Home ಕೃಷಿ/ವಾಣಿಜ್ಯ ಬಿಎಸ್‌ಎನ್ಎಲ್‌ ಈ ಪ್ಲಾನ್‌ ನೋಡಿ, ₹1ಕ್ಕೆ ಭಾರೀ ಕೊಡುಗೆ

ಬಿಎಸ್‌ಎನ್ಎಲ್‌ ಈ ಪ್ಲಾನ್‌ ನೋಡಿ, ₹1ಕ್ಕೆ ಭಾರೀ ಕೊಡುಗೆ

0

ಬೆಂಗಳೂರು: ಬಿಎಸ್‌ಎನ್‌ಎಲ್ ಸೀಮಿತ ಅವಧಿಯ ₹1ಕ್ಕೆ ವಿಶೇಷ ಕೊಡುಗೆಯುಳ್ಳ ಹೊಸ ಪ್ಲಾನ್ ಘೋಷಣೆ ಮಾಡಿದೆ. ಆಗಸ್ಟ್ ತಿಂಗಳಿಗಾಗಿಯೇ ಮಾಡಿದ ‘ಫ್ರೀಡಂ ಪ್ಲಾನ್’ ಇದಾಗಿದ್ದು, ಗ್ರಾಹಕರಿಗೆ ಬಂಪರ್ ಗಿಫ್ಟ್ ಆಗಿದೆ.

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ನ ಬಹು ನಿರೀಕ್ಷಿತ ‘ಫ್ರೀಡಂ ಪ್ಲಾನ್’ ಅತ್ಯಂತ ಜನಪ್ರಿಯವಾಗುತ್ತಿದೆ. ಈ ಪ್ಲಾನ್‌ ಬಗ್ಗೆ ಈಗ ಚರ್ಚೆಗಳು ನಡೆಯುತ್ತಿವೆ. ಇದು ಸೀಮಿತ ಅವಧಿಯ ₹1 ಕೊಡುಗೆಯಾಗಿದ್ದು, ಬಳಕೆದಾರರಿಗೆ 4G ಮೊಬೈಲ್ ಸೇವೆಗಳನ್ನು ಒಂದು ತಿಂಗಳು ಪೂರ್ಣವಾಗಿ ನೀಡುತ್ತದೆ.

ಬಿಎಸ್‌ಎನ್‌ಎಲ್ ಸ್ವಾತಂತ್ರ್ಯ ದಿನಾಚರಣೆ-2025ರ ಅಂಗವಾಗಿ ಈ ಕೊಡುಗೆಯನ್ನು ಪರಿಚಯಿಸಿದೆ. 2 ಜಿಬಿ ಹೈಸ್ಪೀಡ್ ಡೇಟಾ, 100 ಎಸ್‌ಎಂಎಸ್ ಸೇರಿದಂತೆ ಹಲವು ಪ್ಲಾನ್ ಅನ್ನು ಇದು ಒಳಗೊಂಡಿದೆ.

ಯೋಜನೆಯ ವಿಶೇಷತೆಗಳು: ‘ಫ್ರೀಡಂ ಪ್ಲಾನ್’ ಅನಿಯಮಿತ ಧ್ವನಿ ಕರೆಗಳು (ಸ್ಥಳೀಯ/ಎಸ್‌ಟಿಡಿ), ದಿನಕ್ಕೆ 2 ಜಿಬಿ ಹೈ-ಸ್ಪೀಡ್ ಡೇಟಾ, ದಿನಕ್ಕೆ 100 ಎಸ್‌ಎಂಎಸ್ ಹೊಂದಿದ್ದು, ಬಿಎಸ್‌ಎನ್‌ಎಲ್ ಸಿಮ್ ಉಚಿತವಾಗಿ ಪಡೆಯಬಹುದು.

ಪ್ರಧಾನಿ ನರೇಂದ್ರ ಮೋದಿ ಕನಸಿನ ‘ಆತ್ಮನಿರ್ಭರ ಭಾರತ್’ ಮಿಷನ್ ಅಡಿಯಲ್ಲಿ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದ ಯೋಜನೆ ಇದಾಗಿದೆ. ಬಿಎಸ್‌ಎನ್‌ಎಲ್‌ 4ಜಿಯೊಂದಿಗೆ ತಮ್ಮದೇ ಆದ ಟೆಲಿಕಾಂ ಸ್ಟ್ಯಾಕ್ ಅನ್ನು ನಿರ್ಮಿಸಿರುವ ಆಯ್ದ ರಾಷ್ಟ್ರಗಳ ಗುಂಪಿನಲ್ಲಿ ಭಾರತವನ್ನು ಸೇರಿಸಲಾಗಿದೆ.

‘ಫ್ರೀಡಂ ಪ್ಲಾನ್’ಪ್ರತಿಯೊಬ್ಬ ಭಾರತೀಯರಿಗೂ ಈ ಸ್ಥಳೀಯ ನೆಟ್‌ವರ್ಕ್ ಅನ್ನು 30 ದಿನಗಳವರೆಗೆ ಉಚಿತವಾಗಿ ಅನುಭವಿಸಲು ಅವಕಾಶವನ್ನು ನೀಡುತ್ತದೆ ಮತ್ತು ಅವರು ಖಾಸಗಿ ಕಂಪನಿ ಮತ್ತು ಬಿಎಸ್‌ಎನ್‌ಎಲ್ ನಡುವಿನ ವ್ಯತ್ಯಾಸವನ್ನು ತಿಳಿಯಲು ಅವಕಾಶವಿದೆ.

ಉತ್ತಮ ಗುಣಮಟ್ಟ ಮತ್ತು ಕೈಗೆಟುಕುವ ಮೊಬೈಲ್ ಸಂಪರ್ಕದೊಂದಿಗೆ ಡಿಜಿಟಲ್ ಇಂಡಿಯಾವನ್ನು ಸಬಲೀಕರಣಗೊಳಿಸಲು ಇದು ಒಂದು ಪ್ರಮುಖ ಮೈಲಿಗಲ್ಲು. ಜನರು ಹತ್ತಿರದ ಬಿಎಸ್‌ಎನ್‌ಎಲ್ ಗ್ರಾಹಕ ಸೇವಾ ಕೇಂದ್ರ, ಚಿಲ್ಲರೆ ವ್ಯಾಪಾರ ಮಳಿಗೆಗೆ ಭೇಟಿ ನೀಡುವ ಮೂಲಕ ಅಥವಾ ಟೋಲ್-ಫ್ರೀ ಸಂಖ್ಯೆ 1800-180-1503ಗೆ ಕರೆ ಮಾಡಿ ಫ್ರೀಡಂ ಯೋಜನೆ ಪಡೆಯಬಹುದು.

ಬಿಎಸ್ಎನ್ಎಲ್, ಮೇಕ್-ಇನ್-ಇಂಡಿಯಾ ತಂತ್ರಜ್ಞಾನ ಬಳಕೆ ಮಾಡಿಕೊಂಡು ದೇಶಾದ್ಯಂತ 100,000 4G ಸೈಟ್‌ಗಳನ್ನು ಹೊರತರುತ್ತಿದೆ. ಇದು ಡಿಜಿಟಲ್ ಇಂಡಿಯಾ ಸಬಲೀಕರಣದ ಭಾಗವಾಗಿದೆ.

ಕೇಂದ್ರ ಸರ್ಕಾರ ಬಿಎಸ್‌ಎನ್‌ಎಲ್‌ ಪುನರ್ ಅಭವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಿದೆ. ಇದರ ಭಾಗವಾಗಿಯೇ 2024ರ ಅಂತ್ಯದಲ್ಲಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಹೊಸ ಲಾಂಛನ ಅನಾವರಣಗೊಳಿಸಲಾಗಿದೆ.

ಈಗ ಮೊಬೈಲ್ ಸೇವೆ ದೇಶದ ಮೂಲೆಗೂ ಸುರಕ್ಷಿತ , ಕೈಗೆಟುಕುವ ಮತ್ತು ವಿಶ್ವಾಸಾರ್ಹ ಸಂಪರ್ಕವನ್ನು ತಲುಪಿಸುವತ್ತ ಬಿಎಸ್‌ಎನ್‌ಎಲ್‌ ಗಮನಹರಿಸಿದೆ. ಅಲ್ಲದೇ 7 ಸ್ಥಳೀಯ ಸೇವೆಗಳನ್ನು ಪ್ರಾರಂಭಿಸಿರುವ ಭಾರತದ ಏಕೈಕ ಟೆಲಿಕಾಂ ಸೇವಾ ಪೂರೈಕೆದಾರ ಬಿಎಸ್‌ಎನ್‌ಎಲ್‌ ಆಗಿದೆ.

ಬಿಎಸ್‌ಎನ್‌ಎಲ್ ಸ್ಪ್ಯಾಮ್ ತಡೆಗಟ್ಟುವ ಪರಿಹಾರವಾಗಿ ಫಿಶಿಂಗ್ ಪ್ರಯತ್ನ ಮತ್ತು ದುರುದ್ದೇಶಪೂರಿತ ಎಸ್‌ಎಂಎಸ್‌ಗಳನ್ನು ಸ್ವಯಂಚಾಲಿತವಾಗಿ ಫಿಲ್ಟರ್ ಮಾಡುತ್ತಿದೆ. ಗ್ರಾಹಕರಿಗೆ ಎಚ್ಚರಿಕೆಗಳನ್ನು ನೀಡುವ ಅಗತ್ಯವಿಲ್ಲದೆ ಬಳಕೆದಾರರಿಗೆ ಸುರಕ್ಷಿತ ಸಂವಹನ ವಾತಾವರಣವನ್ನು ಇದು ನೀಡುತ್ತದೆ.

NO COMMENTS

LEAVE A REPLY

Please enter your comment!
Please enter your name here

Exit mobile version