Home News ಐಪಿಎಲ್ ವಿಜಯೋತ್ಸವ ಕಾಲ್ತುಳಿತದಲ್ಲಿ ಮೃತಪಟ್ಟ ಶಿವಲಿಂಗನ ಮನೆಗೆ ಛಲುವಾದಿ ಭೇಟಿ

ಐಪಿಎಲ್ ವಿಜಯೋತ್ಸವ ಕಾಲ್ತುಳಿತದಲ್ಲಿ ಮೃತಪಟ್ಟ ಶಿವಲಿಂಗನ ಮನೆಗೆ ಛಲುವಾದಿ ಭೇಟಿ

ಯಾದಗಿರಿ: ವಿಧಾನ ಪರಿಷತ್ತಿನ‌ ಪ್ರತಿ ಪಕ್ಷದ ನಾಯಕ ಛಲವಾದಿ ನಾರಾಯಾಣ ಸ್ವಾಮಿ ಅವರು ಗುರುವಾರ ತಾಲೂಕಿನ ಹೊನಗೇರಾ ಗ್ರಾಮದ ಮೃತ ಶಿವಲಿಂಗ ಕುಂಬಾರ ಮನೆಗೆ ಭೇಟಿ ನೀಡಿ,ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಬೆಂಗಳೂರಿನಲ್ಲಿ ಇತ್ತೀಚಿಗೆ ಕಾಲ್ತುಳಿತದಲ್ಲಿ ಶಿವಲಿಂಗ ಮೃತಪಟ್ಟುದ್ದ.ಈ ಹಿನ್ನಲೆಯಲ್ಲಿ ಛಲವಾದಿ ಅವರು, ಜಿಲ್ಲೆಯ ಬಿಜೆಪಿ ಮುಖಂಡರೊಂದಿಗೆ ಭೇಟಿ ಮಾಡಿ ಘಟನೆ ನಡೆದದಕ್ಕೆ ವಿಷಾಧ ವ್ಯಕ್ತಪಡಿಸಿದರು.
ಈ ವೇಳೆ ಗ್ರಾಮಸ್ತರು ಮಾತನಾಡಿ, ಮೃತ ಶಿವಲಿಂಗನ ಕುಟುಂಬ ಬಡತನದಲ್ಲಿ ಇದೆ. ಕೂಲಿ ಮಾಡಲು ಬೆಂಗಳೂರಿಗೆ ಹೋಗಿ ಅಲ್ಲಿಯೇ ನೆಲೆಸಿದ್ದರು. ಈ ಕುಟುಂಬಕ್ಕೆ ಸರ್ಕಾರ ಭೂಮಿ ಕೊಡಬೇಕು. ಪಂಚಾಯಿತಿಯಿಂದ ಮನೆ ನೀಡಬೇಕು, ಇರುವ ಇನ್ನೊಬ್ಬ ಮಗನಿಗೆ ನೌಕರಿ ಕೊಡಿಸಬೇಕೆಂದು ಮನವಿ ಮಾಡಿದರು. ಮುಖ್ಯವಾಗಿ ಊರಲ್ಲಿ ಸ್ಮಶಾನದ ಭೂಮಿ ಇಲ್ಲಾ. ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹಾಕಬೇಕೆಂದು ಹೇಳಿದರು.
ಸ್ಥಳದಲ್ಲೇ ಜಿಲ್ಲಾಧಿಕಾರಿ ಡಾ.ಸುಶೀಲಾ ಅವರಿಗೆ ದೂರವಾಣಿ ಮೂಲಕ ಮಾತನಾಡಿ, ಹೊನಗೇರ ಗ್ರಾಮಸ್ಥರ ಮತ್ತು ಕಾಲ್ತುಳಿತದಲ್ಲಿ ಮೃತ ಯುವಕನ ಕುಟುಂಬದ ಬೇಡಿಕೆಗಳನ್ನು ಪ್ರಸ್ತಾಪಿಸಿ ಸೂಕ್ತ ಕ್ರಮಕ್ಕೆ ಸೂಚಿಸಿದರು.
ಈಎಸ್ಅಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ,ಯುವ ಮುಖಂಡ ಮಹೇಶರಡ್ಡಿ ಮುದ್ನಾಳ, ಪರಶುರಾಮ ಕುರಕುಂದಾ,ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಹೊನಿಗೇರಿ,ಜಿಲ್ಲಾ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಧರ ಆರ್ ಸಾಹುಕಾರ,ವಿಲಾಸ ಪಾಟೀಲ್,ಗುರುಮಿಟ್ಕಲ್ ಮಂಡಲ ಅಧ್ಯಕ್ಷ ನರಸಿಂಹಲು ನಿರೇಟಿ,ಗುರು ಪೊಲೀಸ್ ಪಾಟೀಲ,ಶರಣಪ್ಪ ಮೋಟನಳ್ಳೀ,
ಮೋನೆಶ ಬೆಳಿಗೇರ,ಚಂದುಲಾಲ್ ಚೌದರಿ, ನಾಗಪ್ಪ ಭೋವಿ, ವೆಂಕಟೇಶ್ ಗೋಸಿ, ಶಿವಕುಮಾರ್ ಕೋಟಿಗೆರಿ, ಸಾಬಣ್ಣ ಗೋಡೆಬಲುರ,ಪಕ್ಷದ ಪ್ರಮುಖರು,ಪಕ್ಷದ ಪ್ರಮುಖರು,ಜಿಲ್ಲಾ ಪದಾಧಿಕಾರಿಗಳು ಸೇರಿದಂತೆ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Exit mobile version