Home News ಜಿಂದಾಲ್ ಏರ್ ಪೋರ್ಟ್‌ಗೆ ಬಂದಿಳಿದ‌ ಕೈ‌ಪಡೆ

ಜಿಂದಾಲ್ ಏರ್ ಪೋರ್ಟ್‌ಗೆ ಬಂದಿಳಿದ‌ ಕೈ‌ಪಡೆ

ಹೊಸಪೇಟೆ: ವಿಜಯನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡ ಸಮರ್ಪಣ ಸಂಕಲ್ಪ ಸಮಾವೇಸ ಹಿನ್ನೆಲೆಯಲ್ಲಿ ಕೈ ನಾಯಕರು ಜಿಂದಾಲ್ ಏರ್ ಪೋಟ್೯ಗೆ ಬಂದಿಳಿದರು.
ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನಾ ಮತ್ತು ಜನತೆಗೆ ಸಮರ್ಪಣಾ ಕಾರ್ಯಕ್ರಮಕ್ಕೆ ಆಗಮಿಸಿದ ಲೋಕಸಭೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ, AICC ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಂದಾಲ್ ವಿಮಾನ‌ ನಿಲ್ದಾಣದಲ್ಲಿ ಬರ ಮಾಡಿಕೊಂಡರು.
ಹೊಸಪೇಟೆ ಹಾಗೂ ಸಂಡೂರುನಲ್ಲಿ ಭಾರಿ ಮಳೆ ಹಿನ್ನಲೆಯಲ್ಲಿ ಜಿಂದಾಲ್ ಏರ್ ಪೋರ್ಟ್ ನಿಂದ ರಸ್ತೆ ಮೂಲಕ ಹೊಸಪೇಟೆಗೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ,ಸಿದ್ದರಾಮಯ್ಯ, ಡಿಕೆಶಿ ಸೇರಿ ರಸ್ತೆ ಮೂಲಕ ಆಗಮಿಸುತ್ತಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.

Exit mobile version