.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಲಿ ನಡೆಸಿದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕುಸುಮಾ 625ಕ್ಕೆ 374 ಅಂಕಗಳನ್ನು ಗಳಿಸಿ ಫಸ್ಟ್ ಕ್ಲಾಸ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಇದು ಕೇವಲ ಅಂಕಗಳ ಸಾಧನೆ ಮಾತ್ರವಲ್ಲ, ಮನೋಬಲದ ಗೆಲುವು ಕೂಡ ಆಗಿದೆ.

ಸಂಕಷ್ಟದಲ್ಲಿ ಸಾಧನೆ : ಅಪಘಾತದ ಬಳಿಕ ಸಾಮಾನ್ಯ ವಿದ್ಯಾರ್ಥಿಗಳು ಪರೀಕ್ಷೆ ಬರೆದು ಉತ್ತೀರ್ಣರಾಗುವುದು ಸವಾಲಾಗಿದ್ದರೂ, ಕುಸುಮಾ ಅದನ್ನು ಸವಾಲಾಗಿ ಸ್ವೀಕರಿಸಿ ಎದುರಿಸಿದ್ದಾರೆ. ತಾಯಿ ಹಾಗೂ ಶಿಕ್ಷಣ ಇಲಾಖೆಯ ಸಹಕಾರದಿಂದ ಪರೀಕ್ಷಾ ಕೇಂದ್ರಕ್ಕೆ ತಲುಪಿದ ಅವರು, ವೈದ್ಯಕೀಯ ನೆರವಿನ ನಡುವೆಯೇ ತಮ್ಮ ಗುರಿಯನ್ನು ಸಾಧಿಸಿದ್ದಾರೆ.

ಸಹಾಯ ಹಸ್ತ : ಕುಸುಮಾ ಅವರ ಈ ಪ್ರಯತ್ನಕ್ಕೆ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಹಲವರು ನೆರವಾಗಿದ್ದಾರೆ. ವಿಶೇಷವಾಗಿ ಮಾಜಿ ಶಿಕ್ಷಣ ಸಚಿವ ಸುರೇಶ ಕುಮಾರ್‌ ಅವರು ಕುಸುಮಾ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ್ದು, ಚಿಕಿತ್ಸೆಗಾಗಿ ನೆರವು ಒದಗಿಸಿದ್ದಾರೆ. ಜೊತೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದಲೂ ಆರ್ಥಿಕ ಸಹಾಯ ದೊರೆತಿದೆ.

ಕುಸುಮಾ ಅವರ ಸಾಧನೆ ಇದೀಗ ಅನೇಕ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದು, “ಸಂಕಷ್ಟ ಬಂದರೂ ಶಿಕ್ಷಣದ ದಾರಿ ಬಿಡಬಾರದು” ಎಂಬ ಸಂದೇಶವನ್ನು ನೀಡಿದೆ.

ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ: ಸಚಿವಾಲಯದಿಂದ ಸ್ಪಷ್ಟನೆ

The post ಅಂಬುಲೆನ್ಸ್‌ನಲ್ಲಿ ಬಂದು SSLC ಬರೆದ ಕುಸುಮಾ ಫಸ್ಟ್ ಕ್ಲಾಸ್ ಪಾಸ್ appeared first on Samyukta Karnataka.

ಕೋಲಾರ: ಸ್ಟ್ರೆಚರ್ ಮೇಲೆ ಮಲಗಿಕೊಂಡೇ SSLC ಪರೀಕ್ಷೆ ಬರೆದ ವಿದ್ಯಾರ್ಥಿನಿ
ನೋವಿನ ನಡುವೆ ಸಾಧನೆ: ಸ್ಟ್ರೆಚರ್ ಮೇಲೆ ಮಲಗಿಕೊಂಡೇ ಪರೀಕ್ಷೆ ಬರೆದ ಕುಸುಮಾಳ ಹೋರಾಟ ಎಲ್ಲರಿಗೂ ಸ್ಪೂರ್ತಿ

ಕೋಲಾರ: ಅಸಾಧಾರಣ ಧೈರ್ಯ ಮತ್ತು ಶಿಕ್ಷಣದ ಮೇಲಿನ ಅಪಾರ ಬದ್ಧತೆಯ ಉದಾಹರಣೆಯಾಗಿ, ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ವಿದ್ಯಾರ್ಥಿನಿ ಕುಸುಮಾ ಎಲ್ಲರ ಮನಸೆಳೆದಿದ್ದಾಳೆ.

ಕೆಜಿಎಫ್ ತಾಲೂಕಿನ ಚಿನ್ನನಾಗನಹಳ್ಳಿ ಗ್ರಾಮದ 16 ವರ್ಷದ ಕುಸುಮಾ, ಸೆಂಟ್ ಮೇರಿಸ್ ಹೈಸ್ಕೂಲ್ (St. Mary’s High School) ವಿದ್ಯಾರ್ಥಿನಿಯಾಗಿದ್ದು, ಇತ್ತೀಚೆಗೆ ನಡೆದ ಭೀಕರ ಅಪಘಾತದಲ್ಲಿ ಒಂದು ಕಾಲು ಕಳೆದುಕೊಂಡಿದ್ದಾಳೆ. ಗಂಭೀರ ಗಾಯಗಳಿಂದಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಆಕೆಗೆ ಈಗಾಗಲೇ ಒಂದು ಶಸ್ತ್ರಚಿಕಿತ್ಸೆ ನಡೆದಿದ್ದು, ಇನ್ನೂ ಎರಡು ಶಸ್ತ್ರಚಿಕಿತ್ಸೆಗಳು ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಆದರೂ, ತನ್ನ ಶಿಕ್ಷಣದ ಕನಸನ್ನು ಕೈಬಿಡದೆ, ಕುಸುಮಾ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗುವ ನಿರ್ಧಾರ ಕೈಗೊಂಡಳು. ಆಸ್ಪತ್ರೆಯಿಂದ ಆಂಬ್ಯುಲೆನ್ಸ್‌ನಲ್ಲಿ ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರದಿದ್ದಾಳೆ.

ಕೆಜಿಎಫ್‌ನ St. Joseph’s School ನಲ್ಲಿ ನಡೆದ ಪರೀಕ್ಷೆಯಲ್ಲಿ, ಕುಸುಮಾ ಸ್ಟ್ರೆಚರ್ ಮೇಲೆಯೇ ಮಲಗಿಕೊಂಡು ಪ್ರಶ್ನೆ ಪತ್ರಿಕೆ ಬರೆಯುವ ಮೂಲಕ ಅಸಾಮಾನ್ಯ ಧೈರ್ಯ ಪ್ರದರ್ಶಿಸಿದ್ದಾಳೆ.

ವಿಶೇಷ ಅನುಮತಿ: ವಿದ್ಯಾರ್ಥಿನಿಯ ಪರಿಸ್ಥಿತಿಯನ್ನು ಗಮನಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ ಜಿ ನಾರಯಾಣಸ್ವಾಮಿ (B. G. Narayanaswamy) ಅವರು, ಮಾನವೀಯ ದೃಷ್ಟಿಯಿಂದ ವಿಶೇಷ ಅನುಮತಿ ನೀಡಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದರು.

ಕುಸುಮಾ ದೃಢ ಸಂಕಲ್ಪ: ನಿಮ್ಮ ಪರೀಕ್ಷಾ ಯಶಸ್ಸಿನ ಮಂತ್ರವಾಗಲಿ!

ಮನೋಬಲಕ್ಕೆ ಮಾದರಿ: ಕಾಲು ಕಳೆದುಕೊಂಡ ನೋವಿನ ನಡುವೆಯೂ, ವಿದ್ಯಾಭ್ಯಾಸದ ಮೇಲಿನ ಆಸಕ್ತಿ ಕಳೆದುಕೊಳ್ಳದೆ ಪರೀಕ್ಷೆ ಬರೆದ ಕುಸುಮಾಳ ಹಠ ಮತ್ತು ಮನೋಬಲ ಎಲ್ಲರಿಗೂ ಸ್ಪೂರ್ತಿಯಾಗಿದೆ. ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಆಕೆಯ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕುಸುಮಾ ಅವರ ಈ ಛಲ ನಿಜಕ್ಕೂ ದೊಡ್ಡ ಪಾಠ. ಪರೀಕ್ಷಾ ಸಮಯದಲ್ಲಿ ಮನೋಬಲ ಹೆಚ್ಚಿಸಿಕೊಳ್ಳಲು ಮತ್ತು ಒತ್ತಡ ಮುಕ್ತವಾಗಿರಲು ಪರೀಕ್ಷಾರ್ಥಿಗಳು ಈ ಕೆಳಗಿನ ಸರಳ ಸೂತ್ರಗಳನ್ನು ಪಾಲಿಸಬಹುದು:

“ನನ್ನಿಂದ ಸಾಧ್ಯ” ಎಂಬ ವಿಶ್ವಾಸ: ಕುಸುಮಾ ಅವರು ದೈಹಿಕ ನೋವಿನ ನಡುವೆಯೂ ಸ್ಟ್ರೆಚರ್ ಮೇಲೆ ಪರೀಕ್ಷೆ ಬರೆದಿದ್ದಾರೆ ಎಂದರೆ, ನಮಗೆ ಎಲ್ಲವೂ ಅನುಕೂಲ ಇರುವಾಗ ಪರೀಕ್ಷೆ ಎದುರಿಸುವುದು ಕಷ್ಟವಲ್ಲ. “ನಾನು ಚೆನ್ನಾಗಿ ಓದಿದ್ದೇನೆ, ಚೆನ್ನಾಗಿ ಬರೆಯುತ್ತೇನೆ” ಎಂದು ಮನಸ್ಸಿಗೆ ಧೈರ್ಯ ಹೇಳಿಕೊಳ್ಳಿ.

ಸಮಯದ ನಿರ್ವಹಣೆ (Time Management): ಪರೀಕ್ಷಾ ಕೊಠಡಿಯಲ್ಲಿ ಗಾಬರಿಯಾಗಬೇಡಿ. ಮೊದಲು ಸುಲಭವಾದ ಪ್ರಶ್ನೆಗಳಿಗೆ ಉತ್ತರಿಸಿ. ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ, ನಂತರ ಕಠಿಣ ಪ್ರಶ್ನೆಗಳನ್ನು ನಿಧಾನವಾಗಿ ಯೋಚಿಸಿ ಬರೆಯಬಹುದು.

ಫಲಿತಾಂಶದ ಬಗ್ಗೆ ಯೋಚಿಸಬೇಡಿ: “ಪರೀಕ್ಷೆ ಕಷ್ಟ ಇರುತ್ತಾ?”, “ಕಡಿಮೆ ಅಂಕ ಬಂದರೆ ಏನು ಮಾಡುವುದು?” ಎಂಬ ಆತಂಕ ಬಿಡಿ. ಕೇವಲ ನಿಮ್ಮ ಪ್ರಯತ್ನದ ಕಡೆಗೆ ಗಮನವಿರಲಿ. ಫಲಿತಾಂಶ ತಾನಾಗಿಯೇ ಉತ್ತಮವಾಗಿರುತ್ತದೆ.

ಆರೋಗ್ಯದ ಕಡೆ ಗಮನ: ಪರೀಕ್ಷಾ ಸಮಯದಲ್ಲಿ ಸರಿಯಾದ ನಿದ್ರೆ ಮತ್ತು ಹಗುರವಾದ ಆಹಾರ ಬಹಳ ಮುಖ್ಯ. ಮನಸ್ಸು ಮತ್ತು ಮೆದುಳು ಚುರುಕಾಗಿರಲು ಇವು ಸಹಾಯ ಮಾಡುತ್ತವೆ.

ದೀರ್ಘ ಉಸಿರಾಟ (Deep Breathing): ಪರೀಕ್ಷಾ ಪತ್ರಿಕೆ ಕೈಗೆ ಸಿಕ್ಕಾಗ ಸ್ವಲ್ಪ ಆತಂಕವಾದರೆ, ಒಂದು ನಿಮಿಷ ಕಣ್ಣು ಮುಚ್ಚಿ ದೀರ್ಘವಾಗಿ ಉಸಿರು ತಗೆದುಕೊಳ್ಳಿ. ಇದರಿಂದ ಮೆದುಳಿಗೆ ಆಮ್ಲಜನಕ ಪೂರೈಕೆಯಾಗಿ ಮನಸ್ಸು ಶಾಂತವಾಗುತ್ತದೆ.

ಕುಸುಮಾ ಅವರ ಈ ಧೈರ್ಯದ ಕಥೆ ನಿಮ್ಮಲ್ಲಿರುವ ಭಯವನ್ನು ಓಡಿಸಿ, ಪರೀಕ್ಷೆಯನ್ನು ಉತ್ಸಾಹದಿಂದ ಎದುರಿಸಲು ಪ್ರೇರಣೆಯಾಗಲಿ.

ಹಾರ್ಮುಜ್ ಬಳಿ ಅಮೆರಿಕ ದಾಳಿ: ಇರಾನ್ ಕ್ಷಿಪಣಿ ತಾಣಗಳು ನಾಶ

The post ಕೋಲಾರ: ಸ್ಟ್ರೆಚರ್ ಮೇಲೆ ಮಲಗಿಕೊಂಡೇ SSLC ಪರೀಕ್ಷೆ ಬರೆದ ವಿದ್ಯಾರ್ಥಿನಿ appeared first on Samyukta Karnataka.

ಕೋಲಾರ: ದೇಶದ ಮೊದಲ ಟಾಟಾ–ಎರ್‌ಬಸ್ ಹೆಲಿಕಾಪ್ಟರ್ ಘಟಕಕ್ಕೆ ಇಂದು ಐತಿಹಾಸಿಕ ಚಾಲನೆ
ಟಾಟಾ ಏರ್‌ಬಸ್ ಹೆಲಿಕಾಪ್ಟರ್ ಘಟಕಕ್ಕೆ ಪ್ರಧಾನಿ ಮೋದಿ ಚಾಲನೆ : ವರ್ಷಕ್ಕೆ 10 ಹೆಲಿಕಾಪ್ಟರ್ ಉತ್ಪಾದನೆ – ವೇಮಗಲ್ ಘಟಕದಿಂದ ಹೊಸ ಯುಗ

ಕೋಲಾರ: ಚಿನ್ನದ ನಾಡು ಕೋಲಾರ ಜಿಲ್ಲೆ ರಾಷ್ಟ್ರಮಟ್ಟದಲ್ಲಿ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ. ಕೋಲಾರ ತಾಲ್ಲೂಕಿನ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣವಾಗಿರುವ ಟಾಟಾ–ಎರ್‌ಬಸ್ ಮಿನಿ ಹೆಲಿಕಾಪ್ಟರ್ ಅಂತಿಮ ಜೋಡಣಾ ಘಟಕಕ್ಕೆ ಇಂದು (ಫೆಬ್ರವರಿ 17) ಸಂಜೆ 4.20ಕ್ಕೆ ಅಧಿಕೃತ ಚಾಲನೆ ದೊರೆಯಲಿದೆ.

ಈ ಮಹತ್ವದ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಫ್ರಾನ್ಸ್ ಅಧ್ಯಕ್ಷ ಇಮಾನ್ಯುವಲ್ ಮ್ಯಾಕ್ರಾನ್ ಅವರು ವರ್ಚುವಲ್ ಮೂಲಕ ಉದ್ಘಾಟಿಸಲಿದ್ದಾರೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಫ್ರಾನ್ಸ್ ರಕ್ಷಣಾ ಸಚಿವೆ ಖುದ್ದು ವೇಮಗಲ್‌ಗೆ ಭೇಟಿ ನೀಡಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ಕೋಲಾರ: ಖಾಸಗಿ ಬಸ್ ಪಲ್ಟಿ- ಇಬ್ಬರ ಸ್ಥಿತಿ ಗಂಭೀರ, 40ಕ್ಕೂ ಹೆಚ್ಚು ಮಂದಿಗೆ ಗಾಯ

ಈ ಹಿನ್ನೆಲೆಯಲ್ಲಿ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಜಿಲ್ಲಾಧಿಕಾರಿ ಎಂ.ಆರ್. ರವಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್ ಅವರು ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.

ವರ್ಷಕ್ಕೆ 10 ಹೆಲಿಕಾಪ್ಟರ್ ತಯಾರಿಕೆ ಸಾಮರ್ಥ್ಯ: ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ಸಂಸ್ಥೆಯ ವತಿಯಿಂದ ಸುಮಾರು 16 ಎಕರೆ ಪ್ರದೇಶದಲ್ಲಿ ಈ ಘಟಕ ನಿರ್ಮಾಣಗೊಂಡಿದ್ದು, ಇದು ದೇಶದಲ್ಲೇ ಮೊದಲ ಮಿನಿ ನಾಗರಿಕ ಹೆಲಿಕಾಪ್ಟರ್ ಅಂತಿಮ ಜೋಡಣಾ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮೊದಲ ಹಂತದಲ್ಲಿ ವರ್ಷಕ್ಕೆ H125 ಮಾದರಿಯ ಹತ್ತು ಹೆಲಿಕಾಪ್ಟರ್‌ಗಳನ್ನು ತಯಾರಿಸುವ ಸಾಮರ್ಥ್ಯ ಈ ಘಟಕಕ್ಕಿದೆ. ಮುಖ್ಯವಾಗಿ ರಕ್ಷಣಾ ಇಲಾಖೆಗೆ ಅಗತ್ಯವಿರುವ ಹೆಲಿಕಾಪ್ಟರ್‌ಗಳ ಉತ್ಪಾದನೆ ಇಲ್ಲಿ ನಡೆಯಲಿದ್ದು, ಮುಂದಿನ ದಿನಗಳಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ಇನ್ನಷ್ಟು ವಿಸ್ತರಿಸುವ ಯೋಜನೆಗಳನ್ನೂ ರೂಪಿಸಲಾಗಿದೆ.

ಇದನ್ನೂ ಓದಿ: ಕಾಳಿ ನದಿ ನೀರಾವರಿ ಯೋಜನೆ ಅಂತಿಮ ಹಂತ: ಹಳಿಯಾಳ ರೈತರಿಗೆ ಶೀಘ್ರ ನೀರು

ಸ್ಥಳ ಆಯ್ಕೆಗೆ ಪ್ರಮುಖ ಕಾರಣಗಳು: ವೇಮಗಲ್ ಕೈಗಾರಿಕಾ ಪ್ರದೇಶವು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಚೆನ್ನೈ–ಬೆಂಗಳೂರು ಎಕ್ಸ್‌ಪ್ರೆಸ್ ಹೆದ್ದಾರಿಗೆ ಸಮೀಪದಲ್ಲಿರುವುದು ಈ ಘಟಕ ಸ್ಥಾಪನೆಗೆ ಪ್ರಮುಖ ಕಾರಣವಾಗಿದೆ. ಉತ್ತಮ ರಸ್ತೆ, ವಿಮಾನ ಸಂಪರ್ಕ ಮತ್ತು ಕೈಗಾರಿಕಾ ಮೂಲಸೌಕರ್ಯ ಇರುವುದರಿಂದ ಇಲ್ಲಿ ಘಟಕ ಸ್ಥಾಪನೆಗೆ ಅನುಕೂಲವಾಗಿದೆ.

ಉದ್ಯೋಗ ಮತ್ತು ಅಭಿವೃದ್ಧಿಗೆ ಹೊಸ ಆಯಾಮ: ಈ ಘಟಕ ಆರಂಭದಿಂದ ಕೋಲಾರ ಜಿಲ್ಲೆಯ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ಸ್ಥಳೀಯ ಆರ್ಥಿಕತೆಗೆ ಬಲ ಸಿಗಲಿದೆ. ಜೊತೆಗೆ ಜಿಲ್ಲೆಯ ಕೈಗಾರಿಕಾ ಬೆಳವಣಿಗೆಗೆ ಮತ್ತಷ್ಟು ವೇಗ ದೊರೆಯಲಿದೆ. ರಾಷ್ಟ್ರಮಟ್ಟದಲ್ಲಿ ಕೋಲಾರ ಜಿಲ್ಲೆಯನ್ನು ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪಾದನಾ ಕೇಂದ್ರವಾಗಿ ಗುರುತಿಸುವತ್ತ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಕೈಗಾರಿಕಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

The post ಕೋಲಾರ: ದೇಶದ ಮೊದಲ ಟಾಟಾ–ಎರ್‌ಬಸ್ ಹೆಲಿಕಾಪ್ಟರ್ ಘಟಕಕ್ಕೆ ಇಂದು ಐತಿಹಾಸಿಕ ಚಾಲನೆ appeared first on Samyukta Karnataka.

ಕೋಲಾರ: ಖಾಸಗಿ ಬಸ್ ಪಲ್ಟಿ- ಇಬ್ಬರ ಸ್ಥಿತಿ ಗಂಭೀರ, 40ಕ್ಕೂ ಹೆಚ್ಚು ಮಂದಿಗೆ ಗಾಯ
ಕೋಲಾರ: ಚಿನ್ನದ ನಾಡು ಕೋಲಾರ ಹೊರವಲಯದಲ್ಲಿ ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಖಾಸಗಿ ಬಸ್ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಇಬ್ಬರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, 40ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.

ಕೋಲಾರ ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ಪವನ್ ಕಾಲೇಜು ಮೈದಾನ ಸಮೀಪ ಈ ಘಟನೆ ನಡೆದಿದೆ. ಆಂಧ್ರಪ್ರದೇಶದ ನಲ್ಲೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಬೆಳಗಿನ ಜಾವ ಸುಮಾರು 4.30ರ ವೇಳೆಗೆ ಅಪಘಾತಕ್ಕೀಡಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಅಪಘಾತ: ಪೊಲೀಸರ ಪ್ರಕಾರ, ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಬಸ್ ಪಲ್ಟಿಯಾಗಿದೆ. ಅಪಘಾತದ ತೀವ್ರತೆಯಿಂದ ಬಸ್‌ನೊಳಗಿದ್ದ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಸ್‌ನಲ್ಲಿ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರು ಇದ್ದು, ಅದೃಷ್ಟವಶಾತ್ ಹೆಚ್ಚಿನವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಗ್ನಿಶಾಮಕ ದಳದಿಂದ ರಕ್ಷಣಾ ಕಾರ್ಯಾಚರಣೆ: ಅಪಘಾತದ ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಬಸ್‌ನ ಗಾಜುಗಳನ್ನು ಒಡೆದು ಒಳಗಿದ್ದ ಪ್ರಯಾಣಿಕರನ್ನು ಹೊರತಂದು ಸುರಕ್ಷಿತವಾಗಿ ರಕ್ಷಿಸಿದರು. ಗಾಯಗೊಂಡವರನ್ನು ತಕ್ಷಣ ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರ ಸ್ಥಿತಿ ಗಂಭೀರವಾಗಿದ್ದು, ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ.

ಪೊಲೀಸ್ ತನಿಖೆ ಆರಂಭ: ಈ ಘಟನೆ ಕೋಲಾರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ನಿಖರ ಕಾರಣ ತಿಳಿಯಲು ತನಿಖೆ ಮುಂದುವರಿದಿದೆ. ಅತಿವೇಗ, ನಿದ್ರಾಹೀನತೆ ಅಥವಾ ತಾಂತ್ರಿಕ ದೋಷವೇ ಅಪಘಾತಕ್ಕೆ ಕಾರಣವೇ ಎಂಬ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

The post ಕೋಲಾರ: ಖಾಸಗಿ ಬಸ್ ಪಲ್ಟಿ- ಇಬ್ಬರ ಸ್ಥಿತಿ ಗಂಭೀರ, 40ಕ್ಕೂ ಹೆಚ್ಚು ಮಂದಿಗೆ ಗಾಯ appeared first on Samyukta Karnataka.

ಆಂಧ್ರಪ್ರದೇಶದ ರೌಡಿಶೀಟರ್ ಮುಳಬಾಗಿಲು ಗಡಿಯಲ್ಲಿ ಹತ್ಯೆ
ಮುಳಬಾಗಿಲು: ಮಾರಕಾಸ್ತ್ರಗಳಿಂದ ಕೊಚ್ಚಿ ಆಂಧ್ರಪ್ರದೇಶ ಮೂಲದ ರೌಡಿ ಶೀಟರ್ ಹತ್ಯೆ ಮಾಡಿರುವ ಘಟನೆ ತಾಲೂಕಿನ ಹೆಬ್ಬಣಿ ಗ್ರಾಮದಲ್ಲಿ ನಡೆದಿದೆ.

ಸೋಮವಾರ ರಾತ್ರಿ ಬೈಕ್‌ನಲ್ಲಿ ತೆರಳುವ ವೇಳೆ ಆಂಧ್ರಪ್ರದೇಶದ ಪುಂಗನೂರು ಬಳಿಯ ಕರುಪಲ್ಲಿ ಗ್ರಾಮದ ರೌಡಿಶೀಟರ್ ಭಾಸ್ಕರ್ (27) ಎಂಬಾತನನ್ನು ಕೊಲೆ ಮಾಡಲಾಗಿದೆ.

ಮುಳಬಾಗಿಲಿಗೆ ಬಂದು ವಾಪಸ್ ಪುಂಗನೂರಿಗೆ ತೆರಳುವಾಗ ಈ ಕೃತ್ಯ ನಡೆದಿದ್ದು, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕುತ್ತಿಗೆಗೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಶ್ವಾನದಳ, ಸೋಕೋ ಟೀಂ ಭೇಟಿ ನೀಡಿದ್ದು, ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The post ಆಂಧ್ರಪ್ರದೇಶದ ರೌಡಿಶೀಟರ್ ಮುಳಬಾಗಿಲು ಗಡಿಯಲ್ಲಿ ಹತ್ಯೆ appeared first on Samyukta Karnataka.

ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್:‌ ಕೊಂದಿದ್ದು ನಾನೇ ಎಂದು ಫೇಸ್ಬುಕ್‌ ಲೈವ್‌!
ಕೋಲಾರ: ಮಂಗಳವಾರ ರಾತ್ರಿ ನಡೆದಿರುವ ನರಸಾಪುರ ಯಲ್ಲೇಶ್ ಹತ್ಯೆ ಪ್ರಕರಣಕ್ಕೆ ಹೊಸ ತಿರುವು ದೊರೆತಿದ್ದು ಕೊಲೆ ಆರೋಪಿ ಎಂದು ಶಂಕಿಸಲಾಗಿದ್ದ ಸಂತೋಷ್‌ನ ಪುತ್ರ ಬಿಂದುಕುಮಾರ್ ಫೇಸ್‌ಬುಕ್ ಲೈವ್ ವೀಡಿಯೊ ಮೂಲಕ ಆತ್ಮರಕ್ಷಣೆಗೆ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ನನ್ನ ತಾಯಿಯ ಜೊತೆ ಅಕ್ರಮ ಸಂಬಂಧ ಹೊಂದಿ ನಮ್ಮಿಂದ ದೂರ ಮಾಡಿ ಮದುವೆ ಮಾಡಿಕೊಂಡಿದ್ದ ಯಲ್ಲೇಶ್ ನನ್ನ ತಂಗಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದ. ನನ್ನ ತಂದೆಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ನನ್ನ ಮೇಲೆಯೂ ಐದು ಬಾರಿ ಕೊಲೆ ಯತ್ನ ಮಾಡಿದ್ದ ಎಂದು ದೋಷಾರೋಪ ಮಾಡಿದ್ದಾನೆ.

ಇವೆಲ್ಲ ಕುರಿತು ಪೊಲೀಸ್ ಠಾಣೆಯಲ್ಲಿ ಐದು ಬಾರಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದೀಗ ಮತ್ತೆ ನನ್ನನ್ನು ಕೊಲೆ ಮಾಡಲು ಸಂಚು ರೂಪಿಸುತ್ತಿದ್ದಾನೆ ಎಂಬ ಮಾಹಿತಿ ದೊರೆತ ಕಾರಣ ಆತ್ಮರಕ್ಷಣೆಗೆ ನಾನು ಮತ್ತು ನನ್ನ ಸ್ನೇಹಿತ ಅಕ್ಷಯ್ ಮತ್ತು ಅವನ ಅಣ್ಣ ಸೇರಿ ಕೊಲೆ ಮಾಡಿದ್ದೇವೆ ಎಂದು ವಿವರಿಸಿದ್ದಾನೆ.

ಯಲ್ಲೇಶ್ ತಲೆಗೆ ಕಲ್ಲು ಎಸೆದು ಕೊಲೆ ಮಾಡಲಾಗಿದೆ ಎಂಬ ವರದಿಗಳ ಬಗ್ಗೆ ಸ್ಪಷ್ಟನೆ ನೀಡಿದ ಆತ “ಅದು ಸತ್ಯವಲ್ಲ. ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ” ಎಂದು ಹೇಳಿದ್ದಾನೆ. “ಕೊಲೆಗೆ ಬಳಸಿದ ಮಚ್ಚು ಸಹಿತ ನ್ಯಾಯಾಲಯದಲ್ಲಿ ಶರಣಾಗುತ್ತೇವೆ” ಎಂದು ಬಿಂದುಕುಮಾರ್ ತನ್ನ ವೀಡಿಯೊದಲ್ಲಿ ತಿಳಿಸಿದ್ದಾನೆ.

The post ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್:‌ ಕೊಂದಿದ್ದು ನಾನೇ ಎಂದು ಫೇಸ್ಬುಕ್‌ ಲೈವ್‌! appeared first on Samyukta Karnataka.

ಅಪ್ರಾಪ್ತೆ ಮೇಲೆ ಅತ್ಯಾಚಾರ: ಕಾಂಗ್ರೆಸ್‌ ಮುಖಂಡನ ಬಂಧನ
ಕೋಲಾರ(ಬಂಗಾರಪೇಟೆ): ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಬಾಲಕಿಯನ್ನು ನಾಲ್ಕು ತಿಂಗಳ ಗರ್ಭಿಣಿ ಮಾಡಿರುವ ಕುರಿತು ಆಕೆಯ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಕೋಲಾರ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡನೊಬ್ಬನ ವಿರುದ್ಧ ಪೊಕ್ಸೋ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

ತಾಲೂಕಿನ ತ್ಯಾರನಹಳ್ಳಿ ಗ್ರಾಮದ ನಿವಾಸಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಮತ್ತು ಕಾಂಗ್ರೆಸ್ ಮುಖಂಡ ಟಿ.ಎ. ರಾಮೇಗೌಡ ಬಂಧಿತ ಆರೋಪಿ, ಸಿದ್ದನಹಳ್ಳಿ ಗ್ರಾಮದ 14 ವರ್ಷದ ಅಪ್ರಾಪ್ತೆ ಬಾಲಕಿಯ ಮೇಲೆಯೇ ರಾಮೇಗೌಡ ಲೈಂಗಿಕ ಕಿರುಕುಳ ನೀಡಿದ್ದು ಈಗ ಬಾಲಕಿ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾಳೆ.

ಲವ್ ಪ್ರಕರಣ ಒಂದರಲ್ಲಿ ರಾಮೇಗೌಡ ಬಾಲಕಿಗೆ ಬುದ್ದಿವಾದ ಹೇಳಿ ಮನಸ್ಸು ಪರಿವರ್ತನೆ ಮಾಡಲು ಅವರ ಮನೆಗೆ ಕರೆದುಕೊಂಡು ಹೋಗಿ ಕೆಲ ದಿನಗಳು ಇರಿಸಿಕೊಂಡಿದ್ದರು. ಆರೋಪಿ ರಾಮೇಗೌಡ ಬಾಲಕಿಯನ್ನು ಬಲವಂತವಾಗಿ ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದಾನೆ. ರಾಮೇಗೌಡನಿಗೆ ಇಬ್ಬರು ಹೆಂಡತಿಯರಿದ್ದರೂ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದೆ.

ಈ ಕುರಿತು ಬಾಲಕಿಯ ಪೋಷಕರು ಕೇಳಿದಾಗ ರಾಮೇಗೌಡ ತಾವು ರೈತ ಸಂಘದ ಜಿಲ್ಲಾಧ್ಯಕ್ಷ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದು ನನಗೆ ಎಲ್ಲರ ಬೆಂಬಲವಿದೆ. ನನ್ನನ್ನು ನೀವು ಏನನ್ನೂ ಮಾಡಲು ಸಾಧ್ಯವಿಲ್ಲವೆಂದು ಬೆದರಿಕೆ ಹಾಕಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದಾನೆ ಎಂದು ದೂರಲಾಗಿದೆ. ದೂರು ಬಂದ ತಕ್ಷಣ ಬಂಗಾರಪೇಟೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.

The post ಅಪ್ರಾಪ್ತೆ ಮೇಲೆ ಅತ್ಯಾಚಾರ: ಕಾಂಗ್ರೆಸ್‌ ಮುಖಂಡನ ಬಂಧನ appeared first on Samyukta Karnataka.

ಅತಿಯಾದ ಮದ್ಯ ಸೇವನೆಯಿಂದ ಕ್ಯಾನ್ಸರ್‌ಪೀಡಿತ ಮಹಿಳೆ ಸಾವು
ಮುಳಬಾಗಿಲು: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ನೋವು ತಾಳಲಾರದೆ ಅತಿಯಾಗಿ ಮದ್ಯ ಸೇವಿಸಿ ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ.

ನಗರದ ಹಳೆ ಜೈನ್ ಸ್ಕೂಲ್ ಕಾಂಪೌಂಡ್‌ನಲ್ಲಿ ಗುರುವಾರ ಮುಂಜಾನೆ ಮಹಿಳೆಯ ಶವ ಪತ್ತೆಯಾಗಿದ್ದು ಆಕೆಯ ಗುರುತು ಸಿಕ್ಕಿದೆ.

ತಾಲೂಕಿನ ಗ್ರಾಮವೊಂದರ ನಿವಾಸಿಯಾದ 45 ವರ್ಷದ ಮಹಿಳೆ ಮದ್ಯ ಸೇವಿಸಿ ಶಾಲಾ ಆವರಣದಲ್ಲಿ ಮಲಗಿದ್ದಲ್ಲೇ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಪತಿ ಹಲವು ವರ್ಷಗಳ ಹಿಂದೆಯೇ ಮೃತಪಟ್ಟಿದ್ದು ಈಕೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮೃತಳಿಗೆ ಇಬ್ಬರು ಮಕ್ಕಳಿದ್ದು ನಗರದ ಅಜ್ಜಿ ಮನೆಯಲ್ಲಿದ್ದಾರೆ.

The post ಅತಿಯಾದ ಮದ್ಯ ಸೇವನೆಯಿಂದ ಕ್ಯಾನ್ಸರ್‌ಪೀಡಿತ ಮಹಿಳೆ ಸಾವು appeared first on Samyukta Karnataka.

ಅಸಮರ್ಥ ಎಂಬ ಟೀಕೆಗೆ ಜಗ್ಗುವವ ನಾನಲ್ಲ
ಕೋಲಾರ: ಅದೇನೋ ಏಕೋ ನನಗೆ ಪ್ರತಿ ಬಾರಿಯೂ ಗೃಹ ಖಾತೆಯನ್ನೇ ಕೊಡುತ್ತಾರೆ. ಇದೀಗ ಮೂರನೇ ಬಾರಿಗೆ ಗೃಹ ಸಚಿವನಾಗಿ ಸಮರ್ಥವಾಗಿ ನನ್ನ ಖಾತೆ ನಿರ್ವಹಿಸಿದ್ದೇನೆ. ನನ್ನನ್ನು ಅಸಮರ್ಥ ಗೃಹ ಸಚಿವ ಎಂದು ಮೂದಲಿಸುವ ಟೀಕೆಗಳಿಗೆ ಜಗ್ಗುವವನು ನಾನಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ವಿರೋಧ ಪಕ್ಷಗಳಿಗೆ ಟಾಂಗ್ ನೀಡಿದರು.

ಮಂಗಳವಾರ ಕೆಜಿಎಫ್‌ನಲ್ಲಿ 539 ಕೋಟಿ ರೂ. ಹೂಡಿಕೆಯ 1,000 ಜನರಿಗೆ ತರಬೇತಿ ನೀಡುವ ಕೇಂದ್ರೀಯ ಮೀಸಲು ಪಡೆ ತರಬೇತಿ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಎಲ್ಲೋ ಒಂದು ಕೊಲೆಯಾದರೆ ಅದರ ಗಂಧ ಗಾಳಿಯು ಗೊತ್ತಿಲ್ಲದವರು ಪರಮೇಶ್ವರ್ ಅಸಮರ್ಥ ಸಚಿವ ಎಂದು ಟೀಕಿಸುತ್ತಾರೆ. ಮೂರು ಬಾರಿ ಗೃಹ ಸಚಿವನಾಗಿ ಇಲಾಖೆಯಲ್ಲಿ ಮಾಡಿರುವ ಕಲ್ಯಾಣ ಕಾರ್ಯಕ್ರಮಗಳು ಅವರ ಗಮನಕ್ಕೆ ಬರುವುದಿಲ್ಲ ಎಂದು ಸಚಿವರು ವಿವರಿಸಿದರು.

2020ರಲ್ಲಿ ನಾನೇ ಆರಂಭಿಸಿದ ಪೊಲೀಸ್ ಗೃಹ ನಿರ್ಮಾಣ ಯೋಜನೆಯಡಿ ಇದುವರೆಗೂ 40,712 ಮನೆಗಳನ್ನು ನಿರ್ಮಿಸಲಾಗಿದೆ, ರಾಜ್ಯದ ಎಲ್ಲ 1.05 ಲಕ್ಷ ಪೊಲೀಸರಿಗೂ ಸುಸಜ್ಜಿತ ಮನೆಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.

ದೇಶದ ಇತರೆ ರಾಜ್ಯಗಳ ವೇತನ ವ್ಯವಸ್ಥೆ ಅಧ್ಯಯನ ಮಾಡಿ ನಮ್ಮ ರಾಜ್ಯದ ಪೊಲೀಸರ ವೇತನ ಹೆಚ್ಚಿಸಲಾಗಿದೆ, ತಲೆಗೆ ಭಾರವಾಗಿದ್ದ ಟೋಪಿಗಳ ಬದಲಿಗೆ ಕ್ಯಾಪ್ ನೀಡುವ ವ್ಯವಸ್ಥೆ ರೂಪಿಸಲಾಗಿದೆ ಎಂದು ವಿವರಿಸಿದರು. ಇದೀಗ ವರ್ಗಾವಣೆ ನಿಯಮ ಬದಲಿಸಿ ಕನಿಷ್ಟ ಎರಡು ವರ್ಷ ಒಂದೇ ಠಾಣೆಯಲ್ಲಿ ಸೇವೆ ಸಲ್ಲಿಸಬೇಕೆಂಬ ನಿಯಮ ಜಾರಿಗೆ ತರಲಾಗಿದೆ ಎಂದು ಹೇಳಿದರು.

ಸಾರ್ವಜನಿಕರಿಗೆ ನ್ಯಾಯ ಒದಗಿಸುವಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ಕೆಲಸ ಮಾಡದೇ ಈ ಗೌರವ ಸಿಗುವುದಿಲ್ಲ ಎಂದರು. ಕಾಂಗ್ರೆಸ್ ಅಧ್ಯಕ್ಷನಾಗಿ ಮನೆಮನೆಗೆ ಕಾಂಗ್ರೆಸ್ ಯೋಜನೆ ರೂಪಿಸಿದ್ದ ನಾನು ಇದೀಗ ‘ಮನೆಮನೆಗೆ ಪೊಲೀಸ್’ ಕಾರ್ಯಕ್ರಮ ಜಾರಿ ಮಾಡಿ ರಾಜ್ಯಾದ್ಯಂತ ಪೊಲೀಸರು ಪ್ರತಿ ಮನೆಗಳಿಗೆ ಭೇಟಿ ನೀಡುವ ವ್ಯವಸ್ಥೆ ಮಾಡಿದ್ದೇನೆ ಎಂದು ಸಚಿವರು ತಮ್ಮ ಕಾರ್ಯ ನಿರ್ವಹಣೆಗೆ ಸಮಜಾಯಿಷಿ ನೀಡಿದರು.

15 ಸಾವಿರ ಪೇದೆಗಳ ಹುದ್ದೆ ಖಾಲಿ ಇದ್ದು ಈ ಬಾರಿಯ ಬಜೆಟ್‌ನಲ್ಲಿ ಕನಿಷ್ಠ 10 ಸಾವಿರ ಹುದ್ದೆ ಭರ್ತಿಗೆ ಅನುಮೋದನೆ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಹಿಂದಿನ ಸರ್ಕಾರದ ಹಗರಣದಿಂದಾಗಿ 545 ಉಪನಿರೀಕ್ಷಕರ ನೇಮಕಾತಿ ನಿಂತಿತ್ತು. ಕಳೆದ ಐದು ವರ್ಷ ಯಾರನ್ನೂ ನೇಮಕ ಮಾಡಲಾಗಿರಲಿಲ್ಲ. ನಾನು ಬಂದ ಮೇಲೆ ಹಗರಣ ಮುಕ್ತ ಪರೀಕ್ಷೆ ನಡೆಸಿ 954 ಸಬ್ ಇನ್ಸ್‌ಪೆಕ್ಟರ್‌ಗಳ ನೇಮಕ ಮಾಡಲಾಗಿದೆ. ಅವರು ತರಬೇತಿಯಲ್ಲಿದ್ದು, ಮುಂದಿನ ತಿಂಗಳು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದರು.

ಸೈಬರ್ ಅಪರಾಧಗಳ ಹೆಚ್ಚಳದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ 1.05 ಪೊಲೀಸರಿಗೆ ಸೈಬರ್ ತರಬೇತಿ ನೀಡಲಾಗುತ್ತಿದೆ. ಇದೆಲ್ಲಾ ನನ್ನ ಸಾಧನೆ ಅಲ್ಲವೇ? ಎಂದು ಸಚಿವರು ಪ್ರಶ್ನಿಸಿದರು.

ಇವೆಲ್ಲದರ ನಡುವೆಯೂ ಇಲಾಖೆಯಲ್ಲಿ ಅಲ್ಲೊಬ್ಬರು ಇನ್ನೊಬ್ಬರು ಕಪ್ಪುಕುರಿಗಳು ಇರುತ್ತಾರೆ. ಅಂತಹವರು ಎಷ್ಟೇ ದೊಡ್ಡವರಾಗಿದ್ದರು ಕಠಿಣ ಕ್ರಮ ಜರುಗಿಸದೆ ಬಿಡುವುದಿಲ್ಲ ಎಂದು ಸಚಿವ ಪರಮೇಶ್ವರ ಹೇಳಿದರು.

The post ಅಸಮರ್ಥ ಎಂಬ ಟೀಕೆಗೆ ಜಗ್ಗುವವ ನಾನಲ್ಲ appeared first on Samyukta Karnataka.