Home ತಾಜಾ ಸುದ್ದಿ ಬೀಡಾಡಿ ಬೆಕ್ಕಿಗೊಂದು ಮನೆ..: ಸೆಲೆಬ್ರಿಟಿಯಾದ ಬೆಕ್ಕು

ಬೀಡಾಡಿ ಬೆಕ್ಕಿಗೊಂದು ಮನೆ..: ಸೆಲೆಬ್ರಿಟಿಯಾದ ಬೆಕ್ಕು

ಸಂ. ಕ. ಸಮಾಚಾರ, ಮಂಗಳೂರು: ಊರೂರು ಸುತ್ತಾಡುತ್ತಿದ್ದ ಬೀಡಾಡಿ ಬೆಕ್ಕೊಂದು ಅಚಾನಕ್ ಆಗಿ ಮಂಗಳೂರಿನ ಪಾಂಡೇಶ್ವರದ ಫೋರಂ ಮಾಲ್‌ಗೆ ಸಂದರ್ಶಕರ ಜತೆ ಎಂಟ್ರಿ ಕೊಟ್ಟು, ಸದ್ಯ ಅಲ್ಲೇ ವಾಸಿಸುತ್ತಿದ್ದು, ಸಂದರ್ಶಕರ ಪಾಲಿಗೆ ಸೆಲೆಬ್ರಿಟಿಯಾಗಿದೆ. ಸದ್ಯ ಈ ಬೆಕ್ಕಿಗೆ ಮಿಂಚು ಎಂದು ಹೆಸರಿಡಲಾಗಿದ್ದು, ಸದ್ಯ ಈ ಬೆಕ್ಕಿನ ವಾಸಕ್ಕೆ ಮಾಲ್ ಎದುರಲ್ಲೇ ಕ್ಯಾಟ್ ಹೌಸ್ ನಿರ್ಮಿಸಲಾಗಿದೆ.
ಫೋರಂ ಮಾಲ್‌ನ ಆಸುಪಾಸಿನಲ್ಲಿ ಕಳೆದ ಎರಡು ವರ್ಷಗಳಿಂದ ಅಡ್ಡಾಡುತ್ತಿರುವ ಈ ಬೆಕ್ಕು ಮುದ್ದು ಮುದ್ದಾಗಿದೆ. ಒಂದೇ ನೋಟಕ್ಕೆ ಸೆಳೆಯುವ ಅದರ ಕಣ್ಣುಗಳು, ತಳುಕು-ಬಳುಕಿನ ನಡಿಗೆಯಿಂದ ಮಾಲ್‌ಗೆ ಭೇಟಿ ನೀಡುವವರನ್ನು ಆಕರ್ಷಿಸುತ್ತಿದೆ. ಮಾಲ್ ಗೆ ಭೇಟಿ ನೀಡುವ ಕೆಲವರು ಒಂದು ಕ್ಷಣ ಬೆಕ್ಕಿನತ್ತ ಆಗಮಿಸಿ ಫೋಟೋ, ಸೆಲ್ಪಿ ತೆಗೆದು ಸಂಭ್ರಮಿಸುತ್ತಾರೆ. ಇದರ ಚಲನವಲನ ಕಂಡ ಮಾಲ್ ಸಿಬ್ಬಂದಿ ’ಮಿಂಚು’ ಎಂದು ಹೆಸರಿಟ್ಟಿದ್ದಾರೆ. ಒಂದೂವರೆ ತಿಂಗಳ ಹಿಂದೆ ಬೆಕ್ಕಿಗಾಗಿ ಸಿಬ್ಬಂದಿ ಕ್ಯಾಟ್ ಹೌಸ್ ನಿರ್ಮಿಸಿದ್ದಾರೆ..

Exit mobile version