Home News ಮೊಹರಂ ಆಚರಣೆ: ನೋಡುಗರ ಗಮನ ಸಳೆದ ಹುಲಿ ವೇಷಧಾರಿಗಳ ಕುಣಿತ

ಮೊಹರಂ ಆಚರಣೆ: ನೋಡುಗರ ಗಮನ ಸಳೆದ ಹುಲಿ ವೇಷಧಾರಿಗಳ ಕುಣಿತ

ಆರ್ ಎಸ್ ಹಿರೇಮಠ
ಬಾಗಲಕೋಟೆ (ಕುಳಗೇರಿ ಕ್ರಾಸ್) : ಹಿಂದೂ ಮುಸ್ಲಿಂ ಒಗ್ಗಟ್ಟಾಗಿ ಆಚರಿಸುವ ಮೊಹರಂ ಹಬ್ಬ ಧಾರ್ಮಿಕ ಹಿನ್ನೆಲೆ ಹೊಂದಿದೆ. ನಾಲ್ಕೈದು ದಿನ ಆಚರಿಸುವ ಈ ಹಬ್ಬ ಪ್ರಾರಂಭವಾಗಿದ್ದು ಗ್ರಾಮದಲ್ಲಿ ಹುಲಿ ವೇಷಧಾರಿಗಳು, ಕೊಳ್ಳೊಳ್ಳಿ ಬವ್ವ ಹೀಗೆ ಹಲವಾರು ವೇಷ ಧರಿಸಿ ಗ್ರಾಮದ ವಿವಿಧ ಅಂಗಡಿಗಳಿಗೆ ಹೋಗಿ ಭಿಕ್ಷೆ ಬೇಡುವ ಪದ್ದತಿ ಹಿಂದಿನಿಂದಲೂ ಬಂದಿದೆ.

ಮೈತುಂಬಾ ಬಣ್ಣ ಬಳಿದುಕೊಂಡು ನವಿಲು ಗರಿ ಸೇರಿದಂತೆ ವಿವಿಧ ವಸ್ತುಗಳಿಂದ ಅಲಂಕಾರ ಮಾಡಿಕೊಂಡು ಬೀದಿಗಳಲ್ಲಿ ವಾಧ್ಯಕ್ಕೆ ತಕ್ಕಂತೆ ಕುಣಿಯುತ್ತ ಸಂಭ್ರಮಿಸಿದರು. ದೇವರಿಗೆ ಹರಕೆ ಹೊತ್ತವರು ತಮ್ಮ ಮಕ್ಕಳನ್ನ ಫಕೀರರನ್ನಾಗಿ ಮಾಡುವ ಸಾಂಪ್ರದಾಯ ಪೂರ್ವಜರಿಂದಲೂ ಆಚರಿಸಿಕೊಂಡು ಬಂದಿದ್ದಾರೆ.

ಈ ಮೊಹರಂ ಹಬ್ಬ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಹಿಂದೂಗಳೇ ಆಚರಿಸುತ್ತಾರೆ. ಚೊಂಗೆ, ಮಾದ್ಲಿ ಈ ಹಬ್ಬದ ವಿಶೇಷ ಸಿಹಿ ಖಾದ್ಯಗಳು. ಎಲ್ಲ ಗ್ರಾಮಗಳಲ್ಲಿ ಕೆಂಡದ ಕಿಚ್ಚು ತಯಾರಿಸಿ ದೇವರ ಹೊತ್ತು ಅಗ್ಗಿ ಹಾಯುತ್ತ ರಾಜಕೀಯ ಸೇರಿದಂತೆ ಮಳೆ-ಬೆಳೆ ಹೀಗೆ ಮುಂದಿನ ಭವಿಷ್ಯ ನುಡಿಯುತ್ತಾರೆ. ಸಕ್ಕರೆ ವುದೀಸಿ ನೈವೇದ್ಯ ಸಮರ್ಪಿಸುತ್ತಾರೆ.

Exit mobile version