Home News ಕಪ್ಪತ್ತಗುಡ್ಡಕ್ಕೆ ಮತ್ತೆ ಬೆಂಕಿ: ನಂದಿಸಲು ಸಿಬ್ಬಂದಿ ಹರಸಾಹಸ

ಕಪ್ಪತ್ತಗುಡ್ಡಕ್ಕೆ ಮತ್ತೆ ಬೆಂಕಿ: ನಂದಿಸಲು ಸಿಬ್ಬಂದಿ ಹರಸಾಹಸ

ಗದಗ(ಮುಂಡರಗಿ): ಉತ್ತರ ಕರ್ನಾಟಕದ ಸಹ್ಯಾದ್ರಿ ಔಷಧಿ ಸಸ್ಯಗಳ ತಾಣ ಕಪ್ಪತ್ತಗುಡ್ಡದ ಅರಣ್ಯ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಶಿಂಗಟಾಲೂರ ಗ್ರಾಮದ ಬಳಿಯ ವಿಜಯನಗರ ಶುಗರ ಪ್ಯಾಕ್ಟರಿ ಸಮೀಪದಲ್ಲಿನ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಅಪಾರ ಪ್ರಮಾಣದ ಬಾಧೆ ಹುಲ್ಲ ಔಷಧಿ ಸಸ್ಯಗಳು ಸುಟ್ಟನಾಶವಾಗಿವೆ.
ಡಂಬಳ ಕಳೆದ ಮಂಗಳವಾರ ಡಂಬಳ ಸಮೀಪದ ಡೋಣ ಹತ್ತಿರದ ಕಪ್ಪತ್ತಗುಡ್ಡದ ವ್ಯಾಪ್ತಿಯ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಕಪ್ಪತ್ತಗುಡ್ಡದ ಅರಣ್ಯ ಪ್ರದೇಶದ ಆಶಾಮೈನ್ಸ ಬಳಿಯಲ್ಲಿ ನೂರಾರು ಹೆಕ್ಟರ್ ಔಷಧಿ ಸಸ್ಯಗಳು ನಾಶವಾಗಿರುವ ಸುದ್ದಿ ಮಾಸುವ ಮುನ್ನವೆ ಮತ್ತೆ ೧೫ ಹೆಕ್ಟರಿಗೂ ಹೆಚ್ಚು ಕಪ್ಪತ್ತಗುಡ್ಡದ ಪ್ರದೇಶ ಬೆಂಕಿ ಆಹುತಿಯಾಗಿದೆ.
ಕತ್ತಲೆಯ ಪ್ರದೇಶದಲ್ಲಿ ಬಹುತೇಕ ಮೊಬೈಲ್ ನೇಟ್ ವರ್ಕ ಬರದ ಪ್ರದೇಶದಲ್ಲಿನ ಬೆಂಕಿ ನಂದಿಸಲು ಹಸಿತಪ್ಪಲದಿಂದ ಇಲಾಖೆಯ ಸಿಬ್ಬಂದಿ ಬೆಂಕಿ ನಂದಿಸಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ವೇಗವಾದ ಗಾಳಿಗೆ ಬೆಂಕಿಯ ಜ್ವಾಲ ಮತ್ತಷ್ಟು ವ್ಯಾಪಿಸುತ್ತಿದೆ ಎನ್ನಲಾಗುತ್ತಿದೆ. ಈ ಕುರಿತು ಪ್ರತಿಕ್ರೀಯೆ ನೀಡಿದ ಮುಂಡರಗಿ ವಲಯ ಅರಣ್ಯಾಧಿಕಾರಿ ಮಂಜುನಾಥ ಮ್ಯಾಗಳಮನಿ ವೇಗವಾಗಿ ಗಾಳಿಬೀಸುವಾಗ ಬೆಂಕಿ ನಿಯಂತ್ರಣ ಮಾಡುವುದು ತುಂಬಾ ಕಠಿಣ. ಆದ್ರೂ ಕಗ್ಗತ್ತಲೆಯ ಪ್ರದೇಶದಲ್ಲಿ ಸುಮಾರು ೨೩ಕ್ಕೂ ಹೆಚ್ಚಿನ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದೇವೆ. ಯಾವ ಕಾರಣಕ್ಕೆ ಬೆಂಕಿ ಬಿದ್ದಿದೆ ಎನ್ನುವ ಮಾಹಿತಿ ಇಲ್ಲ. ಆದ್ರೆ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದೇವೆ.ಸಾರ್ವಜನಿಕರು ಸಹಕಾರ ಮಾಡಬೇಕು.ದಯವಿಟ್ಟು ಯಾವುದೆ ಕಾರಣಕ್ಕೂ ಕಪ್ಪತ್ತಗುಡ್ಡಕ್ಕೆ ಬೆಂಕಿ ಹಚ್ಚಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡುತ್ತಾರೆ

Exit mobile version