#MatchDay Archives - Samyukta Karnataka

CSK ಗೆದ್ದರೆ RCBಗೆ ಲಾಟರಿ ಟಾಪ್-2 ಸ್ಥಾನಕ್ಕೆ ಸಿಗುತ್ತಾ ಟಿಕೆಟ್: ಇವತ್ತಿನ ಮ್ಯಾಚ್ ಮೇಲೆ ಆರ್ಸಿಬಿ ಫ್ಯಾನ್ಸ್ ಕಣ್ಣು; ಏನಿದು ಅಸಲಿ ಲೆಕ್ಕಾಚಾರ?
ಐಪಿಎಲ್ 2026 ಈಗ ಅಕ್ಷರಶಃ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಇವತ್ತು ಒಂದು ವಿಚಿತ್ರ ಸನ್ನಿವೇಶ ನಡೆದಿಯುವದಿದೆ ನೋಡಿ. ಸಾಮಾನ್ಯವಾಗಿ ಆರ್‌ಸಿಬಿ ಮತ್ತು ಸಿಎಸ್‌ಕೆ ಅಭಿಮಾನಿಗಳು ಮೈದಾನದಲ್ಲಿ ಕಿತ್ತಾಡಿಕೊಳ್ಳೋದನ್ನ ನಾವು ನೋಡಿದ್ದೇವೆ.

ಆದ್ರೆ ಇವತ್ತು ಮಾತ್ರ ಆರ್‌ಸಿಬಿ ಫ್ಯಾನ್ಸ್ ಎಲ್ಲರೂ ಸಿಎಸ್‌ಕೆ ಗೆಲ್ಲಲಿ ಅಂತ ಹಾರೈಸ್ತಿದ್ದಾರೆ! ಯಾಕೆ ಗೊತ್ತಾ? ಇವತ್ತು ಸಿಎಸ್‌ಕೆ ಗೆದ್ದರೆ ಅದು ಆರ್‌ಸಿಬಿಗೆ ಲಾಟರಿ ಹೊಡೆದಂತೆ! ಅಸಲಿ ಲೆಕ್ಕಾಚಾರ ಏನು ಅಂತ ಹೇಳ್ತೀನಿ ಕೇಳಿ.

ಟಾಪ್-2 ಸ್ಥಾನದ ಮಹತ್ವ: ಆರ್‌ಸಿಬಿ ಈಗಾಗ್ಲೇ ಪ್ಲೇಆಫ್‌ಗೆ ಹೋಗಿರೋ ಏಕೈಕ ತಂಡ ಅನ್ನೋದು ನಮಗೆಲ್ಲಾ ಗೊತ್ತಿದೆ. ಆದ್ರೆ ಬರಿ ಪ್ಲೇಆಫ್ ಹೋದ್ರೆ ಸಾಲದು, ನಮಗೆ ‘ಟಾಪ್-2’ ಸ್ಥಾನ ಬೇಕು. ಯಾಕಂದ್ರೆ ಟಾಪ್-2 ನಲ್ಲಿ ಇದ್ರೆ ನಮಗೆ ಫೈನಲ್‌ಗೆ ಹೋಗೋಕೆ ಎರಡು ಚಾನ್ಸ್ ಸಿಗುತ್ತೆ. ಮೊದಲ ಕ್ವಾಲಿಫೈಯರ್‌ನಲ್ಲಿ ಗೆದ್ದರೆ ನೇರ ಫೈನಲ್, ಸೋತರೂ ಎಲಿಮಿನೇಟರ್‌ನಲ್ಲಿ ಗೆದ್ದ ತಂಡದ ಜೊತೆ ಮತ್ತೊಮ್ಮೆ ಆಡಬಹುದು. ಹಾಗಾಗಿ ಟಾಪ್-2 ಸ್ಥಾನ ಭದ್ರಪಡಿಸಿಕೊಳ್ಳೋದು ಆರ್‌ಸಿಬಿಗೆ ಇವತ್ತಿನ ಅತಿದೊಡ್ಡ ಗುರಿ.

ಇವತ್ತಿನ ಮ್ಯಾಚ್ ಮತ್ತು ಆರ್‌ಸಿಬಿ ಕನೆಕ್ಷನ್: ಈಗ ಅಸಲಿ ವಿಷಯಕ್ಕೆ ಬರೋಣ. ಇವತ್ತು ಚೆನ್ನೈನ ಚೆಪಾಕ್ ಮೈದಾನದಲ್ಲಿ ಸಿಎಸ್‌ಕೆ ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ಮುಖಾಮುಖಿಯಾಗ್ತಿವೆ. ಒಂದು ವೇಳೆ ಇವತ್ತು ಸಿಎಸ್‌ಕೆ ಗೆದ್ದರೆ, ಹೈದರಾಬಾದ್ ಪಾಯಿಂಟ್ಸ್ 14 ರಲ್ಲೇ ಉಳಿಯುತ್ತೆ. ಅವರು ಕೊನೆಯ ಮ್ಯಾಚ್ ಗೆದ್ದರೂ 16 ಪಾಯಿಂಟ್ಸ್‌ಗೆ ಮಾತ್ರ ತಲುಪೋಕೆ ಸಾಧ್ಯ.

ಅವತ್ತು ಏನಾಗುತ್ತೆ ಅಂದ್ರೆ, 18 ಪಾಯಿಂಟ್ಸ್ ಹೊಂದಿರೋ ನಮ್ಮ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಅಧಿಕೃತವಾಗಿ ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನವನ್ನ ಫಿಕ್ಸ್ ಮಾಡಿಕೊಳ್ಳುತ್ತವೆ. ಅಂದ್ರೆ ಆರ್‌ಸಿಬಿ ತನ್ನ ಕೊನೆಯ ಮ್ಯಾಚ್ ಆಡೋ ಮೊದಲೇ ಮೊದಲ ಕ್ವಾಲಿಫೈಯರ್ ಪಂದ್ಯವನ್ನ ಆಡೋದು ಕನ್ಫರ್ಮ್ ಆಗುತ್ತೆ!

ಸಿಎಸ್‌ಕೆ ಸೋತರೆ ಏನಾಗುತ್ತೆ?:  ಒಂದು ವೇಳೆ ಇವತ್ತು ಸನ್‌ರೈಸರ್ಸ್ ಗೆದ್ದುಬಿಟ್ರೆ, ಅವರು 16 ಪಾಯಿಂಟ್‌ಗೆ ಬರ್ತಾರೆ. ಆಗ ಆರ್‌ಸಿಬಿಗೆ ಸ್ವಲ್ಪ ಟೆನ್ಶನ್ ಶುರುವಾಗುತ್ತೆ. ಯಾಕಂದ್ರೆ ಟಾಪ್-2 ನಲ್ಲಿ ಇರೋಕೆ ನಮ್ಮ ಕೊನೆಯ ಲೀಗ್ ಮ್ಯಾಚ್‌ನಲ್ಲಿ ಹೈದರಾಬಾದ್ ವಿರುದ್ಧ ನಾವು ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗುತ್ತೆ. ಹಾಗಾಗಿ ಆ ರಿಸ್ಕ್ ಬೇಡ ಅಂದ್ರೆ ಇವತ್ತು ಸಿಎಸ್‌ಕೆ ಗೆಲ್ಲೋದು ಆರ್‌ಸಿಬಿ ಪಾಲಿಗೆ ದೊಡ್ಡ ಪ್ಲಸ್ ಪಾಯಿಂಟ್.

The post CSK ಗೆದ್ದರೆ RCBಗೆ ಲಾಟರಿ ಟಾಪ್-2 ಸ್ಥಾನಕ್ಕೆ ಸಿಗುತ್ತಾ ಟಿಕೆಟ್: ಇವತ್ತಿನ ಮ್ಯಾಚ್ ಮೇಲೆ ಆರ್ಸಿಬಿ ಫ್ಯಾನ್ಸ್ ಕಣ್ಣು; ಏನಿದು ಅಸಲಿ ಲೆಕ್ಕಾಚಾರ? appeared first on Samyukta Karnataka.

RCB vs MI; ಬ್ಯಾಕ್-ಟು-ಬ್ಯಾಕ್ ಪಂದ್ಯ: ಸುಸ್ತಾಗಿರುವ ಬೆಂಗಳೂರು ಪಡೆಗೆ ಹಾರ್ದಿಕ್ ಪಾಂಡ್ಯ ಸವಾಲ್!
ಇಂಡಿಯನ್ ಪ್ರೀಮಿಯರ್ ಲೀಗ್‌ನ 19ನೇ ಸೀಸನ್ ಈಗ ಅತ್ಯಂತ ರೋಚಕ ಘಟ್ಟಕ್ಕೆ ಬಂದು ನಿಂತಿದೆ. ಕ್ರಿಕೆಟ್ ಲೋಕದ ಇಬ್ಬರು ದೈತ್ಯರು, ಅಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಭಾನುವಾರ ನಡೆಯಲಿರುವ ವಾಂಖೆಡೆ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿವೆ. ವಿಶೇಷವೆಂದರೆ, ಈ ಎರಡೂ ತಂಡಗಳು ತಮ್ಮ ಕಳೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತು ಸೋಲಿನ ಕಹಿಯುಂಡಿವೆ. ಹೀಗಾಗಿ, ಈ ಪಂದ್ಯ ಕೇವಲ ಆಟವಲ್ಲ, ಗೆಲುವಿನ ಲಯಕ್ಕೆ ಮರಳಲು ನಡೆಯುತ್ತಿರುವ ಬದುಕು-ಸಾವಿನ ಹೋರಾಟ ಎನ್ನಬಹುದು.

ಆರ್​ಸಿಬಿ ಈ ಸೀಸನ್‌ನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಎರಡು ಜಯ ದಾಖಲಿಸಿ ಉತ್ತಮ ಆರಂಭವನ್ನೇ ಪಡೆದಿತ್ತು. ಮೊದಲ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿದ್ದ ಬೆಂಗಳೂರು, ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಜಯ ದಾಖಲಿಸಿ ಬೀಗಿತ್ತು. ಆದರೆ, ಗುವಾಹಟಿಯಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯ ತಂಡಕ್ಕೆ ದೊಡ್ಡ ಆಘಾತ ನೀಡಿತು. ಆ ಪಂದ್ಯದಲ್ಲಿ 201 ರನ್ ಗಳಿಸಿದರೂ ಸಹ, ರಾಜಸ್ಥಾನ್ ಬ್ಯಾಟರ್‌ಗಳ ಅಬ್ಬರಕ್ಕೆ ಆರ್​ಸಿಬಿ ಬೌಲರ್‌ಗಳು ತತ್ತರಿಸಿದರು. ಕೇವಲ 18 ಓವರ್‌ಗಳಲ್ಲಿ ಆ ಗುರಿ ತಲುಪಿದ ರಾಜಸ್ಥಾನ್, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಈಗ ಆರ್​ಸಿಬಿ ತಂಡಕ್ಕೆ ದೊಡ್ಡ ಸವಾಲೆಂದರೆ ಸಮಯದ ಅಭಾವ. ರಾಜಸ್ಥಾನ್ ವಿರುದ್ಧದ ಪಂದ್ಯ ಮುಗಿಸಿ ಮುಂಬೈಗೆ ಪ್ರಯಾಣಿಸಿರುವ ಆರ್ಸಿಬಿಗೆ ಅಭ್ಯಾಸ ನಡೆಸಲು ಸಿಕ್ಕಿದ್ದು ಕೇವಲ ಒಂದು ದಿನ ಮಾತ್ರ. ಬ್ಯಾಕ್-ಟು-ಬ್ಯಾಕ್ ಪಂದ್ಯಗಳ ಒತ್ತಡದ ನಡುವೆ ರಜತ್ ಪಾಟಿದಾರ್ ನೇತೃತ್ವದ ತಂಡ ಯಾವ ರೀತಿ ಚೇತರಿಸಿಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ. ಮತ್ತೊಂದೆಡೆ ಮುಂಬೈ ಇಂಡಿಯನ್ಸ್ ಕೂಡ ರಾಜಸ್ಥಾನ್ ವಿರುದ್ಧ 27 ರನ್‌ಗಳಿಂದ ಸೋತ ನೋವಿನಲ್ಲಿದೆ. ಹಾರ್ದಿಕ್ ಪಾಂಡ್ಯ ಸಾರಥ್ಯದ ಮುಂಬೈ ಪಡೆಗೆ ಇದು ತವರು ಮೈದಾನವಾಗಿರುವುದರಿಂದ ಅವರಿಗೆ ಇಲ್ಲಿನ ಪಿಚ್‌ನ ಸಂಪೂರ್ಣ ಅರಿವಿದೆ.

ಎರಡೂ ತಂಡಗಳ ಬಲಾಬಲವನ್ನು ನೋಡುವುದಾದರೆ, ಮುಂಬೈ ತಂಡದಲ್ಲಿ ರೋಹಿತ್ ಶರ್ಮಾ, ಸೂರ್ಯಕುಮಾರ್ ಮತ್ತು ಬುಮ್ರಾ ಅವರಂತಹ ಅನುಭವಿಗಳ ದಂಡೇ ಇದೆ. ಇತ್ತ ಆರ್​ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್ ಮತ್ತು ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ಅವರ ಬಲವಿದೆ. ಒಟ್ಟಾರೆಯಾಗಿ ಹೇಳುವುದಾದರೆ, ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತಿರುವ ಈ ಎರಡು ಬಲಿಷ್ಠ ತಂಡಗಳಲ್ಲಿ ಯಾರು ಮೊದಲು ಚೇತರಿಸಿಕೊಂಡು ಅಂಕಪಟ್ಟಿಯಲ್ಲಿ ಮೇಲೆರುತ್ತಾರೆ ಎಂಬುದು ನಾಳೆಯ ಪಂದ್ಯದ ನಂತರವೇ ನಿರ್ಧಾರವಾಗಲಿದೆ. ವಾಂಖೆಡೆಯಲ್ಲಿ ರನ್ ಮಳೆ ಸುರಿಯುವುದಂತೂ ಖಚಿತ!

The post RCB vs MI; ಬ್ಯಾಕ್-ಟು-ಬ್ಯಾಕ್ ಪಂದ್ಯ: ಸುಸ್ತಾಗಿರುವ ಬೆಂಗಳೂರು ಪಡೆಗೆ ಹಾರ್ದಿಕ್ ಪಾಂಡ್ಯ ಸವಾಲ್! appeared first on Samyukta Karnataka.

RCB vs CSK ಮ್ಯಾಚ್; ಇವತ್ತು ಗೆಲ್ಲೋದು RCBನಾ? ಚೆನ್ನೈ ಸೂಪರ್ ಕಿಂಗ್ಸ್‌ಗೆ ಮಾಡು ಇಲ್ಲವೇ ಮಡಿ ಹೋರಾಟ
ಕ್ರಿಕೆಟ್ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು, ವಿಶೇಷವಾಗಿ ನವ ಯುವಕರಿಗೆ ಮತ್ತು ಯುವತಿಯರಿಗೆ. ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ RCB vs CSK ಪಂದ್ಯವನ್ನು ವೀಕ್ಷಿಸಲು ಕೋಟ್ಯಂತರ ಕ್ರಿಕೆಟ್ ಅಭಿಮಾನಗಳು ಕಾಯುತ್ತಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಎರಡು ತಂಡಗಳು ಮುಖಾಮುಖಿಯಾದ್ರೆ ಸಾಕು ಅಭಿಮಾನಿಗಳಿಗೆ ಹಬ್ಬ ಅಂತಲೇ ಹೇಳಬಹುದು. ಸಮಾಜಿಕ ಜಾಲತಾಣದಲ್ಲಂತೂ ಮಿನಿ ಯುದ್ಧ ಶುರುವಾಗಿರುತ್ತೆ ಅಂದ್ರೆ ತಪ್ಪಾಗಲಾರದು.

ಇನ್ನು ಐಪಿಎಲ್ 2026ರ ಆವೃತ್ತಿಯಲ್ಲಿ RCB ಮೊದಲ ಪಂದ್ಯದಲ್ಲಿ ಗೆದ್ದು ಬಿಗಿದೆ. ಎರಡನೇ ಪಂದ್ಯವನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಆದ್ರೆ CSK ತಂಡ ಮಾತ್ರ ಎರಡು ಪಂದ್ಯಗಳಲ್ಲಿ ಸೋತಿದ್ದಾರೆ. RCB ವಿರುದ್ಧ ಗೆಲ್ಲುವುದಕ್ಕೆ ಸಕತ್ ಪ್ಲಾನ್ ಮಾಡಿಕೊಂಡಿದ್ದಾರೆ. CSK ತಂಡ ತನ್ನ ಮೊದಲ ಎರಡು ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದೆ. ಇದರಿಂದ ತಂಡದಲ್ಲಿನ ಆತ್ಮವಿಶ್ವಾಸ ಕಡಿಮೆಯಾಗಿದೆ ಎನ್ನುವಂತೆ ಕಾಣುತ್ತಿದ್ದರು, ಮೂರನೇ ಪಂದ್ಯದಲ್ಲಿ ಗೆದ್ದೇ ಗೆಲ್ಲುತ್ತೇವೆ ನಿರೀಕ್ಷೆಯೊಂದಿಗೆ ಕಣಕ್ಕಳಿದಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೊದಲ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ 8 ವಿಕೆಟ್‌ಗಳಿಂದ ಮತ್ತು ಎರಡನೇ ಪಂಜಾಬ್ ಕಿಂಗ್ಸ್ ವಿರುದ್ಧ 5 ವಿಕೆಟ್‌ಗಳಿಂದ ಸೋತಿತ್ತು. ತಂಡದಲ್ಲಿ ಬಹು ನಿರೀಕ್ಷಿತ ಆಟಗಾರರಾದ ಸಂಜು ಸ್ಯಾಮ್ಸನ್ ಮತ್ತು ರುತುರಾಜ್ ಗಾಯಕ್ವಾಡ್ ಕಳಪೆ ಪ್ರದರ್ಶನ ನೀಡಿದ್ದರು. ಶಿವಂ ದುಬೆ, ಆಯುಷ್ ಮಾತ್ರೆ ಮತ್ತು ಸರ್ಫರಾಜ್ ಖಾನ್ ಸ್ವಲ್ಪ ಮಟ್ಟಿಗೆ ಉತ್ತಮ ಪ್ರದರ್ಶನ ಆಟಗಳನ್ನು ಆಡಿದ್ದಾರೆ.

ಚೆನ್ನೈ ತಂಡಕ್ಕೆ ಈ ಪಂದ್ಯ ಗೆಲ್ಲಲ್ಲೇ ಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದ್ದು, ಈ ಹಿನ್ನೆಲೆ ತಂಡದಲ್ಲಿ ಬದಲಾವಣೆಗಳನ್ನು ಮಾಡುವ ನಿರೀಕ್ಷೆಯಿದೆ. ಮೊದಲ ಎರಡು ಪಂದ್ಯಗಳಿಂದ ಹೊರಗುಳಿದಿದ್ದ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ಮನ್ ಡೆವಾಲ್ಡ್ ಬ್ರೆವಿಸ್ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ನಿರೀಕ್ಷೆಯಿದೆ. ಐಪಿಎಲ್ ಇತಿಹಾಸದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ 35 ಪಂದ್ಯಗಳು ನಡೆದಿವೆ. ಈ ಪೈಕಿ, ಚೆನ್ನೈ ಸೂಪರ್ ಕಿಂಗ್ಸ್ ಗರಿಷ್ಠ 21 ಪಂದ್ಯಗಳನ್ನು ಗೆದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು 13 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ.

ಒಟ್ಟಿನಲ್ಲಿ ಇಂದು ನಡೆಯಲಿರುವ RCB vs CSK ಪಂದ್ಯದ ಮೇಲೆ ಅಭಿಮಾನಿಗಳ ಚಿತ್ತ. ಇಂದಿನ ಪಂದ್ಯದಲ್ಲಿ ಗೆಲುವು ಯಾರ ಪಾಲಾಗುತ್ತೆ ಎನ್ನುವುದು ಕಾದು ನೋಡಬೇಕಿದೆ.

The post RCB vs CSK ಮ್ಯಾಚ್; ಇವತ್ತು ಗೆಲ್ಲೋದು RCBನಾ? ಚೆನ್ನೈ ಸೂಪರ್ ಕಿಂಗ್ಸ್‌ಗೆ ಮಾಡು ಇಲ್ಲವೇ ಮಡಿ ಹೋರಾಟ appeared first on Samyukta Karnataka.