ತಾರಾತಿಗಡಿ: ನೇನೋ ಸಮಸ್ಯೆಗಳು ಬರುತ್ತಿವೆ…ಎಲ್ಲಿ ನೋಡಿದರಲ್ಲಿ ಎಂಥೆಂಥದ್ದೋ ಆಗುತ್ತಿದೆ. ಎ ನನ್ನ ಅನ್ನುವುದು ಜಂಗುಹತ್ತಿದೆ ಹಲ್ಲೆ ಆದರಿಗೆ ನನ್ನಕಡೆ ತಲೆ ತಡೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ನಾನು ಮದ್ರಾಮಣ್ಣೂರಿಗೆ ಬಹಿರಂಗ ಪತ್ರ ಬರೆದು ಬಂದಿರುವ ಎಲ್ಲ ಸಮಸ್ಯೆ ಪರಿಹರಿಸಿ ಎಂದು ಲೊಂಡೆನುಮ ಕರಿಭಾಗೀರತಿ ಮುಂದೆ ಹೇಳಿದ್ದ.
ಕರಿಭಾಗೀರತಿ ಹೊಟ್ಲ ಶೇಷಮ್ಮನ ಮುಂದೆ ಹೇಳಿದಳು….ಹೌದಾ..ನನಗೂ ಮೂರು ತಿಂಗಳಿಂದ ಹಣ ಬಂದಿಲ್ಲ.. ಅದನ್ನ ಲಿಸ್ಟ್ ನಲ್ಲಿ ಸೇರಿಸು ಅಂತ ಹೇಳಬೇಕು ಅಂತ ಅಂದುಕೊಂಡು ಲೊಂಡೆನುಮನನ್ನು ಕಂಡು ಇದು ಲಿಸ್ಟ್ ಗೆ ಹಾಕು ಅಂದಳು. ಮುಂಜಾನೆದ್ದು ಹೊಟ್ಲಿಗೆ ಬರುವವರ ಸಮಸ್ಯೆ ಕೇಳುತ್ತಿದ್ದಳು.
ಅವರು ಹೇಳಿದ ಕೂಡಲೇ ಲೊಂಡೆನುಮ ಮದ್ರಾಮಣ್ಣರಿಗೆ ಬಹಿರಂಗ ಪತ್ರ ಬರೀತಿದಾರೆ. ನೀವು ನಿಮ್ಮ ಸಮಸ್ಯೆಗಳನ್ನು ಲೊಂಡೆನುಮನಿಗೆ ತಿಳಿಸಿ ಲಿಸ್ಟಲ್ಲಿ ಸೇರಿಸಿ ಅನ್ನಿ ಅವರು ಪತ್ರದಲ್ಲಿ ಸೇರಿಸಿದರೆ ನಿಮ್ಮ ಸಮಸ್ಯೆ ಪರಿಹರಿಸುತ್ತಾರೆ ಎಂದು ಹೇಳಿದಳು.
ಮರುದಿನದಿಂದ ಲೊಂಡೆನುಮನ ಮನೆ ಮುಂದೆ ಜನಜಾತ್ರೆ, ಲೊಂಡನುಮಾ ಅನ್ನುವವರು ಅನ್ಮಂತಣ್ಣ ಅನ್ನತೊಡಗಿದರು. ಬಂದ ಎಲ್ಲರಿಗೂ ಹೂಂ ಅನ್ನುತ್ತಿದ್ದ ಲೂಂಡನುಮ ಅಯ್ಯ ಆ ಪತ್ರದಲ್ಲಿ ಎಷ್ಟೋ ಅಂತ ಬರೀಲ ಜಾಗ ಇರಂಗಿಲ್ಲ, ಪೋಸ್ಟ್ ಮಾಡೋದಕ್ಕೆ ಸ್ಟಾಂಪ್‌ಗೆ ದುಡ್ಡು ಬೇಕಲ್ಲ ಅಂದ..
ಅಯ್ಯೋ ಅಂದ ಜನರು ಮುದಿ ಗೋವಿಂದಪ್ಪನ ಅಂಗಡಿಯಲ್ಲಿ ಬಿಳಿಹಾಳೆ ಪೆನ್ನು ಒಯ್ಯ ತೊಡಗಿದರು. ಕೆಲವರು ಎರಡು ಬಾಳೆ ಹಣ್ಣು.. ಎಲೆ ಅಡಿಕೆ… ಊದಬತ್ತಿ ಕಟ್ಟು..ಹತ್ತು ರೂಪಾಯಿ ದಕ್ಷಿಣೆ ಇಟ್ಟು ತಮ್ಮ ಸಮಸ್ಯೆ ಲಿಸ್ಟ್ ನಲ್ಲಿ ಹಾಕಿ ಎಂದು ಹೇಳತೊಡಗಿದರು…ಬೇರೆ ಊರಿನವರೂ ಬಂದು ಹಾಳೆ, ಪೆನ್ನು ದಕ್ಷಿಣಿ ಕೊಡತೊಡಗಿದರು.
ದಿನಾಲೂ ಸಾವಿರಾರು ರೂ ದಕ್ಷಿಣೆ ಬರತೊಡಗಿತು. ಜನರು ಬರೆದುಕೊಟ್ಟ ಲಿಸ್ಟ್ ಗಳ ಹಾಳೆಗಳು ಮನೆ ತುಂಬಿ ಹೋಗಿತ್ತು. ಕಂತಿನ ಮೇಲೆ ಪತ್ರ ಬರೆಯುವುದು ಎಂದು ಲೊಂಡೆನುಮ ನಿರ್ಧರಿಸಿದ. ನೋಡ ನೋಡುತ್ತಿದ್ದಂತೆ ಲೊಂಡೆನುಮನ ಬಹಿರಂಗ ಪತ್ರದ ಸುದ್ದಿ ಇಡೀ ರಾಜ್ಯದ ತುಂಬ ಹರಡಿತು.
ಇಷ್ಟು ಪತ್ರ ಬರೆದರೆ ನಮಗೆ ಡಿಲೆವರಿ ಮಾಡುವುದು ಕಷ್ಟ ಎಂದು ಪೋಸ್ಪಿರುಪಿ ಸೋದಿಮಾಮಾ…ಬರೆದರೆ ನಮಗೆ ಡಿಲೆವರಿ ಮಾಡುವುದು ಕಷ್ಟ ಎಂದು ಪೋಸ್ಟಿರುಪಿ ಸೋದಿಮಾಮಾ… ಮದ್ರಾಮಣ್ಣೂರಿಗೆ ಮನವಿ ಪತ್ರ ಕೊಟ್ಟ. ಸೋದಿಮಾಮಾ ಸೆಂಟ್ರಲ್ ಮಂದಿಯನ್ನು ಕಳಿಸಿದರು…
ಬೆಳ್ಳಂಬೆಳಗ್ಗೆ ಲೊಂಡೆನುಮನ ಮನೆ ರೇಡ್ ಮಾಡಲಾಯಿತು…ಒಂದು ಲಾರಿ ತುಂಬ ಲಿಸ್ಟ್ ಬರೆದ ಹಾಳೆಗಳನ್ನು ಜಪ್ತಿ ಮಾಡಿದರು..ಲೊಂಡೆನುಮ ಈಗ ಇಲ್ಲೆ ಬಂದೆ ಎಂದು ಬೀಗರ ಊರು ಸೇರಿದ…
