Home News ಅಪರಿಚಿತ ವಾಹನ ಡಿಕ್ಕಿ:  ಕೆಕೆಆರ್ ಟಿಸಿ ಬಸ್ ಚಾಲಕ ಸ್ಥಳದಲ್ಲೇ ಸಾವು

ಅಪರಿಚಿತ ವಾಹನ ಡಿಕ್ಕಿ:  ಕೆಕೆಆರ್ ಟಿಸಿ ಬಸ್ ಚಾಲಕ ಸ್ಥಳದಲ್ಲೇ ಸಾವು

ಹುಮ್ನಾಬಾದ್(ಬೀದರ್): ಅಪರಿಚಿತ ವಾಹನ ಡಿಕ್ಕಿ ಹೊಡೆದು  ಪಾದಚಾರಿ ಕೆ.ಕೆ.ಆರ್.ಟಿ.ಸಿ ಬಸ್ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಪಟ್ಟಣದ ರೈಲ್ವೆ ಸೇತುವೆ ಬಳಿ ಸೋಮವಾರ ಬೆಳಿಗ್ಗೆ 6ಗಂಟೆ ಸುಮಾರಿಗೆ ಸಂಭವಿಸಿದೆ.
ಮೃತ ದುರ್ದೈವಿಯನ್ನು ಕೆ.ಕೆ.ಆರ್.ಟಿ.ಸಿ ಬಸ್ ಚಾಲಕ ತಾಲ್ಲೂಕಿನ ಹಿಪ್ಪರಗಿ ಗ್ರಾಮದ ನಿವಾಸಿ ಗಜಾನಂದ ಶರಣಪ್ಪ ನಾಂದೇಡ್ಕರ್(35) ಎಂದು ಗುರುತಿಸಲಾಗಿದೆ. ಸದ್ಯ ಪಟ್ಟಣದ ಶಿಕ್ಷಕರ ಕಾಲೋನಿಯಲ್ಲಿ ನೆಲೆಸಿರುವ ಅವರು ಬೆಳಿಗ್ಗೆ ವಾಯು ವಿವಾರಕ್ಕೆ ಬಂದಾಗ ಈ ಅವಘಡ ಸಂಭವಿಸಿದ್ದಾಗಿ ತಿಳಿದುಬಂದಿದೆ. ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿರುವ ಸಂಚಾರ ಠಾಣೆ ಪಿಎಸ್ಐ ಬಸವಲಿಂಗಪ್ಪ ಗೋಡಿಹಾಳ್ ಘಟನೆ ಕುರಿತಂತೆ ಹುಮ್ನಾಬಾದ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Exit mobile version