
ಗುವಾಹಟಿ: ಅಸ್ಸಾಂ ರಾಜ್ಯದ ಕೃಷಿ ಕ್ಷೇತ್ರಕ್ಕೆ ಮಹತ್ವದ ಮೈಲಿಗಲ್ಲಾಗಿ, GI ಟ್ಯಾಗ್ (ಭೌಗೋಳಿಕ ಸೂಚನೆ) ಪಡೆದ Karbi Anglong Ginger ಅನ್ನು ಮೊದಲ ಬಾರಿಗೆ ಲಂಡನ್ಗೆ ರಫ್ತು ಮಾಡಲಾಗಿದೆ. ಗುವಾಹಟಿಯ ಖಾನಪಾರದ ಕೃಷಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಅಸ್ಸಾಂ ಕೃಷಿ ಸಚಿವ ಅತುಲ್ ಬೋರಾ ಅವರು ಮೊದಲ ರಫ್ತು ಸರಕಿಗೆ ಹಸಿರು ನಿಶಾನೆ ತೋರಿದರು.
ಅಸ್ಸಾಂನಿಂದ ಲಂಡನ್ಗೆ ಚೊಚ್ಚಲ ಸಾಗಣೆ: ಆಂಗ್ಲಾಂಗ್ ಜಿಐ ಶುಂಠಿ ಅಸ್ಸಾಂನಿಂದ ಲಂಡನ್ಗೆ ಹೋಗುತ್ತಿರುವುದು ಇದೇ ಮೊದಲು. ಜನವರಿಯಲ್ಲಿ ಆಯೋಜಿಸಿದ ಅಂತರರಾಷ್ಟ್ರೀಯ ಖರೀದಿದಾರ-ಮಾರಾಟಗಾರರ ಸಭೆಯ ಪರಿಣಾಮವಾಗಿ ಈ ರಫ್ತು ಸಾಧ್ಯವಾಗಿದೆ ಎಂದು APEDA ಯ ಜನರಲ್ ಮ್ಯಾನೇಜರ್ ವಿನೀತಾ ಸುಧಾಂಶು ತಿಳಿಸಿದರು, “ಕರ್ಬಿ ಎಂದು ತಿಳಿಸಿದರು. ಅಂದಿನ ಸಭೆಯಲ್ಲಿ ಭಾಗವಹಿಸಿದ್ದ ವಿದೇಶಿ ಖರೀದಿದಾರರು ಅಸ್ಸಾಂ ಉತ್ಪನ್ನಗಳ ಗುಣಮಟ್ಟ ಮೆಚ್ಚಿ ಖರೀದಿಗೆ ಆಸಕ್ತಿ ತೋರಿದ್ದರು.
ಇದನ್ನೂ ಓದಿ: ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಿಸಲು ಸರ್ಕಾರ ಬದ್ಧ: ಎಂ.ಬಿ. ಪಾಟೀಲ
1.2 ಮೆಟ್ರಿಕ್ ಟನ್ ಪ್ರಾಯೋಗಿಕ ಸಾಗಣೆ: ಪ್ರಸ್ತುತ 1.2 ಮೆಟ್ರಿಕ್ ಟನ್ ಪ್ರಮಾಣದ ಪ್ರಾಯೋಗಿಕ ಸಾಗಣೆ ಲಂಡನ್ಗೆ ಕಳುಹಿಸಲಾಗಿದೆ. ಈ ಸಾಗಣೆಗೆ ಉತ್ತಮ ಪ್ರತಿಕ್ರಿಯೆ ದೊರೆತರೆ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡುವ ಯೋಜನೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈತರಿಗೆ ಹೊಸ ಅವಕಾಶ: ಕರ್ಬಿ ಆಂಗ್ಲಾಂಗ್ ಪ್ರದೇಶದಲ್ಲಿ ಬೆಳೆದ ಈ ಶುಂಠಿ ತನ್ನ ವಿಶೇಷ ಸುವಾಸನೆ ಮತ್ತು ಗುಣಮಟ್ಟದಿಂದಲೇ ಜಿಐ ಟ್ಯಾಗ್ ಪಡೆದಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಗೆ ಪ್ರವೇಶಿಸುವ ಮೂಲಕ ಸ್ಥಳೀಯ ರೈತರಿಗೆ ಉತ್ತಮ ಬೆಲೆ ಮತ್ತು ಆದಾಯ ಸಾಧ್ಯವಾಗಲಿದೆ.
ಇದನ್ನೂ ಓದಿ: ಇರಾನ್ ಮೇಲೆ ಅಮೆರಿಕ–ಇಸ್ರೇಲ್ ಭಾರೀ ದಾಳಿ: ಐಆರ್ಜಿಸಿ ಪ್ರಧಾನ ಕಚೇರಿ ಧ್ವಂಸ, 9 ನೌಕಾ ಹಡಗುಗಳ ನಾಶ
ಕರ್ಬಿ ಆಂಗ್ಲಾಂಗ್ ಜಿಐ ಶುಂಠಿ ಮಾಹಿತಿ: Karbi Anglong Ginger ಅಸ್ಸಾಂ ರಾಜ್ಯದ ಕರ್ಬಿ ಆಂಗ್ಲಾಂಗ್ ಪ್ರದೇಶದಲ್ಲಿ ಬೆಳೆಯುವ ವಿಶಿಷ್ಟ ಗುಣಮಟ್ಟದ ಶುಂಠಿಯಾಗಿದೆ. ಇದರ ವಿಶೇಷ ಸುವಾಸನೆ, ತೀಕ್ಷ್ಣ ರುಚಿ ಹಾಗೂ ಹೆಚ್ಚಿನ ತೈಲಾಂಶದಿಂದ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇದೆ.
ಜಿಐ (Geographical Indication) ಟ್ಯಾಗ್ ಎಂದರೇನು?: ಜಿಐ ಟ್ಯಾಗ್ ಎಂದರೆ ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿ ಉತ್ಪಾದನೆಯಾಗುವ, ಆ ಪ್ರದೇಶದ ವೈಶಿಷ್ಟ್ಯದಿಂದಲೇ ಗುಣಮಟ್ಟ ಹೊಂದಿರುವ ಉತ್ಪನ್ನಕ್ಕೆ ನೀಡುವ ಗುರುತನ್ನು ಭಾರತ ಸರ್ಕಾರದಿಂದ 2015 ರಲ್ಲಿ GI ಮಾನ್ಯತೆಯನ್ನು ನೀಡಿದೆ. ಕರ್ಬಿ ಆಂಗ್ಲಾಂಗ್ ಶುಂಠಿಗೆ ಜಿಐ ಮಾನ್ಯತೆ ದೊರಕಿರುವುದರಿಂದ ನಕಲಿ ಉತ್ಪನ್ನಗಳಿಂದ ರಕ್ಷಣೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿಶ್ವಾಸಾರ್ಹತೆ ಹಾಗೂ ರೈತರಿಗೆ ಉತ್ತಮ ಬೆಲೆ ಸಿಗಲಿದೆ.