Home News ಕೊನೆ ಉಸಿರಿರುವ ತನಕ ಜನರಿಗಾಗಿ ಹೋರಾಟ

ಕೊನೆ ಉಸಿರಿರುವ ತನಕ ಜನರಿಗಾಗಿ ಹೋರಾಟ

ಚಿಕ್ಕಮಗಳೂರು: ಜಿಲ್ಲಾಡಳಿತದ ಮುಂದೆ ಬುಧವಾರ ಶರಣಾಗತಿ ಆಗಲಿರುವ ಪ್ರಮುಖ ನಕ್ಸಲ್ ನಾಯಕಿ ಮುಂಡಗಾರು ಲತಾ ಮಾತನಾಡಿರುವ ವಿಡಿಯೋ ಬಿಡುಗಡೆಯಾಗಿದ್ದು ತಮ್ಮ ಬೇಡಿಕೆ ಸರ್ಕಾರದ ಮುಂದೆ ಒಟ್ಟಿದ್ದಾರೆ.
ಚಿಕ್ಕಮಗಳೂರಿಗೆ ಆಗಮಿಸುವ ಮುನ್ನಾ ಕಾಡಿನಲ್ಲಿ ಎಲ್ಲಾ ಆರು ಜನ ನಕ್ಸಲರು ಸಭೆ ನಡೆಸಿ ನಂತರ ಮಾತನಾಡಿರುವ ಲತಾ, ತಮ್ಮ ಅಭಿಪ್ರಾಯ ಹೇಳಿದ್ದಾರೆ. ಯಾರೆಲ್ಲ ಪ್ರಜಾ ತಾಂತ್ರಿಕ ಸಂವಿಧಾನ ಪರ ಹೋರಾಟ ಬಯಸುತ್ತಿದ್ದಾರೋ ಅದೇ ರೀತಿ ಜನರ ಪರ ಹೋರಾಟ ನಾವು ಮಾಡ್ತೇವೆ ಎಂದಿರುವ ಅವರು ಜನರಪರ ಕೊನೆಯ ಉಸಿರಿರುವ ತನಕ ಜನರಿಗಾಗಿ ಹೋರಾಟ ಮಾಡ್ತೇವೆ ಎಂದಿದ್ದಾರೆ.
ಕರ್ನಾಟಕ, ಕೇರಳ, ತಮಿಳುನಾಡಿನ ಆರು ಜನ ನಕ್ಸಲರು ನಿರ್ಧಾರ ಮಾಡಿ ಚರ್ಚೆ ಮಾಡಿದ್ದೇವೆ. ಅಲ್ಲಿನ ಸ್ಥಿತಿಗಳ ಬಗ್ಗೆ ಸಂಘಟಕರು ಮನವರಿಕೆ ಮಾಡಿಸಿದ್ದಾರೆ ಎನ್ನುವ ಮೂಲಕ ಸರ್ಕಾರದ ಜೊತೆ ಸಂಧಾನಕ್ಕೆ ಯತ್ನಿಸಿದವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಲ್ಲಾ ಸಂಗತಿಗಳನ್ನು ನಾವು ಮುಂದೆ ನಡೆಯುವ ಹೋರಾಟಕ್ಕೆ ಸ್ವಾಗತಿಸುತ್ತೇವೆ
ರಾಜ್ಯ ಸರ್ಕಾರ ನಮ್ಮ ಬೇಡಿಕೆ ಈಡೇರಿಸುತ್ತೇ ಅನ್ನೋ ಭರವಸೆಯೊಂದಿಗೆ ಬರ್ತಿದ್ದೇವೆ ಎಂದಿರುವ ಲತಾ ನಮ್ಮ ಶರಣಾಗತಿ ಪ್ರಕ್ರಿಯೆಗೆ ಎಲ್ಲಾ ಪ್ರಮುಖ ಸಂಘಟಕರೆಲ್ಲರ ಶ್ರಮ ಹಾಕಿದ್ದಾರೆ ಎಂದು ಹೇಳಿದ್ದಾರೆ.

Exit mobile version