ಬೀದರ್ Archives - Samyukta Karnataka

ಆಡಳಿತಾತ್ಮಕ ಪಾರದರ್ಶಕತೆಗೆ ನಮ್ಮ ಸರ್ಕಾರ ಬದ್ಧ
ಬೀದರ್: ಬೀದರ್ ನಗರದ ಸಮಗ್ರ ಅಭಿವೃದ್ಧಿ, ನಾಗರಿಕರ ಮೂಲಭೂತ ಸೌಕರ್ಯ ಹಾಗೂ ಆಡಳಿತಾತ್ಮಕ ಪಾರದರ್ಶಕತೆಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ಬೀದರ್ ಜಿಲ್ಲಾ ಪಂಚಾಯತ್ ಆವರಣದಲ್ಲಿ ಜರುಗಿದ ಬೀದರ್ ಮಹಾನಗರ ಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಾಲಿಕೆಯಲ್ಲಿ ಖಾಲಿ ಇರುವ ಪೌರ ಕಾರ್ಮಿಕರ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಲು ಕ್ರಮ ಕೈಗೊಳ್ಳಿ. ಸೇವೆಯಲ್ಲಿರುವ ಪೌರ ಕಾರ್ಮಿಕರಿಗೆ ಅಗತ್ಯ ತರಬೇತಿ ನೀಡುವುದರ ಜೊತೆಗೆ, ಅವರಿಗೆ ಬೇಕಾದ ಎಲ್ಲಾ ಮೂಲಭೂತ ಅವಶ್ಯಕತೆಗಳನ್ನು ಯಾವುದೇ ಲೋಪವಿಲ್ಲದೆ ಪೂರೈಸಬೇಕು ಎಂದು ತಿಳಿಸಿದರು.

ಕಳೆದ ವರ್ಷದ ಬಾಕಿ ಉಳಿದಿರುವ ಎಲ್ಲಾ ಕಾಮಗಾರಿಗಳನ್ನು ತಕ್ಷಣವೇ ಮುಗಿಸಬೇಕು. ಯುಐಡಿಎಫ್ (UIDF) ಯೋಜನೆ ಅಡಿಯಲ್ಲಿ ರೂ. 45 ಕೋಟಿ ವೆಚ್ಚದ ಕಾಮಗಾರಿಗಳನ್ನು ನಿಗದಿತ ಬಜೆಟ್‌ನಲ್ಲಿ ಮಾಡಲು ಸಾಧ್ಯವಾಗದಿದ್ದರೆ, ತಕ್ಷಣವೇ ಮರು ಅಂದಾಜು ಮಾಡಿ ಪ್ರಸ್ತಾವನೆ ಸಲ್ಲಿಸಿ. ಹಾಗೆಯೇ, ಮುಂಬರುವ 2056ರ ವರ್ಷದ ಜನಸಂಖ್ಯೆ ಮತ್ತು ನೀರಿನ ಅಗತ್ಯತೆಯನ್ನು ಕಲ್ಪಿಸಿಕೊಂಡು, ಅದಕ್ಕೆ ತಕ್ಕಂತೆ ನೀರಿನ ಸಂಸ್ಕರಣಾ ಘಟಕಗಳನ್ನು ನಿರ್ಮಿಸಬೇಕು. ನಗರದಲ್ಲಿ ಯುಜಿಡಿ ಕಾಮಗಾರಿ ಶೇಕಡಾ 100 ರಷ್ಟು ಪೂರ್ಣಗೊಳ್ಳಬೇಕು ಎಂದರು.

ನಗರದಲ್ಲಿ ನಿರ್ಮಿಸಲಾಗುವ ಮಲ್ಟಿಪಲ್ ಕಮರ್ಷಿಯಲ್ ಕಾಂಪ್ಲೆಕ್ಸ್‌ಗಳಲ್ಲಿ ಕಡ್ಡಾಯವಾಗಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಿಸಬೇಕು. ರಸ್ತೆ ಬದಿ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಪ್ರತ್ಯೇಕ ಮಾರುಕಟ್ಟೆ ನಿರ್ಮಿಸಿಕೊಡಬೇಕು. ಸ್ಥಳೀಯ ಬಿದರಿ ಕಲೆಯನ್ನು ಪ್ರೋತ್ಸಾಹಿಸಲು ಕಾರ್ಖಾನೆ ಸ್ಥಾಪಿಸುವ ಕುರಿತು ಅಗತ್ಯ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ನಗರದ ಪ್ರತಿಯೊಂದು ಆಸ್ತಿಯ ಜಿಪಿಎಸ್ ಮ್ಯಾಪಿಂಗ್ ಕಡ್ಡಾಯವಾಗಿ ಆಗಬೇಕು. ಸಾರ್ವಜನಿಕರಿಗೆ ಯಾವುದೇ ಅಲೆದಾಟವಿಲ್ಲದೆ ಸರಿಯಾದ ಸಮಯಕ್ಕೆ ʻಈ-ಖಾತಾʼ ತಲುಪಿಸಬೇಕು. ಅಧಿಕೃತ ಟ್ರೇಡ್ ಲೈಸೆನ್ಸ್ ಇಲ್ಲದೆ ಬಿಸಿನೆಸ್ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರ ನೈರ್ಮಲ್ಯಕ್ಕಾಗಿ ತಕ್ಷಣವೇ ʻವೇಸ್ಟ್ ಪ್ರೊಸೆಸಿಂಗ್ ಯೂನಿಟ್ʼ ತೆರೆಯಬೇಕು ಹಾಗೂ ಕಸ ಬೇರ್ಪಡಿಸುವ ಮೆಷಿನ್‌ಗಳನ್ನು ಖರೀದಿಸಬೇಕು. ಸಾರ್ವಜನಿಕ ಶೌಚಾಲಯಗಳನ್ನು ಅತ್ಯಂತ ಸ್ವಚ್ಛವಾಗಿ ಮತ್ತು ಉತ್ತಮ ಸ್ಥಿತಿಯಲ್ಲಿಡಬೇಕು. ಸಾರ್ವಜನಿಕರಲ್ಲಿ ಕಸ ನಿರ್ವಹಣೆ ಕುರಿತು ಅರಿವು ಮೂಡಿಸಲು ಐಇಸಿ ಚಟುವಟಿಕೆಗಳನ್ನು ಹೆಚ್ಚಾಗಿ ನಡೆಸಿ ಎಂದು ತಿಳಿಸಿದರು.

ರಾಜ್ಯ ಸಂಪುಟ ಸಭೆಯಲ್ಲಿ ಮಹಾನಗರ ಪಾಲಿಕೆಗೆ ಒಟ್ಟಾರೆ ಅಭಿವೃದ್ಧಿಗಾಗಿ ರೂ. 200 ಕೋಟಿ ನೀಡಲು ತೀರ್ಮಾನಿಸಲಾಗಿದೆ. ಈ ಅನುದಾನವನ್ನು ಸೂಕ್ತವಾಗಿ ಬಳಸಿಕೊಂಡು ನಗರದ ಚಿತ್ರಣ ಬದಲಾಯಿಸುವ ಸಮಗ್ರ ಕ್ರಿಯಾ ಯೋಜನೆ ರೂಪಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕರಾದ ರಹೀಮ್ ಖಾನ್, ಬೀದರ್ ಮಹಾನಗರ ಪಾಲಿಕೆ ಆಯುಕ್ತರಾದ ಮುಕುಲ್ ಜೈನ್ ಹಾಗೂ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಹಳೆಯ ಸ್ನೇಹದ ನೆನಪು: ಡಿ.ಕೆ.ಶಿ – ಕ್ರೇಜಿಸ್ಟಾರ್‌ ಭೇಟಿ ವೈರಲ್

The post ಆಡಳಿತಾತ್ಮಕ ಪಾರದರ್ಶಕತೆಗೆ ನಮ್ಮ ಸರ್ಕಾರ ಬದ್ಧ appeared first on Samyukta Karnataka.

ಕಲ್ಯಾಣ ಸಾರಿಗೆ ಬಸ್-ಬೈಕ್ ಡಿಕ್ಕಿ: ಇಬ್ಬರು ಸಾವು
ಬೀದರ್: ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಹುಮನಾಬಾದ್ ತಾಲೂಕಿನ ಕಬೀರಾಬಾದವಾಡಿ ಕ್ರಾಸ್ ಬಳಿ ಭಾನುವಾರ ಬೆಳಿಗ್ಗೆ ಸಂಭವಿಸಿದೆ.

ಹುಮನಾಬಾದ್ ತಾಲೂಕಿನ ದಬಲಗುಂಡಿ ಗ್ರಾಮದ ಪವನ್ ಮಾಣಿಕ್ (22) ಹಾಗೂ ಈತನ ಚಿಕ್ಕಮ್ಮ ನರಸಮ್ಮ ಸೈಬಣ್ಣ (24) ಮೃತ ದುರ್ದೈವಿಗಳು. ಮನ್ನಾಎಖ್ಖೆಳ್ಳಿಯಿಂದ ಬೈಕ್ ಮೇಲ್ ಸ್ವಗ್ರಾಮಕ್ಕೆ ವಾಪಸ್ ಆಗುತ್ತಿದ್ದ ವೇಳೆ ಬೀದರ್- ಕಲಬುರಗಿ ವೇಗದೂತ ಬಸ್ಸಿಗೆ ಇವರ ಬೈಕ್ ಅಪ್ಪಳಿಸಿದೆ.

ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರೂ ಬೈಕ್‌ ಸವಾರರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಅತೀಯಾದ ವೇಗವೇ ಘಟನೆಗೆ ಕಾರಣ ಎನ್ನಲಾಗಿದೆ. ಹುಮನಾಬಾದ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಶಾಸಕ ಸೈಯದ್ ಯಾಸೀನ್ ನಿಧನ

The post ಕಲ್ಯಾಣ ಸಾರಿಗೆ ಬಸ್-ಬೈಕ್ ಡಿಕ್ಕಿ: ಇಬ್ಬರು ಸಾವು appeared first on Samyukta Karnataka.

ಬಕ್ರೀದ್ ವೇಳೆ ಗಲಾಟೆ: ಶಾಸಕ ಶರಣು ಸಲಗರ್ ಬಂಧನಕ್ಕೆ ವಾರಂಟ್
ಬೀದರ್: ಬಕ್ರೀದ್ ಸಂದರ್ಭದಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವಕಲ್ಯಾಣ ಬಿಜೆಪಿ ಶಾಸಕ ಶರಣು ಸಲಗರ್ ಅವರಿಗೆ ಬೆಂಗಳೂರಿನ 42ನೇ ಎಸಿಜೆಎಂ (ವಿಶೇಷ ಜನಪ್ರತಿನಿಧಿಗಳ) ನ್ಯಾಯಾಲಯ ಜಾಮೀನು ರಹಿತ ಬಂಧನ ವಾರಂಟ್ ಜಾರಿಗೊಳಿಸಿದೆ.

2023ರ ಜುಲೈ 1ರಂದು ಬಸವಕಲ್ಯಾಣ ನಗರದಲ್ಲಿ ಬಕ್ರೀದ್ ಸಂದರ್ಭದಲ್ಲಿ ಶಾಸಕ ಸಲಗರ್ ಅವರು ಅಕ್ರಮ ಗೋಹತ್ಯೆ ನಡೆದಿದೆ ಎಂದು ಬಡಾವಣೆಯ ಮುಸ್ಲಿಂ ಓಣಿ ಹಾಗೂ ಅಲ್ಲಿನ ಮನೆಯೊಂದಕ್ಕೆ ನುಗ್ಗಿದ್ದರು. ಇದಕ್ಕೆ ಸ್ಥಳೀಯ ಕೆಲವರು ತಗಾದೆ ತೆಗೆದು ಅನಧಿಕೃತವಾಗಿ ಶಾಸಕರು ಪ್ರವೇಶಿಸಿದ್ದಾರೆ ಎಂದು ದೂರಿದ್ದರು. ಈ ಸಂಬಂಧ ದೂರು ದಾಖಲಿಸಿದ್ದರು. ಪ್ರಕರಣದ ವಿಚಾರಣೆಗೆ ಶಾಸಕರು ಪದೇ ಪದೆ ಗೈರು ಹಾಜರಾದ ಕಾರಣ ನ್ಯಾಯಾಲಯ ಅರೆಸ್ಟ್ ವಾರೆಂಟ್ ಹೊರಡಿಸಿದೆ.

ಅಕ್ರಮ ಗೋಹತ್ಯೆ ತಡೆಯಲು ತಾವು ನಿಯಮಬದ್ಧ ಹೆಜ್ಜೆ ಇಟ್ಟ ಬಗ್ಗೆ ಶಾಸಕ ಸಲಗರ್ ಹೇಳಿದ್ದರು. ನಿಯಮಬಾಹಿರ ಗೋಹತ್ಯೆಗೆ ಅವಕಾಶ ನೀಡಲ್ಲ ಎಂದು ಪಟ್ಟು ಹಿಡಿದು ಕ್ರಮಕ್ಕೆ ಮುಂದಾಗಿದ್ದರು. ಆದರೆ ಇದಕ್ಕೆ ಮುಸ್ಲಿಂ ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ‌

ಈ ಪ್ರಕರಣ ಭಾರಿ ಗುಲ್ಲೆಬ್ಬಿಸಿತ್ತು. ಕೋರ್ಟ್‌ ವಾರೆಂಟ್ ಬಳಿಕ ಶಾಸಕರಿಗೆ ಬಂಧನದ ಭೀತಿ ಆವರಿಸಿದೆ. ಸ್ಥಳೀಯ ಪೊಲೀಸರು ಶನಿವಾರ ಶಾಸಕರ ಮನೆಗೆ ಭೇಟಿ ನೀಡಿದ್ದರು. ಆದರೆ ಶಾಸಕರು ಇರಲಿಲ್ಲ. ಪ್ರಕರಣದ ಮುಂದಿನ ವಿಚಾರಣೆ ಜೂ. 18ಕ್ಕೆ ನಡೆಯಲಿದೆ.

ಕವಿವಿಯಲ್ಲಿ ಪ್ರಾಧ್ಯಾಪಕನ ಲವ್ವಿಡವ್ವಿ: ತನಿಖಾ ಸಮಿತಿ ರಚನೆ

The post ಬಕ್ರೀದ್ ವೇಳೆ ಗಲಾಟೆ: ಶಾಸಕ ಶರಣು ಸಲಗರ್ ಬಂಧನಕ್ಕೆ ವಾರಂಟ್ appeared first on Samyukta Karnataka.

45 ಕೋಟಿ ರೂ. ಲೂಟಿ: ವಿ.ವಿ. ವಿಶ್ರಾಂತ ಕುಲಪತಿ ಸೇರಿ ಆರು ಬಂಧನ
ಬೀದರ್: ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 2017-18ನೇ ಸಾಲಿನಲ್ಲಿ ನಡೆದಿದೆ ಎನ್ನಲಾದ 45 ಕೋಟಿ ರೂ. ಹೇರಾಫೇರಿ ಸಂಬಂಧಿಸಿದಂತೆ ವಿವಿ ವಿಶ್ರಾಂತ ಕುಲಪತಿ ಡಾ.ಎಚ್.ಡಿ. ನಾರಾಯಣಸ್ವಾಮಿ ಸೇರಿದಂತೆ 6 ಮಂದಿಗೆ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಸೋಮವಾರ ರಾತ್ರಿ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರ ತಂಡವು, ಹಿಂದಿನ ಕುಲಪತಿ ಡಾ. ನಾರಾಯಣ ಸ್ವಾಮಿ, 2017-2018ರ ಅವಧಿಯಲ್ಲಿ ವಿವಿಯ ಹಣಕಾಸು ನಿಯಂತ್ರಣಾಧಿಕಾರಿಯಾಗಿದ್ದ ಕೆ.ಎಲ್. ಸುರೇಶ್ (ಸದ್ಯಕ್ಕೆ ನಿವೃತ್ತಿ), ಎಫ್‌ಡಿಎ ಮೃತ್ಯುಂಜಯ ಹಿರೇಮಠ, ಬೆಂಗಳೂರು ಎಂಟರ್‌ಪ್ರೈಸಸ್ ಮಾಲೀಕ ಬೊಪಣ್ಣ, ಮಂಜುನಾಥ ಮತ್ತು ಹಣವನ್ನು ಖಾತೆಗೆ ಹಾಕಿಸಿಕೊಂಡು ಡ್ರಾ ಮಾಡಿಕೊಟ್ಟ ರಾಮಗೊಂಡ ಅವರಿಗೆ ಬಂಧಿಸಿದೆ.

ಒಂದಿಲ್ಲೊಂದು ವಿವಾದದಲ್ಲಿ ಸಿಲುಕಿ ಚರ್ಚೆಯಲ್ಲಿರುವ ರಾಜ್ಯದ ಏಕೈಕ ಪಶು ವಿವಿಗೆ ಈ ಬೆಳವಣಿಗೆಯು ಕಪ್ಪು ಚುಕ್ಕೆಯನ್ನೇ ಅಂಟಿಸಿದೆ. ಖೊಟ್ಟಿ ಬಿಲ್‌ಗಳನ್ನು ಸೃಷ್ಟಿಸಿ ಭಾರಿ ಗೋಲ್ಮಾಲ್ ನಡೆಸಲಾಗಿದೆ ಎನ್ನುವ ದೂರಿನ ಮೇಲೆ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರು ಬೆಂಗಳೂರು, ಬೀದರ್‌ನಲ್ಲಿ ಕಾರ್ಯಾಚರಣೆ ನಡೆಸಿ ಆಪಾದಿತರನ್ನು ಅರೆಸ್ಟ್ ಮಾಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿವಿಯ ಎಫ್‌ಡಿಎ ಮೃತ್ಯುಂಜಯ ಹಿರೇಮಠ ಅವರು ಬೆಂಗಳೂರು ಮೂಲದ ಖಾಸಗಿ ಎಂಟರ್‌ಪ್ರೈಸಸ್ ಜೊತೆಯಲ್ಲಿ ಸೇರಿಕೊಂಡು ವಿವಿಧ ಖರೀದಿ ಹೆಸರಿನಲ್ಲಿ ಖೊಟ್ಟಿ ಬಿಲ್‌ಗಳನ್ನು ಸೃಷ್ಟಿಸಿ ಕೋಟ್ಯಂತರ ರೂ. ಲೂಟಿ ಹೊಡೆದಿದ್ದಾರೆ. ಅಕ್ರಮ ಹಣ ವರ್ಗಾವಣೆ ಮಾಡಿಕೊಂಡು ಸರ್ಕಾರದ ಬೊಕ್ಕಸಕ್ಕೆ ದೊಡ್ಡ ನಷ್ಟ ತಂದಿದ್ದಾರೆ ಎಂಬ ಆರೋಪವಿತ್ತು. ಈ ಪ್ರಕರಣದ ಸಂಬಂಧ ನ್ಯಾಯಾಲಯ ಸಹ ವಾರೆಂಟ್ ಜಾರಿಗೊಳಿಸಿತ್ತು. ಇದರ ಬೆನ್ನಲ್ಲೇ ಲೋಕಾಯುಕ್ತ ಪೊಲೀಸರು ಆಗಿನ ಕುಲಪತಿ ಸೇರಿ ಆರು ಮಂದಿಗೆ ಬಂಧಿಸಿದೆ.

ಸಿದ್ದರಾಮಯ್ಯ–ಡಿಕೆಶಿ ದೆಹಲಿ ಸಭೆ: ವದಂತಿಗಳಿಗೆ ಕಾಂಗ್ರೆಸ್ ತೆರೆ

The post 45 ಕೋಟಿ ರೂ. ಲೂಟಿ: ವಿ.ವಿ. ವಿಶ್ರಾಂತ ಕುಲಪತಿ ಸೇರಿ ಆರು ಬಂಧನ appeared first on Samyukta Karnataka.

ಹೊಸ ಮನೆ ಸಂಭ್ರಮದಲ್ಲಿ ಊಟ ಮಾಡಿದ 40ಕ್ಕೂ ಹೆಚ್ಚು ಮಂದಿ; ಫುಡ್ ಪಾಯಿಸನ್‌ನಿಂದ ಆಸ್ಪತ್ರೆಗೆ ದಾಖಲು!
ಜಿಲ್ಲೆಯ ಭಾಲ್ಕಿಯ ಜಾಂತಿ ಗ್ರಾಮದಲ್ಲಿ ನಡೆದ ಈ ದುರ್ಘಟನೆ ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ. ಹೊಸ ಮನೆಯ ಮೇಲ್ಛಾವಣಿ ಹಾಕಿದ ಸಂತೋಷದಲ್ಲಿ ಆಯೋಜಿಸಿದ್ದ ಊಟವೇ ಇಷ್ಟು ದೊಡ್ಡ ಅವಾಂತರಕ್ಕೆ ಕಾರಣವಾಗಿದ್ದು, ಗ್ರಾಮದಲ್ಲಿ ಶೋಕ ವಾತಾವರಣ ನಿರ್ಮಾಣವಾಗಿದೆ.

ಗ್ರಾಮಸ್ಥರ ಹೇಳಿಕೆ ಪ್ರಕಾರ, ರಾತ್ರಿ ವೇಳೆ ಎಲ್ಲರೂ ಊಟ ಸೇವಿಸಿ ಮನೆಗಳಿಗೆ ಹಿಂತಿರುಗಿದ್ದರು. ಆದರೆ ಮಧ್ಯರಾತ್ರಿ ಬಳಿಕ ಕೆಲವರಿಗೆ ಹೊಟ್ಟೆನೋವು, ವಾಂತಿ ಮತ್ತು ಭೇದಿ ಕಾಣಿಸಿಕೊಂಡಿದ್ದು, ಕ್ರಮೇಣ ಹಲವರಿಗೂ ಇದೇ ಲಕ್ಷಣಗಳು ಕಾಣಿಸಿಕೊಂಡಿವೆ. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ತಕ್ಷಣವೇ ಸ್ಥಳೀಯರು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ದೌಡಾಯಿಸಿದ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳು ತಕ್ಷಣ ರೋಗಿಗಳನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ. 10 ರಿಂದ 15 ಜನರನ್ನು ಬೀದರ್‌ನ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇನ್ನೂ ಮನೆಯ ಮಾಲೀಕರಾದ ರಾಜಕುಮಾರ್, ಸಂಗೀತಾ, ಈರಮ್ಮ, ಶಿವಾನಂದ್ ಮತ್ತು ಅಂಬಿಕಾ ಸೇರಿದಂತೆ ಹಲವರ ಸ್ಥಿತಿ ಕೂಡ ಗಂಭೀರವಾಗಿದ್ದು, ಉಳಿದ ಜನರಿಗೆ ಸಮೀಪದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಆರೋಗ್ಯ ಇಲಾಖೆಯ ಅಧಿಕಾರಿಗಳು ಈಗಾಗಲೇ ಘಟನೆಗೆ ಸಂಬಂಧಿಸಿದಂತೆ ಪರಿಶೀಲನೆ ಆರಂಭಿಸಿದ್ದು, ಆಹಾರದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಊಟದಲ್ಲಿ ಬಳಸಿದ ಪದಾರ್ಥಗಳಲ್ಲಿ ದೋಷ ಉಂಟಾಗಿರಬಹುದೆಂದು ಶಂಕಿಸಲಾಗಿದೆ.

ಈ ಘಟನೆಯ ಹಿನ್ನೆಲೆ, ಸಾರ್ವಜನಿಕರಿಗೆ ಎಚ್ಚರಿಕೆ ನೀಡಿರುವ ಅಧಿಕಾರಿಗಳು, ಯಾವುದೇ ಸಮಾರಂಭಗಳಲ್ಲಿ ಸ್ವಚ್ಛತೆ ಮತ್ತು ಆಹಾರದ ಗುಣಮಟ್ಟಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಮನವಿ ಮಾಡಿದ್ದಾರೆ. ವಿಶೇಷವಾಗಿ ಬೇಸಿಗೆ ಕಾಲದಲ್ಲಿ ಆಹಾರ ಬೇಗ ಹಾಳಾಗುವ ಸಾಧ್ಯತೆ ಇರುವುದರಿಂದ ಹೆಚ್ಚಿನ ಜಾಗ್ರತೆ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಇದೀಗ ಗ್ರಾಮದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಹೆಚ್ಚಿನವರು ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ಅವರ ಆರೋಗ್ಯದ ಮೇಲೆ ಕಣ್ಣಿಟ್ಟಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವವರ ಚಿಕಿತ್ಸೆಗೆ ವಿಶೇಷ ತಂಡವನ್ನು ನಿಯೋಜಿಸಲಾಗಿದೆ.

ಒಟ್ಟಿನಲ್ಲಿ, ಸಂತೋಷದ ಸಂದರ್ಭವೊಂದು ದುರ್ಘಟನೆಗೆ ತಿರುಗಿರುವುದು ಗ್ರಾಮಸ್ಥರಲ್ಲಿ ನೋವು ಮತ್ತು ಆತಂಕ ಮೂಡಿಸಿದೆ. ತನಿಖೆ ಪೂರ್ಣಗೊಂಡ ಬಳಿಕ ಘಟನೆಯ ನಿಖರ ಕಾರಣ ಹೊರಬರುವ ನಿರೀಕ್ಷೆಯಿದೆ.

The post ಹೊಸ ಮನೆ ಸಂಭ್ರಮದಲ್ಲಿ ಊಟ ಮಾಡಿದ 40ಕ್ಕೂ ಹೆಚ್ಚು ಮಂದಿ; ಫುಡ್ ಪಾಯಿಸನ್‌ನಿಂದ ಆಸ್ಪತ್ರೆಗೆ ದಾಖಲು! appeared first on Samyukta Karnataka.

ಆಕಸ್ಮಿಕ ಬೆಂಕಿ: 45 ಕುರಿ ಸಹಿತ ಕುರಿಗಾಹಿ ಸಜೀವ ದಹನ
ಬೀದರ್: ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ 45 ಕುರಿಗಳ ಸಮೇತ ಕುರಿಗಾಹಿ ಸಜೀವ ದಹನಗೊಂಡ ಹೃದಯವಿದ್ರಾವಕ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಬೋರಾಳ್ ಗ್ರಾಮದಲ್ಲಿ ಕಳೆದ ಮಧ್ಯರಾತ್ರಿ ನಡೆದಿದೆ.

ಗ್ರಾಮದ ಶಂಕರ್ ವೀರಗೊಂಡ ಮೇತ್ರೆ (63) ಕುರಿಗಳನ್ನು ಬೆಂಕಿಯ ಕೆನ್ನಾಲಿಗೆಯಿಂದ ಬಚಾವ್ ಮಾಡಲು ಹೋಗಿ ದುರಂತ ಅಂತ್ಯ ಕಂಡಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕೊಟ್ಟಿಗೆಗೆ ಬೆಂಕಿ ತಗುಲಿ ದುರಂತ ಸಂಭವಿಸಿದ ಶಂಕೆ ವ್ಯಕ್ತವಾಗಿದೆ.

ಶಂಕರ್ ಮೇತ್ರೆ ಅವರ ಹೊಲದಲ್ಲಿ ತಗಡಿನ ಶೆಡ್ ಇದೆ. ಇದರಲ್ಲಿ ಕುರಿ, ಮೇಕೆಗಳನ್ನು ಕಟ್ಟುತ್ತಾರೆ. ಇದಲ್ಲದೆ ವಿವಿಧ ಆಹಾರ ಧಾನ್ಯದ ಮೂಟೆ (ಚೀಲ) ಗಳನ್ನು ಸಹ ಇಲ್ಲಿಟ್ಟಿದ್ದರು. ರಾತ್ರಿ ಆಕಸ್ಮಿಕವಾಗಿ ಶೆಡ್‌ಗೆ ಬೆಂಕಿ ತಗುಲಿದೆ. ಕ್ಷಣಾರ್ಧದಲ್ಲೇ ಬೆಂಕಿಯ ಕೆನ್ನಾಲಿಗೆ ಚಾಚಿದೆ. ಬೆಂಕಿ ಹೊತ್ತಿರುವುದನ್ನು ಕಂಡ ಶಂಕರ್ ಮೇತ್ರೆ, ತಕ್ಷಣ ಕುರಿಗಳನ್ನು ಬಿಟ್ಟುಕೊಟ್ಟು ಬಚಾವ್ ಮಾಡಲು ಶೆಡ್‌ನೊಳಗೆ ನುಗ್ಗಿದ್ದಾರೆ. ಈ ವೇಳೆ ವ್ಯಾಪಕವಾಗಿ ಆವರಿಸಿದ್ದ ದಟ್ಟ ಹೊಗೆ, ಬೆಂಕಿ ಜ್ವಾಲೆಗೆ ಸಿಲುಕಿ ಅಲ್ಲೇ ದಹನಗೊಂಡಿದ್ದಾರೆ. ಶೆಡ್‌ನಲ್ಲಿದ್ದ ಎಲ್ಲ 45 ಕುರಿ, ಮೇಕೆಗಳು ಸಹ ಸಜೀವ ದಹನವಾಗಿವೆ.

ಬೆಂಕಿ ಹೊತ್ತಿದಂತೆಯೇ ಗಾಳಿಯಲ್ಲಿ ಒಮ್ಮೆಲೆ ಧಗಧಗ ಜೋರಾಗಿ ವ್ಯಾಪಿಸಿದೆ. ಹೀಗಾಗಿ ಸ್ಥಳೀಯರು, ಅಗ್ನಿಶಾಮಕ ತಂಡ ಅದೆಷ್ಟೇ ಪ್ರಯತ್ನಪಟ್ಟರೂ ಯಾವುದೇ ಫಲ ನೀಡಿಲ್ಲ. ಶಂಕರ್ ಮೇತ್ರೆ ಸಮೇತ 4.50 ಲಕ್ಷದ ಕುರಿ, ಮೇಕೆಗಳು, 80 ಸಾವಿರದ ಹತ್ತಿ, 1 ಲಕ್ಷದಷ್ಟು ಕುಸುಬೆ ಬೆಳೆ ಇತರೆ ವಸ್ತು ಸುಟ್ಟು ಭಸ್ಮವಾಗಿವೆ.

ಬೆಂಕಿ ಹೇಗೆ ತಗುಲಿದೆ ಎಂಬ ನಿಖರ ಕಾರಣ ಗೊತ್ತಾಗಿಲ್ಲ. ಇದು ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಲೇ ಆಗಿದೆಯೇ ಅಥವಾ ಬೇರೇನಾದರೂ ಬೆಳವಣಿಗೆ ಇವೆಯೇ ಎಂಬುದು ತನಿಖೆ ಬಳಿಕವೇ ಗೊತ್ತಾಗಲಿದೆ.

The post ಆಕಸ್ಮಿಕ ಬೆಂಕಿ: 45 ಕುರಿ ಸಹಿತ ಕುರಿಗಾಹಿ ಸಜೀವ ದಹನ appeared first on Samyukta Karnataka.

ಆನ್‌ಲೈನ್ ಗೇಮ್ ಚಟ: ವೈದ್ಯ ವಿದ್ಯಾರ್ಥಿ ಆತ್ಮಹತ್ಯೆ
ಬೀದರ್: ಆನ್‌ಲೈನ್ ಗೇಮ್ ಚಟಕ್ಕೆ ಬಿದ್ದ ವೈದ್ಯ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬ್ರಿಮ್ಸ್)ಯಲ್ಲಿ ಮಂಗಳವಾರ ನಡೆದಿದೆ.

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸಲಗರ್ ತಾಂಡಾದ ಅನಿಷ್ಕಾರ್ ಚವ್ಹಾಣ್ (21) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಅಂತಿಮ ವರ್ಷದ ಮೆಡಿಕಲ್ ಓದುತ್ತಿದ್ದ ಅನಿಷ್ಕಾರ್ ಬ್ರಿಮ್ಸ್ ವಸತಿ ನಿಲಯದ ತನ್ನ ಕೋಣೆಯಲ್ಲಿನ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕೆಲವು ತಿಂಗಳಿನಿಂದ ಈತ ಆನ್‌ಲೈನ್ ಆಟವಾಡುವ ಗೀಳು ಅಂಟಿಸಿಕೊಂಡಿದ್ದ. ಆಟದಲ್ಲಿ ಒಂದಿಷ್ಟು ಹಣ ಕಳೆದುಕೊಂಡಿದ್ದಾನೆ. ಸ್ನೇಹಿತರು ಹಾಗೂ ಪರಿಚಿತರ ಬಳಿ ಸಾಲವೂ ಪಡೆದಿದ್ದ. ನಿನ್ನೆಯೇ ಪರಿಚಿತರ ಬಳಿ 80 ಸಾವಿರ ರೂ. ಪಡೆದಿದ್ದು, ಈ ಹಣ ಆಟದಲ್ಲಿ ಕಳೆದುಕೊಂಡಿದ್ದ ಎನ್ನಲಾಗಿದೆ. ಆಟದ ಗೀಳು ಹಾಗೂ ಹಣ ಕಳೆದುಕೊಂಡ ಖಿನ್ನತೆಯಲ್ಲಿ ಆತ್ಮಹತ್ಯೆಗೆ ಕೈ ಹಾಕಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.

ಬೆಳಿಗ್ಗೆ ಅನಿಷ್ಕಾರ್ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದಂತೆ ಸಹಪಾಠಿಗಳು ಸ್ಥಳಕ್ಕಾಗಮಿಸಿ ಕಣ್ಣೀರಿಟ್ಟರು. ಕಾಲೇಜಿನಲ್ಲಿ ಚೆನ್ನಾಗಿ ಓದುತ್ತಿದ್ದ. ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ. ಆತ್ಮಹತ್ಯೆಗೆ ಕೈ ಹಾಕಿರುವುದು ದುರದೃಷ್ಟಕರ ಎಂದು ಮಮ್ಮಲ ಮರಗಿದರು.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅನಿಷ್ಕಾರ್ ಪಾಲಕರ ಆಕ್ರಂದನ ಮುಗಿಲುಮುಟ್ಟಿತ್ತು. ಎಸ್ಪಿ ಪ್ರದೀಪ್ ಗುಂಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನ್ಯೂಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.‌ ಸಮಗ್ರ ತನಿಖೆ ಬಳಿಕ ಆತ್ಮಹತ್ಯೆಯ ನಿಖರ ಕಾರಣ ಗೊತ್ತಾಗಲಿದೆ.

The post ಆನ್‌ಲೈನ್ ಗೇಮ್ ಚಟ: ವೈದ್ಯ ವಿದ್ಯಾರ್ಥಿ ಆತ್ಮಹತ್ಯೆ appeared first on Samyukta Karnataka.

ಪ್ರೀತ್ಸೇ ಅಂತ ಪೀಡಿಸಿದ ಸಹಪಾಠಿ; ಬಾಲಕಿ ಆತ್ಮಹತ್ಯೆ
ಬೀದರ್: ಹತ್ತನೇ ತರಗತಿ ವಿದ್ಯಾರ್ಥಿನಿಯೋರ್ವಳು ಶಾಲೆಯ ಮಹಡಿ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಟಗುಪ್ಪಾ ತಾಲೂಕಿನ ಭೆಮಳಖೇಡ ಗ್ರಾಮದಲ್ಲಿ ನಡೆದಿದೆ.

ವಿದ್ಯಾರ್ಥಿನಿ ಮದಿಯಾ ನಶೀರ್ ಪಾಷಾ (16) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಈಕೆಗೆ ಸಹಪಾಠಿ ಪ್ರೀತಿ ಮಾಡುವಂತೆ ಪೀಡಿಸುತ್ತಿದ್ದರಿಂದ ಆಕೆಯ ಮೇಲೆ ಮಾನಸಿಕ ಒತ್ತಡ ಉಂಟಾಗಿದೆ ಎನ್ನಲಾಗಿದೆ. ಆದರೆ ಪೊಲೀಸ್ ವರದಿ ಪ್ರಕಾರ, ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ.

ಈ ಕುರಿತು ಭೆಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆ ನಡೆಸಿದ್ದಾರೆ.

The post ಪ್ರೀತ್ಸೇ ಅಂತ ಪೀಡಿಸಿದ ಸಹಪಾಠಿ; ಬಾಲಕಿ ಆತ್ಮಹತ್ಯೆ appeared first on Samyukta Karnataka.

ಬಿಸಿಯೂಟ ಸೇವಿಸಿ 58 ವಿದ್ಯಾರ್ಥಿಗಳು ಅಸ್ವಸ್ಥ
ಬೀದರ್: ಔರಾದ್ ತಾಲೂಕಿನ ಜಮಲಪೂರ ಮರಾಠಿ ಮಾಧ್ಯಮದ ಸರಕಾರಿ ಶಾಲೆಯ 58 ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟ ಸೇವಿಸಿ ಅಸ್ವಸ್ಥರಾಗಿದ್ದಾರೆ.

ಊಟ ಸೇವಿಸಿದ ಮಕ್ಕಳಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡು ಕೆಲ ಕ್ಷಣದಲ್ಲಿ ವಾಂತಿ ಪ್ರಾರಂಭಗೊಂಡಿತು. ಶಿಕ್ಷಕರು 108 ಮತ್ತು ಇತರೆ ವಾಹನಗಳ ಸಹಾಯದಿಂದ ಮಕ್ಕಳನ್ನು ಔರಾದ್ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತಂದಿದ್ದಾರೆ.

ತಕ್ಷಣ ಆಸ್ಪತ್ರೆಗೆ ಕರೆತಂದಿದ್ದರಿಂದ ಎಲ್ಲ ಮಕ್ಕಳು ಚೇತರಿಸಿಕೊಂಡಿದ್ದಾರೆ. ಔರಾದ್ ಪೊಲೀಸ್ ಠಾಣೆ ಸಿಬ್ಬಂದಿ ದೂರು ದಾಖಲಿಸಿಕೊಂಡಿದ್ದಾರೆ. ಮೊದಲಿಗೆ ಹುಳಗಳು ಭರಿತ ಕಳಪೆ ಆಹಾರ, ಅಲ್ಲದೆ ಅಡುಗೆಯವರ ನಿಷ್ಕಾಳಜಿ ಮಾಡಿದ ಎಡವಟ್ಟಿನಿಂದ ಈ ಸಮಸ್ಯೆ ಎದುರಾಗಿರುವದು ಮೇಲ್ನೋಟಕ್ಕೆ ತಿಳಿದು ಬಂದಿದೆ.

The post ಬಿಸಿಯೂಟ ಸೇವಿಸಿ 58 ವಿದ್ಯಾರ್ಥಿಗಳು ಅಸ್ವಸ್ಥ appeared first on Samyukta Karnataka.

ಬೀದರ್‌: ನಿಗೂಢ ವಸ್ತು ಸ್ಪೋಟ – ಮಕ್ಕಳು ಸೇರಿ 6 ಜನರಿಗೆ ಗಾಯ
ಬೀದರ್: ಅನುಮಾನಾಸ್ಪದ ವಸ್ತುವೊಂದು ಏಕಾಏಕಿ ಸ್ಫೋಟಗೊಂಡ ಪರಿಣಾಮ ಶಾಲೆಗೆ ತೆರಳುತ್ತಿದ್ದ ಮಕ್ಕಳು ಸೇರಿದಂತೆ ಆರು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಮೋಳಕೇರಾ ಗ್ರಾಮದಲ್ಲಿ ಇಂದು ನಡೆದಿದೆ. ಈ ದುರ್ಘಟನೆಯಲ್ಲಿ ಮೂವರು ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಸ್ಫೋಟ ಸಂಭವಿಸಿದ ವೇಳೆ ಸ್ಥಳದಲ್ಲೇ ಆರು ಮಕ್ಕಳು ಹಾಗೂ ಇಬ್ಬರು ಯುವಕರು ನಿಂತಿದ್ದರು ಎಂದು ತಿಳಿದು ಬಂದಿದೆ. ಸ್ಫೋಟದ ತೀವ್ರತೆಯಿಂದ ಗಾಯಾಳುಗಳ ಮುಖ, ಮೈ ಮತ್ತು ಕೈ ಭಾಗಗಳಲ್ಲಿ ತೀವ್ರ ಸುಟ್ಟ ಗಾಯಗಳಾಗಿವೆ. ಗಾಯಗೊಂಡ ಎಲ್ಲರನ್ನು ತಕ್ಷಣವೇ ಬೀದರ್‌ನ ಬ್ರಿಮ್ಸ್ (BRIMS) ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಇದನ್ನೂ ಓದಿ: ತುಮಕೂರು ಪಿಎಸ್‌ಐ ಲೋಕಾಯುಕ್ತರ ಬಲೆಗೆ

ಗಾಯಗೊಂಡವರಲ್ಲಿ ಅನ್ವರ್ ಪಷಾ ಎಂಬ ಯುವಕನ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಹೈದರಾಬಾದ್‌ಗೆ ರವಾನಿಸಲಾಗಿದೆ. ಮತ್ತೊಬ್ಬ ಗಾಯಾಳು ಜಬ್ಬಾರ್ ಸಾಬ್ (65) ಎಂಬವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸೋಲ್ಲಾಪೂರ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಗಾಯಾಳುಗಳ ಕುಟುಂಬಸ್ಥರು ಆಸ್ಪತ್ರೆ ಆವರಣದಲ್ಲಿ ಜಮಾಯಿಸಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿದೆ. ಶಾಲಾ ಮಕ್ಕಳಿಗೆ ಸಂಭವಿಸಿದ ಅಪಘಾತದಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಇದನ್ನೂ ಓದಿ: ರಾಜ್ಯ ಸಾರಿಗೆ ಬಸ್‌, ನಿಲ್ದಾಣಗಳಲ್ಲಿ ತಂಬಾಕು ಜಾಹೀರಾತು ಸಂಪೂರ್ಣ ನಿಷೇಧ

ಸ್ಫೋಟಕ್ಕೆ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ. ಮಾಹಿತಿ ಪಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಸ್ಫೋಟಗೊಂಡ ವಸ್ತು ಹಳೆಯ ಸ್ಫೋಟಕವಾಗಿರಬಹುದೇ ಅಥವಾ ಕಲ್ಲು ಗಣಿಗಾರಿಕೆಗೆ ಬಳಸುವ ಜಿಲೆಟಿನ್ ಕಡ್ಡಿಗಳು (ಡೈನಮೈಟ್) ಸ್ಫೋಟಗೊಂಡಿವೆಯೇ ಎಂಬ ಅನುಮಾನ ವ್ಯಕ್ತವಾಗಿದೆ.

ಗಮನಾರ್ಹವೆಂದರೆ, ಇದೇ ಪ್ರದೇಶದಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ಇಂತಹ ಸ್ಫೋಟ ಸಂಭವಿಸಿರುವುದು ಸ್ಥಳೀಯರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಅಕ್ರಮವಾಗಿ ಸಂಗ್ರಹಿಸಲಾದ ಸ್ಫೋಟಕ ವಸ್ತುಗಳೇ ಇದಕ್ಕೆ ಕಾರಣವಾಗಿವೆಯೇ ಎಂಬ ಕೋನದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಲಂಚಕೋರ ಇನ್‌ಸ್ಪೆಕ್ಟರ್‌ನ ಹೈಡ್ರಾಮಾ ವೈರಲ್!

ಸಮಗ್ರ ತನಿಖೆಗೆ ಆದೇಶ: ಈ ಕುರಿತಂತೆ ರಾಜ್ಯದ ಅರಣ್ಯ, ಪರಿಸರ ಹಾಗೂ ಜೀವಶಾಸ್ತ್ರ ಸಚಿವರು ಮತ್ತು ಬೀದರ್ ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ನನಗೆ ಅತ್ಯಂತ ಆಘಾತ ಉಂಟುಮಾಡಿದೆ.

ಗಾಯಾಳುಗಳಿಗೆ ತಕ್ಷಣ ಸೂಕ್ತ ಚಿಕಿತ್ಸೆ ನೀಡುವಂತೆ ಹಾಗೂ ಚಿಕಿತ್ಸಾ ವೆಚ್ಚವನ್ನು ಜಿಲ್ಲಾಡಳಿತವೇ ಭರಿಸುವಂತೆ ಸೂಚನೆ ನೀಡಿದ್ದೇನೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸ್ಫೋಟಕ ತಜ್ಞರನ್ನು ಸ್ಥಳಕ್ಕೆ ಕಳುಹಿಸಿ, ಸ್ಫೋಟ ಸ್ಥಳದಲ್ಲಿ ಮಾದರಿಗಳನ್ನು ಸಂಗ್ರಹಿಸಿ ಸಮಗ್ರ ತನಿಖೆ ನಡೆಸಲು ಆದೇಶಿಸಿದ್ದೇನೆ.

ಸ್ಫೋಟಕ್ಕೆ ಕಾರಣವೇನು? ಬಳಸಿದ ವಸ್ತು ಯಾವುದು? ಅದು ಅಲ್ಲಿ ಹೇಗೆ ಬಂದಿತು? ಯಾವ ಉದ್ದೇಶಕ್ಕಾಗಿ ಬಳಸಲಾಗುತ್ತಿತ್ತು? ಎಂಬ ಎಲ್ಲ ವಿಷಯಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸಿ, ಕಾರಣರಾದವರ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ,

ಕೇಂದ್ರ ಬಜೆಟ್‌: `ಡಿಜಿಟಲ್ ಕರ್ನಾಟಕ’ಕ್ಕೆ ದೊರೆಯುವುದೇ ಅಭಯ?

The post ಬೀದರ್‌: ನಿಗೂಢ ವಸ್ತು ಸ್ಪೋಟ – ಮಕ್ಕಳು ಸೇರಿ 6 ಜನರಿಗೆ ಗಾಯ appeared first on Samyukta Karnataka.