#RCBvsCSK Archives - Samyukta Karnataka

CSK ಗೆದ್ದರೆ RCBಗೆ ಲಾಟರಿ ಟಾಪ್-2 ಸ್ಥಾನಕ್ಕೆ ಸಿಗುತ್ತಾ ಟಿಕೆಟ್: ಇವತ್ತಿನ ಮ್ಯಾಚ್ ಮೇಲೆ ಆರ್ಸಿಬಿ ಫ್ಯಾನ್ಸ್ ಕಣ್ಣು; ಏನಿದು ಅಸಲಿ ಲೆಕ್ಕಾಚಾರ?
ಐಪಿಎಲ್ 2026 ಈಗ ಅಕ್ಷರಶಃ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಇವತ್ತು ಒಂದು ವಿಚಿತ್ರ ಸನ್ನಿವೇಶ ನಡೆದಿಯುವದಿದೆ ನೋಡಿ. ಸಾಮಾನ್ಯವಾಗಿ ಆರ್‌ಸಿಬಿ ಮತ್ತು ಸಿಎಸ್‌ಕೆ ಅಭಿಮಾನಿಗಳು ಮೈದಾನದಲ್ಲಿ ಕಿತ್ತಾಡಿಕೊಳ್ಳೋದನ್ನ ನಾವು ನೋಡಿದ್ದೇವೆ.

ಆದ್ರೆ ಇವತ್ತು ಮಾತ್ರ ಆರ್‌ಸಿಬಿ ಫ್ಯಾನ್ಸ್ ಎಲ್ಲರೂ ಸಿಎಸ್‌ಕೆ ಗೆಲ್ಲಲಿ ಅಂತ ಹಾರೈಸ್ತಿದ್ದಾರೆ! ಯಾಕೆ ಗೊತ್ತಾ? ಇವತ್ತು ಸಿಎಸ್‌ಕೆ ಗೆದ್ದರೆ ಅದು ಆರ್‌ಸಿಬಿಗೆ ಲಾಟರಿ ಹೊಡೆದಂತೆ! ಅಸಲಿ ಲೆಕ್ಕಾಚಾರ ಏನು ಅಂತ ಹೇಳ್ತೀನಿ ಕೇಳಿ.

ಟಾಪ್-2 ಸ್ಥಾನದ ಮಹತ್ವ: ಆರ್‌ಸಿಬಿ ಈಗಾಗ್ಲೇ ಪ್ಲೇಆಫ್‌ಗೆ ಹೋಗಿರೋ ಏಕೈಕ ತಂಡ ಅನ್ನೋದು ನಮಗೆಲ್ಲಾ ಗೊತ್ತಿದೆ. ಆದ್ರೆ ಬರಿ ಪ್ಲೇಆಫ್ ಹೋದ್ರೆ ಸಾಲದು, ನಮಗೆ ‘ಟಾಪ್-2’ ಸ್ಥಾನ ಬೇಕು. ಯಾಕಂದ್ರೆ ಟಾಪ್-2 ನಲ್ಲಿ ಇದ್ರೆ ನಮಗೆ ಫೈನಲ್‌ಗೆ ಹೋಗೋಕೆ ಎರಡು ಚಾನ್ಸ್ ಸಿಗುತ್ತೆ. ಮೊದಲ ಕ್ವಾಲಿಫೈಯರ್‌ನಲ್ಲಿ ಗೆದ್ದರೆ ನೇರ ಫೈನಲ್, ಸೋತರೂ ಎಲಿಮಿನೇಟರ್‌ನಲ್ಲಿ ಗೆದ್ದ ತಂಡದ ಜೊತೆ ಮತ್ತೊಮ್ಮೆ ಆಡಬಹುದು. ಹಾಗಾಗಿ ಟಾಪ್-2 ಸ್ಥಾನ ಭದ್ರಪಡಿಸಿಕೊಳ್ಳೋದು ಆರ್‌ಸಿಬಿಗೆ ಇವತ್ತಿನ ಅತಿದೊಡ್ಡ ಗುರಿ.

ಇವತ್ತಿನ ಮ್ಯಾಚ್ ಮತ್ತು ಆರ್‌ಸಿಬಿ ಕನೆಕ್ಷನ್: ಈಗ ಅಸಲಿ ವಿಷಯಕ್ಕೆ ಬರೋಣ. ಇವತ್ತು ಚೆನ್ನೈನ ಚೆಪಾಕ್ ಮೈದಾನದಲ್ಲಿ ಸಿಎಸ್‌ಕೆ ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ಮುಖಾಮುಖಿಯಾಗ್ತಿವೆ. ಒಂದು ವೇಳೆ ಇವತ್ತು ಸಿಎಸ್‌ಕೆ ಗೆದ್ದರೆ, ಹೈದರಾಬಾದ್ ಪಾಯಿಂಟ್ಸ್ 14 ರಲ್ಲೇ ಉಳಿಯುತ್ತೆ. ಅವರು ಕೊನೆಯ ಮ್ಯಾಚ್ ಗೆದ್ದರೂ 16 ಪಾಯಿಂಟ್ಸ್‌ಗೆ ಮಾತ್ರ ತಲುಪೋಕೆ ಸಾಧ್ಯ.

ಅವತ್ತು ಏನಾಗುತ್ತೆ ಅಂದ್ರೆ, 18 ಪಾಯಿಂಟ್ಸ್ ಹೊಂದಿರೋ ನಮ್ಮ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಅಧಿಕೃತವಾಗಿ ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನವನ್ನ ಫಿಕ್ಸ್ ಮಾಡಿಕೊಳ್ಳುತ್ತವೆ. ಅಂದ್ರೆ ಆರ್‌ಸಿಬಿ ತನ್ನ ಕೊನೆಯ ಮ್ಯಾಚ್ ಆಡೋ ಮೊದಲೇ ಮೊದಲ ಕ್ವಾಲಿಫೈಯರ್ ಪಂದ್ಯವನ್ನ ಆಡೋದು ಕನ್ಫರ್ಮ್ ಆಗುತ್ತೆ!

ಸಿಎಸ್‌ಕೆ ಸೋತರೆ ಏನಾಗುತ್ತೆ?:  ಒಂದು ವೇಳೆ ಇವತ್ತು ಸನ್‌ರೈಸರ್ಸ್ ಗೆದ್ದುಬಿಟ್ರೆ, ಅವರು 16 ಪಾಯಿಂಟ್‌ಗೆ ಬರ್ತಾರೆ. ಆಗ ಆರ್‌ಸಿಬಿಗೆ ಸ್ವಲ್ಪ ಟೆನ್ಶನ್ ಶುರುವಾಗುತ್ತೆ. ಯಾಕಂದ್ರೆ ಟಾಪ್-2 ನಲ್ಲಿ ಇರೋಕೆ ನಮ್ಮ ಕೊನೆಯ ಲೀಗ್ ಮ್ಯಾಚ್‌ನಲ್ಲಿ ಹೈದರಾಬಾದ್ ವಿರುದ್ಧ ನಾವು ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗುತ್ತೆ. ಹಾಗಾಗಿ ಆ ರಿಸ್ಕ್ ಬೇಡ ಅಂದ್ರೆ ಇವತ್ತು ಸಿಎಸ್‌ಕೆ ಗೆಲ್ಲೋದು ಆರ್‌ಸಿಬಿ ಪಾಲಿಗೆ ದೊಡ್ಡ ಪ್ಲಸ್ ಪಾಯಿಂಟ್.

The post CSK ಗೆದ್ದರೆ RCBಗೆ ಲಾಟರಿ ಟಾಪ್-2 ಸ್ಥಾನಕ್ಕೆ ಸಿಗುತ್ತಾ ಟಿಕೆಟ್: ಇವತ್ತಿನ ಮ್ಯಾಚ್ ಮೇಲೆ ಆರ್ಸಿಬಿ ಫ್ಯಾನ್ಸ್ ಕಣ್ಣು; ಏನಿದು ಅಸಲಿ ಲೆಕ್ಕಾಚಾರ? appeared first on Samyukta Karnataka.

ಆರ್‌ಸಿಬಿ ‘ಟೈಮ್-ಪಾಸ್’ ತಂತ್ರಕ್ಕೆ ರವಿ ಶಾಸ್ತ್ರಿ ಫುಲ್ ಗರಂ: ಸಿಎಸ್‌ಕೆ ಬೌಲರ್‌ಗೆ ಜೈ ಎಂದ ಮಾಜಿ ಕೋಚ್!
ಐಪಿಎಲ್ 2026ರ ಟೂರ್ನಿ ಭರ್ಜರಿಯಾಗಿ ಸಾಗುತ್ತಿದ್ದು, ಮೈದಾನದ ಆಟದಷ್ಟೇ ಕಾಮೆಂಟರಿ ಬಾಕ್ಸ್‌ನ ಮಾತುಗಳು ಕೂಡ ಭಾರೀ ಸದ್ದು ಮಾಡುತ್ತಿವೆ. ಟಿ20 ಕ್ರಿಕೆಟ್‌ನಲ್ಲಿ ಆಟಗಾರರು ಪದೇ ಪದೇ ಸಮಯ ವ್ಯರ್ಥ ಮಾಡುವ ತಂತ್ರಗಳ ಬಗ್ಗೆ ಟೀಂ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ ಅಸಮಾಧಾನ ಹೊರಹಾಕಿದ್ದಾರೆ. ಈ ವಿಚಾರದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ವೃತ್ತಿಪರತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಇತ್ತೀಚೆಗೆ ಸಿಎಸ್‌ಕೆ ಮತ್ತು ಕೆಕೆಆರ್ ನಡುವೆ ರೋಚಕ ಪಂದ್ಯ ನಡೆಯುತ್ತಿತ್ತು. ಈ ವೇಳೆ ಸಿಎಸ್‌ಕೆ ವೇಗಿ ಖಲೀಲ್ ಅಹ್ಮದ್ ಬೌಲಿಂಗ್ ಮಾಡುವಾಗ ಕಾಲಿನ ಸ್ನಾಯು ಸೆಳೆತಕ್ಕೆ ತುತ್ತಾದರು. ಆದ್ರೆ ಮೈದಾನದಲ್ಲೇ ಫಿಸಿಯೋವನ್ನು ಕರೆಸಿ ಪಂದ್ಯವನ್ನು ವಿಳಂಬ ಮಾಡಲಿಲ್ಲ. ಬದಲಾಗಿ ತಕ್ಷಣವೇ ಮೈದಾನದಿಂದ ಹೊರನಡೆದು ಗುರ್ಜಪ್ನೀತ್ ಸಿಂಗ್‌ಗೆ ಬೌಲಿಂಗ್ ಮಾಡಲು ಅವಕಾಶ ಮಾಡಿಕೊಟ್ಟರು.

ಕಾಮೆಂಟರಿ ಮಾಡುತ್ತಿದ್ದ ರವಿ ಶಾಸ್ತ್ರಿ ಖಲೀಲ್ ಈ ನಡೆಯನ್ನು ಮೆಚ್ಚಿಕೊಂಡರು. “ಸುಮ್ಮನೆ 10 ನಿಮಿಷ ಮೈದಾನದಲ್ಲಿ ಸಮಯ ವ್ಯರ್ಥ ಮಾಡುವ ಬದಲು, ಹೊರನಡೆದು ಚಿಕಿತ್ಸೆ ಪಡೆದಿದ್ದು ಅತ್ಯುತ್ತಮ ನಿರ್ಧಾರ” ಎಂದರು.

ಇದೇ ವೇಳೆ ಶಾಸ್ತ್ರಿ, ಆರ್‌ಸಿಬಿ ತಂಡದ ವಿರುದ್ಧ ಚಾಟಿ ಬೀಸಿದರು. ಇತ್ತೀಚೆಗೆ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿಯ ವೇಗಿ ರಾಸಿಖ್ ದಾರ್, ಒಂದೇ ಓವರ್‌ನಲ್ಲಿ ಪದೇ ಪದೇ ಫಿಸಿಯೋವನ್ನು ಮೈದಾನಕ್ಕೆ ಕರೆಸಿಕೊಂಡಿದ್ದರು. ಈ ಕಿರಿಕಿರಿಯಿಂದಾಗಿ ಆ ಟಿ20 ಪಂದ್ಯ ಮುಗಿಯಲು ಬರೋಬ್ಬರಿ ನಾಲ್ಕೂವರೆ ಗಂಟೆಗಳೇ ಬೇಕಾಯಿತು. ಆ ಸಂದರ್ಭದಲ್ಲಿ ದಂತಕಥೆ ಸುನಿಲ್ ಗವಾಸ್ಕರ್ ಕೂಡ, “ಗಾಯವಾಗಿದ್ದರೆ ಮೈದಾನದಿಂದ ಹೊರಹೋಗಿ, ಪದೇ ಪದೇ ಫಿಸಿಯೋ ಬರೋದು ಸರಿಯಲ್ಲ” ಎಂದು ಲೈವ್ ಕಾಮೆಂಟರಿಯಲ್ಲೇ ಕಿಡಿಕಾರಿದ್ದರು.

ಸಮಯ ವ್ಯರ್ಥ ಮಾಡಿದರೆ ದಂಡ: ಟಿ20 ಕ್ರಿಕೆಟ್‌ನ ಅಸಲಿ ಮಜಾವೇ ಅದರ ವೇಗ. ಆದ್ರೆ ಆಟಗಾರರು ಪದೇ ಪದೇ ಆಟ ನಿಲ್ಲಿಸುವುದರಿಂದ ವೀಕ್ಷಕರಿಗೆ ಬೇಸರವಾಗುತ್ತದೆ ಹಾಗೂ ಪಂದ್ಯದ ಲಯ ತಪ್ಪುತ್ತದೆ. ಐಪಿಎಲ್ ನಿಯಮಗಳ ಪ್ರಕಾರ, ನಿಗದಿತ ಸಮಯದೊಳಗೆ (90 ನಿಮಿಷ) ಓವರ್‌ಗಳನ್ನು ಪೂರ್ಣಗೊಳಿಸದಿದ್ದರೆ ತಂಡದ ನಾಯಕನಿಗೆ ದಂಡ ಹಾಗೂ ‘ಓವರ್-ರೇಟ್ ಪೆನಾಲ್ಟಿ’ (30 ಯಾರ್ಡ್ ವೃತ್ತದ ಹೊರಗೆ ಒಬ್ಬ ಫೀಲ್ಡರ್ ಕಡಿಮೆ ಇಡುವ ಶಿಕ್ಷೆ) ಬೀಳುತ್ತದೆ. ಗಾಯದ ಸಮಸ್ಯೆಯನ್ನು ಸಿಎಸ್‌ಕೆ ನಿಭಾಯಿಸಿದ ರೀತಿ ಇತರ ಫ್ರಾಂಚೈಸಿಗಳಿಗೆ ಮಾದರಿಯಾಗಿದ್ದು, ಟೈಮ್-ಪಾಸ್ ಮಾಡುವ ತಂಡಗಳ ವಿರುದ್ಧ ಐಪಿಎಲ್ ಆಡಳಿತ ಮಂಡಳಿ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೆ ತರಬೇಕೆಂಬ ಕೂಗು ಈಗ ಜೋರಾಗಿದೆ.

The post ಆರ್‌ಸಿಬಿ ‘ಟೈಮ್-ಪಾಸ್’ ತಂತ್ರಕ್ಕೆ ರವಿ ಶಾಸ್ತ್ರಿ ಫುಲ್ ಗರಂ: ಸಿಎಸ್‌ಕೆ ಬೌಲರ್‌ಗೆ ಜೈ ಎಂದ ಮಾಜಿ ಕೋಚ್! appeared first on Samyukta Karnataka.

RCB vs CSK ಮ್ಯಾಚ್; ಇವತ್ತು ಗೆಲ್ಲೋದು RCBನಾ? ಚೆನ್ನೈ ಸೂಪರ್ ಕಿಂಗ್ಸ್‌ಗೆ ಮಾಡು ಇಲ್ಲವೇ ಮಡಿ ಹೋರಾಟ
ಕ್ರಿಕೆಟ್ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು, ವಿಶೇಷವಾಗಿ ನವ ಯುವಕರಿಗೆ ಮತ್ತು ಯುವತಿಯರಿಗೆ. ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ RCB vs CSK ಪಂದ್ಯವನ್ನು ವೀಕ್ಷಿಸಲು ಕೋಟ್ಯಂತರ ಕ್ರಿಕೆಟ್ ಅಭಿಮಾನಗಳು ಕಾಯುತ್ತಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಎರಡು ತಂಡಗಳು ಮುಖಾಮುಖಿಯಾದ್ರೆ ಸಾಕು ಅಭಿಮಾನಿಗಳಿಗೆ ಹಬ್ಬ ಅಂತಲೇ ಹೇಳಬಹುದು. ಸಮಾಜಿಕ ಜಾಲತಾಣದಲ್ಲಂತೂ ಮಿನಿ ಯುದ್ಧ ಶುರುವಾಗಿರುತ್ತೆ ಅಂದ್ರೆ ತಪ್ಪಾಗಲಾರದು.

ಇನ್ನು ಐಪಿಎಲ್ 2026ರ ಆವೃತ್ತಿಯಲ್ಲಿ RCB ಮೊದಲ ಪಂದ್ಯದಲ್ಲಿ ಗೆದ್ದು ಬಿಗಿದೆ. ಎರಡನೇ ಪಂದ್ಯವನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಆದ್ರೆ CSK ತಂಡ ಮಾತ್ರ ಎರಡು ಪಂದ್ಯಗಳಲ್ಲಿ ಸೋತಿದ್ದಾರೆ. RCB ವಿರುದ್ಧ ಗೆಲ್ಲುವುದಕ್ಕೆ ಸಕತ್ ಪ್ಲಾನ್ ಮಾಡಿಕೊಂಡಿದ್ದಾರೆ. CSK ತಂಡ ತನ್ನ ಮೊದಲ ಎರಡು ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದೆ. ಇದರಿಂದ ತಂಡದಲ್ಲಿನ ಆತ್ಮವಿಶ್ವಾಸ ಕಡಿಮೆಯಾಗಿದೆ ಎನ್ನುವಂತೆ ಕಾಣುತ್ತಿದ್ದರು, ಮೂರನೇ ಪಂದ್ಯದಲ್ಲಿ ಗೆದ್ದೇ ಗೆಲ್ಲುತ್ತೇವೆ ನಿರೀಕ್ಷೆಯೊಂದಿಗೆ ಕಣಕ್ಕಳಿದಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೊದಲ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ 8 ವಿಕೆಟ್‌ಗಳಿಂದ ಮತ್ತು ಎರಡನೇ ಪಂಜಾಬ್ ಕಿಂಗ್ಸ್ ವಿರುದ್ಧ 5 ವಿಕೆಟ್‌ಗಳಿಂದ ಸೋತಿತ್ತು. ತಂಡದಲ್ಲಿ ಬಹು ನಿರೀಕ್ಷಿತ ಆಟಗಾರರಾದ ಸಂಜು ಸ್ಯಾಮ್ಸನ್ ಮತ್ತು ರುತುರಾಜ್ ಗಾಯಕ್ವಾಡ್ ಕಳಪೆ ಪ್ರದರ್ಶನ ನೀಡಿದ್ದರು. ಶಿವಂ ದುಬೆ, ಆಯುಷ್ ಮಾತ್ರೆ ಮತ್ತು ಸರ್ಫರಾಜ್ ಖಾನ್ ಸ್ವಲ್ಪ ಮಟ್ಟಿಗೆ ಉತ್ತಮ ಪ್ರದರ್ಶನ ಆಟಗಳನ್ನು ಆಡಿದ್ದಾರೆ.

ಚೆನ್ನೈ ತಂಡಕ್ಕೆ ಈ ಪಂದ್ಯ ಗೆಲ್ಲಲ್ಲೇ ಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದ್ದು, ಈ ಹಿನ್ನೆಲೆ ತಂಡದಲ್ಲಿ ಬದಲಾವಣೆಗಳನ್ನು ಮಾಡುವ ನಿರೀಕ್ಷೆಯಿದೆ. ಮೊದಲ ಎರಡು ಪಂದ್ಯಗಳಿಂದ ಹೊರಗುಳಿದಿದ್ದ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ಮನ್ ಡೆವಾಲ್ಡ್ ಬ್ರೆವಿಸ್ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ನಿರೀಕ್ಷೆಯಿದೆ. ಐಪಿಎಲ್ ಇತಿಹಾಸದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ 35 ಪಂದ್ಯಗಳು ನಡೆದಿವೆ. ಈ ಪೈಕಿ, ಚೆನ್ನೈ ಸೂಪರ್ ಕಿಂಗ್ಸ್ ಗರಿಷ್ಠ 21 ಪಂದ್ಯಗಳನ್ನು ಗೆದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು 13 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ.

ಒಟ್ಟಿನಲ್ಲಿ ಇಂದು ನಡೆಯಲಿರುವ RCB vs CSK ಪಂದ್ಯದ ಮೇಲೆ ಅಭಿಮಾನಿಗಳ ಚಿತ್ತ. ಇಂದಿನ ಪಂದ್ಯದಲ್ಲಿ ಗೆಲುವು ಯಾರ ಪಾಲಾಗುತ್ತೆ ಎನ್ನುವುದು ಕಾದು ನೋಡಬೇಕಿದೆ.

The post RCB vs CSK ಮ್ಯಾಚ್; ಇವತ್ತು ಗೆಲ್ಲೋದು RCBನಾ? ಚೆನ್ನೈ ಸೂಪರ್ ಕಿಂಗ್ಸ್‌ಗೆ ಮಾಡು ಇಲ್ಲವೇ ಮಡಿ ಹೋರಾಟ appeared first on Samyukta Karnataka.

RCB ಮ್ಯಾಚ್‌ಗೆ ಹೊಸ ರೂಲ್ಸ್; Ticket ಇಲ್ಲಾ? ಸ್ಟೇಡಿಯಂಗೆ ಬರಬೇಡಿ! ಅಭಿಮಾನಿಗಳಿಗೆ ಖಡಕ್ ಸೂಚನೆ.
ಬೆಂಗಳೂರು: ನಾಳೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿರುವ ಐಪಿಎಲ್ ಪಂದ್ಯಕ್ಕಾಗಿ ಬೆಂಗಳೂರಿನ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಅಭಿಮಾನಿಗಳಿಗೆ ಮಹತ್ವದ ಎಚ್ಚರಿಕೆ ನೀಡಿದ್ದಾರೆ. ಟಿಕೆಟ್ ಇಲ್ಲದವರು ಕ್ರೀಡಾಂಗಣದ ಬಳಿ ಬರಬಾರದು. ಅದಾಗಿಯೂ ಬಂದಲ್ಲಿ, ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಈ ಹಿಂದೆ ಮಾರ್ಚ್ 28ರಂದು ಬೆಂಗಳೂರಿನಲ್ಲಿ ಮೊದಲ ಐಪಿಎಲ್ ಪಂದ್ಯ ನಡೆದ ವೇಳೆ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ನಾಳೆ ನಡೆಯಲಿರುವ ಪಂದ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸಲಾಗಿದೆ. ಕಳೆದ ಪಂದ್ಯದಲ್ಲಿ ಆಗಮನ ಮತ್ತು ನಿರ್ಗಮನ ಸೇರಿ ಸುಮಾರು 32 ಸಾವಿರ ಜನ ಮೆಟ್ರೋ ರೈಲುಗಳಲ್ಲಿ ಪ್ರಯಾಣಿಸಿದ್ದರು. ಹೀಗಾಗಿ, ನಾಳೆ ಪಂದ್ಯವನ್ನು ವೀಕ್ಷಿಸಲು ಬರಲಿರುವ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೆಟ್ರೋ ಮತ್ತು ಬಿಎಂಟಿಸಿ ಬಸ್ ಸೇವೆಗಳನ್ನು ಬಳಸಲು ಪೊಲೀಸ್ ಇಲಾಖೆ ಮನವಿ ಮಾಡಿದೆ.

ಪೂರ್ವಭಾವಿಯಾಗಿ ಸಂಭವಿಸಿದ ಘಟನೆಗಳ ನಡುವೆ ಕೆಲವರ ಮೊಬೈಲ್ ಕಳ್ಳತನ ಕೂಡ ಸೇರಿದೆ. ಕಳೆದ ಪಂದ್ಯದ ವೇಳೆ ಸುಮಾರು 71 ಮೊಬೈಲ್ ವಶಕ್ಕೆ ತೆಗೆದುಕೊಳ್ಳಲಾಗಿದೆ ಮತ್ತು ಬಹುತೇಕ ಕೃತ್ಯ ಹೊರ ರಾಜ್ಯದಿಂದ ಬಂದ ವ್ಯಕ್ತಿಗಳಿಂದ ನಡೆದಿದ್ದರಿಂದ, ಅಭಿಮಾನಿಗಳಿಗೆ ತಮ್ಮ ವೈಯಕ್ತಿಕ ವಸ್ತುಗಳು ಮತ್ತು ಮೊಬೈಲ್‌ಗಳು ಸುರಕ್ಷಿತವಾಗಿರಲು ಎಚ್ಚರಿಕೆ ನೀಡಲಾಗಿದೆ.

ಇದಲ್ಲದೆ, ನಾಳೆ ಪಂದ್ಯಾವಳಿಯ ಪ್ರಯುಕ್ತ ಮೆಟ್ರೋ ರೈಲುಗಳ ಸಂಚಾರ ಸಮಯವನ್ನು ವಿಸ್ತರಿಸಲಾಗಿದೆ. ಬಿಎಂಆರ್‌ಸಿಎಲ್ ಪ್ರಕಟಣೆ ಪ್ರಕಾರ, ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ಮೆಟ್ರೋ ಸೇವೆ ರಾತ್ರಿ 11 ಗಂಟೆಯಿಂದ ಮುಂಜಾನೆ 2 ಗಂಟೆಯವರೆಗೆ ನಿರ್ವಹಿಸಲಿದ್ದು, ವೈಟ್‌ಫೀಲ್ಡ್ (ಕಾಡುಗೋಡಿ) ಯಿಂದ 12:30 AM, ಚೆಲ್ಲಘಟ್ಟದಿಂದ 12:45 AM, ರೇಷ್ಮೆ ಸಂಸ್ಥೆ ಮತ್ತು ಮಾದಾವರದಿಂದ 12:45 AM, ಬೊಮ್ಮಸಂದ್ರದಿಂದ 12:30 AM, ಆರ್.ವಿ. ರಸ್ತೆಯಿಂದ 2:00 AM, ನಾಡಪ್ರಭು ಕೆಂಪೇಗೌಡ ನಿಲ್ದಾಣ-ಮಜೆಸ್ಟಿಕ್ ನಿಂದ ನಾಲ್ಕು ದಿಕ್ಕುಗಳಿಗೆ 1:30ಕ್ಕೆ ಕೊನೆಯ ರೈಲು ಹೊರಡಲಿದೆ.

ಪೊಲೀಸ್ ಇಲಾಖೆ ಅಭಿಮಾನಿಗಳಿಗೆ ಸುಲಭ, ಸುರಕ್ಷಿತ ಹಾಗೂ ಅಹಿತಕರ ಘಟನೆಗಳಿಂದ ಮುಕ್ತ ಪ್ರಯಾಣಕ್ಕೆ ಈ ಎಲ್ಲ ಕ್ರಮಗಳನ್ನು ಕೈಗೊಂಡಿದ್ದು, ಅವರ ಸೂಚನೆಗಳನ್ನು ಪಾಲಿಸಲು ಮನವಿ ಮಾಡಿದ್ದಾರೆ.

The post RCB ಮ್ಯಾಚ್‌ಗೆ ಹೊಸ ರೂಲ್ಸ್; Ticket ಇಲ್ಲಾ? ಸ್ಟೇಡಿಯಂಗೆ ಬರಬೇಡಿ! ಅಭಿಮಾನಿಗಳಿಗೆ ಖಡಕ್ ಸೂಚನೆ. appeared first on Samyukta Karnataka.